ದರ್ಶನ್ ರೋಡ್ ಶೋನಲ್ಲಿ ನಟಿ ಅಮೂಲ್ಯ ಭಾಗಿ ( amulya also join in darshan road show )
ಬೆಂಗಳೂರು : ರಾಜರಾಜೇಶ್ವರಿ ನಗರ ಮಿನಿ ಸಮರದಲ್ಲಿ ಸಾರಥಿಯ ಮತಬೇಟೆ ಆರಂಭವಾಗಿದೆ. ಆರ್ ಆರ್ ನಗರ ಮಿನಿ ಕುರುಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಸುಯೋಧನ ರೋಡ್ ಶೋ ಮೂಲಕ ಪ್ರಚಾರ ನಡೆಸುತ್ತಿದ್ದಾರೆ.
ಇತ್ತ ನಟಿ ಅಮೂಲ್ಯ ( amulya ) ಅವರು ತಮ್ಮ ಪತಿ ಜಗದೀಶ್ ಜೊತೆ ರೋಡ್ ಶೋನಲ್ಲಿ ಭಾಗವಹಿಸಿದ್ದಾರೆ. ಅಮೂಲ್ಯ ಮೇಲೂ ಹೋವಿನ ಸುರಿಮಳೆಗೈದು ಅಭಿಮಾನಿಗಳು ಪ್ರಚಾರಕ್ಕೆ ಬರಮಾಡಿಕೊಂಡಿದ್ದಾರೆ.
ಯಶವಂತಪುರದಿಂದ ದರ್ಶನ್ ರೋಡ್ ಶೋ ಆರಂಭಿಸಿದ್ದಾರೆ. ರೋಡ್ ಶೋ ಆರಂಭ ಮಾಡಿದಾಗ ಅಭಿಮಾನಿಗಳು ದರ್ಶನ್ ಗೆ ಹೂವಿನ ಸ್ವಾಗತ ಕೋರಿದರು.
ಅಲ್ಲದೆ ಬಿಜೆಪಿ ಹಾಗೂ ದರ್ಶನ್ ಪರ ಘೋಷಣೆಗಳನ್ನು ಕೂಗಿದರು. ರೋಡ್ ಶೋನಲ್ಲಿ ದರ್ಶನ್ ಹಾಗೂ ಮುನಿರತ್ನಗೆ ರಾಕ್ ಲೈನ್ ವೆಂಕಟೇಶ್, ತೇಜಸ್ವಿನಿ ಗೌಡ ಸಾಥ್ ನೀಡಿದ್ದಾರೆ.
ಸದ್ಯ ದರ್ಶನ್ ಅವರು ಯಶವಂತಪುರ ವಾರ್ಡ್ ನ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ಮಾಡುತ್ತಿದ್ದಾರೆ. ನೆಚ್ಚಿನ ನಟನನ್ನು ನೋಡಲು ಜನ ಮನೆ, ಕಟ್ಟಡಗಳ ಮೇಲೆ ನಿಂತಿದ್ದಾರೆ. ಅಲ್ಲದೆ ದರ್ಶನ್ ಗೆ ಜೈಕಾರ, ಹೂ ಎರಚಿ ಅಭಿಮಾನ ಮೆರೆಯುತ್ತಿದ್ದಾರೆ. ಇದನ್ನೂ ಓದಿ : ಮತಕ್ಕಾಗಿ `ಗಜ’ ಸಂಚಾರ : ಸಾಮಾಜಿಕ ಅಂತರ ಎಲ್ಲಿ ‘ಸ್ವಾಮಿ’..?
ಮಾಸ್ಕ್ ತೆಗೆಯುವಂತೆ ಮನವಿ
ಕೊರೊನಾ ಹಿನ್ನೆಲೆ ದರ್ಶನ್ ಮಾಸ್ಕ್ ಹಾಕಿಕೊಂಡೇ ರೋಡ್ ಶೋ ಆರಂಭಿಸಿದ್ದಾರೆ. ಆದ್ರೆ ದಚ್ಚು ಅಭಿಮಾನಿಗಳು ದರ್ಶನ್ ಅವರಿಗೆ ಮಾಸ್ಕ್ ತೆಗೆಯುವಂತೆ ದಾರಿ ಉದ್ದಕ್ಕೂ ಮನವಿ ಮಾಡುತ್ತಲೇ ಇದ್ದಾರೆ.
ಅದರಂತೆ ಅಭಿಮಾನಿಗಳ ಕೋರಿಕೆ ಮೇರೆಗೆ ದಾಸ ಕೂಡ ಒಂದು ಸೆಕೆಂಡ್ ಮಾಸ್ಕ್ ತೆಗೆದಿದ್ದರು. ಇನ್ನು ಮಹಿಳೆಯರು ಮನೆಗಳ ಬಾಲ್ಕನಿಗಳಲ್ಲಿ ನಿಂತು ದರ್ಶನ್ ಗೆ ಹೂವಿನ ಸ್ವಾಗತ ಕೋರುತ್ತಿದ್ದಾರೆ. ಜೊತೆಗೆ ಅಭಿಮಾನಿಗಳು ದಾರಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.
ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿವಾಹಿನಿ ಜೊತೆ ಮಾತನಾಡಿದ ದರ್ಶನ್, ಕೊರೊನಾ ಸಂಕಷ್ಟದಲ್ಲಿ ಮುನಿರತ್ನ ಅನ್ನ ದಾಸೋಹ ನಡೆಸಿದ್ದಾರೆ.
ಕೊರೊನಾ ಸಮಯದಲ್ಲಿ ಅಕ್ಕಿ ನೀಡಿರುವುದು ದೊಡ್ಡತನ. ನಾನು ಮಾನವೀಯ ದೃಷ್ಠಿಯಿಂದಷ್ಟೇ ಪ್ರಚಾರಕ್ಕೆ ಹೋಗುತ್ತಿದ್ದೇನೆ.
ಅವರ ಆ ದೊಡ್ಡತನದಿಂದಲೇ ನಾನು ಪ್ರಚಾರಕ್ಕೆ ಬಂದಿದ್ದೇನೆ. ನಾನು ಯಾವುದೇ ಪಕ್ಷ ನೋಡಿ ಪ್ರಚಾರಕ್ಕೆ ಹೋಗುತ್ತಿಲ್ಲ. ವ್ಯಕ್ತಿ ನೋಡಿ ಮುನಿರತ್ನ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ : ಮಾನವೀಯತೆ ನೋಡಿ ಪ್ರಚಾರ : ನಟ ದರ್ಶನ್
ದರ್ಶನ್ ರೋಡ್ ಶೋ ಎಲ್ಲೆಲ್ಲಿ?
ಯಶವಂತಪುರ ರೈಲ್ವೆ ನಿಲ್ದಾಣದ ಮುಂಭಾಗದಿಂದ ದರ್ಶನ್ ರೋಡ್ ಶೋ ಶುರು ಮಾಡಿದ್ದಾರೆ.
ಬಳಿಕ ಜೆ.ಪಿ.ಪಾರ್ಕ್ ವಾರ್ಡ್ ವ್ಯಾಪ್ತಿಯಲ್ಲಿ ರೋಡ್ ಶೋ
ಮಧ್ಯಾಹ್ನ 1:15 ಗಂಟೆ ಜಾಲಹಳ್ಳಿ ವಿಲೇಜ್ ಮೂಲಕವಾಗಿ ರೋಡ್ ಶೋ.
ಮಧ್ಯಾಹ್ನ 2:00 ಗಂಟೆ ಹೆಚ್ ಎಂಟಿ, ಪೀಣ್ಯಾ ಮಾರ್ಗವಾಗಿ ಗೊರಗುಂಟೆಪಾಳ್ಯದಲ್ಲಿ ಪ್ರಚಾರ.
ಸಂಜೆ 4:00 ಗಂಟೆ ಲಕ್ಷ್ಮಿದೇವಿನಗರದ ಕೂಲಿನಗರ ಸೇತುವೆಯಿಂದ ರೋಡ್ ಶೋ.
ಸಂಜೆ 5:00 ಗಂಟೆ ಲಗ್ಗೆರೆಯ ಆಲದಮರ ಸರ್ಕಲ್, ಕೊಟ್ಟಿಗೆಪಾಳ್ಯದ ಪೈಪ್ ಲೈನ್, ಸುಂಕದಕಟ್ಟೆಗಳಲ್ಲಿ ರೋಡ್ ಶೋ.
ಸಂಜೆ 6:00 ಗಂಟೆ ಕೊಟ್ಟಿಗೆಪಾಳ್ಯದ ಬಿಡಿಎ ಕಾಂಪ್ಲೆಕ್ಸ್ ವರೆಗೆ ರೋಡ್ ಶೋ.
ರಾತ್ರಿ 8:15 ಗಂಟೆ ಜ್ಞಾನಭಾರತಿಯ ಕೆಂಗುಂಟೆ, ಮಲ್ಲತ್ತಹಳ್ಳಿಯಲ್ಲಿ ರೋಡ್ ಶೋ.
ರಾತ್ರಿ 9:00 ಗಂಟೆ ರಾಜರಾಜೇಶ್ವರಿನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel