ಕ್ಯಾಬೇಜ್ ಮಂಚೂರಿಯನ್ ಹೇಗೆ ಮಾಡೋದು ತಿಳಿಯೋಣ…
ಬೇಕಾಗುವ ಸಾಮಾಗ್ರಿಗಳು:
ಕ್ಯಾಬೇಜ್ – 1 (ಮಧ್ಯಮ ಗಾತ್ರದ್ದು), ತುರಿ
ಈರುಳ್ಳಿ – 1 (ದೊಡ್ಡದು), ಸಣ್ಣಗೆ ಕತ್ತರಿಸಿ
ಶುಂಟಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಹಸಿಮೆಣಸಿನಕಾಯಿ – 2, ಸಣ್ಣಗೆ ಕತ್ತರಿಸಿ
ಕೊತ್ತಂಬರಿ ಸೊಪ್ಪು- ಸ್ವಲ್ಪ ಸಾಕು
ಖಾರದ ಪುಡಿ – 1 ಟೀಸ್ಪೂನ್
ಪೆಪ್ಪರ್ ಪುಡಿ – 1/2 ಟೀಸ್ಪೂನ್
ಗರಂ ಮಸಾಲೆ – 1/2 ಟೀಸ್ಪೂನ್
ಅಕ್ಕಿ ಹಿಟ್ಟು – 1/4 ಕಪ್
ಕಡಲೆ ಹಿಟ್ಟು – 1/4 ಕಪ್
ಕಾರ್ನ್ ಫ್ಲೋರ್ – 1/4 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಿದ್ದಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ:
ಮೊದಲಿಗೆ ಕ್ಯಾಬೇಜ್ ಮತ್ತು ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ. ಇದಕ್ಕೆ ಶುಂಟಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಖಾರದ ಪುಡಿ, ಪೆಪ್ಪರ್ ಪುಡಿ, ಗರಂ ಮಸಾಲೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಕೊಂಚ ಹೊತ್ತಿನಲ್ಲೇ ನೀರು ಬಿಡುತ್ತದೆ.
ಈ ಮೇಲಿನ ಮಿಶ್ರಣಕ್ಕೆ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಕಾರ್ನ್ ಫ್ಲೋರ್ ಸೇರಿಸಿ. ಅಗತ್ಯವಿದ್ದಷ್ಟು ನೀರು ಹಾಕಿ, ಸಣ್ಣ ಉಂಡೆ ತಯಾರಿಸಿ.
ನಂತರ ಕಾದ ಎಣ್ಣೆಯಲ್ಲಿ ಈ ಉಂಡೆಗಳನ್ನು ಕಂದು ಬಣ್ಣ ಬರುವವರೆಗೂ ಕರಿಯಿರಿ.
ಆಮೇಲೆ ಒಂದು ಪ್ಯಾನ್ಗೆ ಎಣ್ಣೆ ಹಾಕಿ, ಈರುಳ್ಳಿ, ಸ್ಪ್ರಿಂಗ್ ಆನಿಯನ್, ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ ಹಾಕಿ ಹುರಿಯಿರಿ. ನಂತರ ಸೋಯಾ ಸಾಸ್, ಟೊಮೆಟೋ ಸಾಸ್, ಚಿಲ್ಲಿ ಸಾಸ್, ವಿನೇಗರ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರದಲ್ಲಿ ರೆಡಿ ಮಾಡಿಕೊಂಡ ಕ್ಯಾಬೇಜ್ ಉಂಡೆಗಳನ್ನು ಇದಕ್ಕೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿದರೆ ಮುಗಿತು ನೋಡಿ..ಕ್ಯಾಬೇಜ್ ಮಂಚೂರಿಯನ್ ಸವಿಯಲು ರೆಡಿ.
ಕ್ಯಾಬೇಜ್ ಮಂಚೂರಿಯನ್ನು ಸಾಸುಗಳೊಂದಿಗೆ ಸವಿಯಬಹುದು.