ಸತ್ತಿದೆ ಎಂದು ಭಾವಿಸಿದ್ದ ಮಗು ಅಂತ್ಯಕ್ರಿಯೆಯಲ್ಲಿ ಎಚ್ಚೆತ್ತುಕೊಂಡಿರುವ ಘಟನೆಯೊಂದು ನಡೆದಿದ್ದು, ತಾಯಿಗೆ ಸ್ವರ್ಗವೇ ಕೆಳಗೆ ಇಳಿದಂತಾಗಿ, ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು.
ಅಸ್ಸಾಂನ ಸಿಲ್ಚಾರ್ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಸಾವನ್ನಪ್ಪಿದೆ ಎಂದು ಘೋಷಿಸಿದ್ದರು. ಮಗು ಅಂತ್ಯ ಕ್ರಿಯೆ ಸಂದರ್ಭದಲ್ಲಿ ಕಣ್ಣು ತೆರೆದಿದೆ ಎನ್ನಲಾಗಿದೆ. ರತನ್ ದಾಸ್ ಅವರು ತಮ್ಮ ಗರ್ಭಿಣಿ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಆದರೆ, ವೈದ್ಯರು ಇಬ್ಬರಲ್ಲಿ ಒಬ್ಬರನ್ನು ಮಾತ್ರ ಉಳಿಸಲು ಸಾಧ್ಯ ಎಂದು ಹೇಳಿದ್ದರು. ಆಗ ವೈದ್ಯರು ಪತ್ನಿ ಸತ್ತ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ದುಃಖದಲ್ಲಿ ಕುಟುಂಬಸ್ಥರು ಮಗುವಿನ ಮೃತದೇಹ ತೆಗೆದುಕೊಂಡು ಮನೆಗೆ ಹೋಗಿದ್ದಾರೆ. ಪ್ಯಾಕೆಟ್ ನಲ್ಲಿ ಕೊಟ್ಟಿದ್ದ ಶವ ತೆಗೆದುಕೊಂಡು ಸ್ಮಶಾನಕ್ಕೆ ಹೋಗಲಾಗಿದೆ.
ಸಿಲ್ಚಾರ್ ಸ್ಮಶಾನವನ್ನು ತಲುಪಿದ ನಂತರ, ಅಂತಿಮ ಸಂಸ್ಕಾರದ ಮೊದಲು ಪ್ಯಾಕೆಟ್ ಅನ್ನು ತೆರೆದಾಗ, ಮಗು ಅಳುತ್ತಿತ್ತು. ತಕ್ಷಣ ಮತ್ತೆ ಆಸ್ಪತ್ರೆಗೆ ದಾಖಲಿಸಿ, ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಘಟನೆ ನಡೆದ ಕೂಡಲೇ ಸಿಲ್ಚಾರ್‌ನ ಮಾಲಿನಿಬಿಲ್ ಪ್ರದೇಶದ ಜನರ ಗುಂಪೊಂದು ಖಾಸಗಿ ಆಸ್ಪತ್ರೆ ಎದುರು ಜಮಾಯಿಸಿ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಸದ್ಯ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.