ಜಪಾನ್ ದ್ವೀಪದಲ್ಲಿ ಭೂಕಂಪ. 4.9 ತೀವ್ರತೆ ದಾಖಲು
ಗುರುವಾರ ರಾತ್ರಿ ಜಪಾನ್ನ ಅತಿದೊಡ್ಡ ದ್ವೀಪವಾದ ಹೊನ್ಶುವಿನ ಆಗ್ನೇಯ ಭಾಗದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರವು ಜಪಾನಿನ ನಗರವಾದ ವಕಯಾಮಾದಲ್ಲಿ ಭೂಮಿಯಿಂದ 20 ಕಿಮೀ ಕೆಳಗೆ ಕಂಡು ಬಂದಿದೆ. 23 ಜಿಲ್ಲೆಗಳಲ್ಲಿ ಈ ಕಂಪನದ ಅನುಭವವಾಗಿದೆ. ಯಾವುದೇ ರೀತಿಯ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿಲ್ಲ.
ಪೂರ್ವ ಯಮನಾಶಿ ಪ್ರಿಫೆಕ್ಚರ್ನ ಫ್ಯೂಜಿ ಫೈವ್ ಲೇಕ್ಸ್ ಪ್ರದೇಶದಲ್ಲಿ ಶುಕ್ರವಾರ 20 ಕಿಲೋಮೀಟರ್ ಆಳದಲ್ಲಿ ದುರ್ಬಲ ಪ್ರಮಾಣದ 4.9 ಪ್ರಾಥಮಿಕ ತೀವ್ರತೆಯ ಭೂಕಂಪನ ರಿಕ್ಟರ್ ಮಾಪಕದಲ್ಲಿ ಪತ್ತೆಯಾಗಿದೆ.
ಹವಾಮಾನ ಸಂಸ್ಥೆ ಪ್ರಕಾರ ಯಾವುದೇ ಸುನಾಮಿ ಭೀತಿ ಇಲ್ಲ. ಬೆಳಿಗ್ಗೆ 6:37 ರ ಸುಮಾರಿಗೆ ಟೋಕಿಯೊ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.