ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಸರ ಕದಿಯಲು ಯತ್ನಿಸಿರುವ ಭಯಾನಕ ಘಟನೆಯೊಂದು ನಡೆದಿದೆ.
ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಅಪ್ಲೋಡ್ ಮಾಡಿರುವ ವ್ಯಕ್ತಿ ರೈಲಿನಲ್ಲಿ ಹೋಗುವಾಗ ಹುಷಾರಾಗಿರು ಎಂದು ಬರೆದುಕೊಂಡಿದ್ದಾರೆ.
ಈ ವಿಡಿಡೋಯದಲ್ಲಿ ಕಳ್ಳ ರೈಲಿನ ಬಾಗಿಲು ಬಳಿ ನಿಂತಿದ್ದಾರೆ. ಆಗ ಕಂಪಾರ್ಟ್ ಮೆಂಟ್ ಗಳ ಮೂಲಕ ನಿಧಾನವಾಗಿ ಬರುತ್ತಿದ್ದ ಇಬ್ಬರು ವಯಸ್ಸಾದ ಮಹಿಳೆಯರನ್ನು ಕಂಡ ಕಳ್ಳ, ಇಬ್ಬರ ಪೈಕಿ ಹಿಂದಿದ್ದ ವೃದ್ಧೆಯ ಕತ್ತಿನ ಸರ ಸರ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆದರೆ, ಸರ ಕದಿಯಲು ವಿಫಲನಾಗಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದಿರುವ ಭಯಾನಕ ವಿಡಿಯೋ ಸೆರೆಯಾಗಿದೆ.