ಹಾಸನ: ಪತಿ ಕಳೆದುಕೊಂಡಿದ್ದಕ್ಕೆ ಎಸ್ ಡಿಎ ನೌಕರಸ್ಥೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್ ಡಿಎ ಓದುತ್ತಿದ್ದ ಸುಚಿತ್ರಾ(31) ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರದ ರಕ್ಷಣಾಪುರಂನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಸುಚಿತ್ರಾ ಅವರ ಪತಿ ಕೃಷ್ಣಮೂರ್ತಿ ವಿಲೇಜ್ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಅವರು ಕಳೆದ ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಪತಿ ಕಳೆದುಕೊಂಡಿದ್ದರು. ಪತಿಯ ಸಾವಿನ ನಂತರ ಸುಚಿತ್ರಾ ಅವರಿಗೆ ಅನುಕಂಪದ ಆಧಾರದ ಮೇಲೆ ಸುಚಿತ್ರಾಗೆ ಎಸ್‍ಡಿಎ ಹುದ್ದೆ ನೀಡಲಾಗಿತ್ತು.
ಸುಚಿತ್ರಾ ಅವರು ಹೆಣ್ಣು ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮಗು ಶಾಲೆಗೆ ಹೋಗಿ ಮರಳಿ ಬಂದಾಗ ಬಾಗಿಲು ತೆರೆಯದಿರುವುದನ್ನು ನೋಡಿ ಮಾವನಿಗೆ ಕರೆ ಮಾಡಿದ್ದಾರೆ. ಅವರು ಆಗಮಿಸಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.