ವಿಜಯನಗರ ಹೆಸರು ಉಳಿಯಲು ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ : ಆನಂದ್ ಸಿಂಗ್
ಬಳ್ಳಾರಿ : ವಿಜಯನಗರ ಹೆಸರು ಉಳಿಯಲು ನಾನು ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧವೆಂದು ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ವಿಜಯನಗರ ಜಿಲ್ಲೆ ರಚನೆಗೆ ತಾತ್ವಿಕ ಅನುಮೋದನೆ ಸಿಕ್ಕಿದೆ.
ಈ ಬಗ್ಗೆ ಸಚಿವ ಆನಂದ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದು, ಸರ್ಕಾರದ ಈ ನಿರ್ಧಾರಕ್ಕೆ ನಾನು ರೂವಾರಿಯಲ್ಲ, ಇದರಲ್ಲಿ ನನ್ನ ವೈಯಕ್ತಿಕ ಪ್ರತಿಷ್ಠೆಯೇನೂ ಇಲ್ಲ.
ವಿಜಯನಗರ ಜಿಲ್ಲೆಯಾಗಬೇಕು ಎಂಬುದು ಈ ಭಾಗದ ಜನರ ಹಲವು ದಿನಗಳ ಬೇಡಿಕೆಯಾಗಿದೆ.
ಅಭಿವೃದ್ಧಿ ದೃಷ್ಟಿಯಿಂದ ವಿಜಯನಗರ ಜಿಲ್ಲೆಯಾಗಬೇಕು ಎಂದು ಒತ್ತಾಯಿಸಿದ್ದೆವು.
ರಾಜ್ಯದ 31ನೇ ನೂತನ ಜಿಲ್ಲೆಯಾಗಿ ವಿಜಯನಗರ ರಚನೆ: ರಾಜ್ಯ ಸಚಿವ ಸಂಪುಟ ಅಸ್ತು
ವಿರೂಪಾಕ್ಷನ ಆಶಿರ್ವಾದದಿಂದ ಜಿಲ್ಲೆಯಾಗುತ್ತೆ ಎಂದಿದ್ದೆ. ಅದರಂತೆ ಈಗ ನೂತನ ಜಿಲ್ಲೆಗೆ ಒಪ್ಪಿಗೆ ಸಿಕ್ಕಿದೆ ಎಂದು ಹೇಳಿದರು.
ಇದೇ ವೇಳೆ ವಿಜಯನಗರ ಹೆಸರು ಉಳಿಯಲು ಸಚಿವ ಸ್ಥಾನ ತ್ಯಾಗಕ್ಕೂ ನಾನು ಸಿದ್ಧ ಎಂದ ಆನಂದ್ ಸಿಂಗ್, ಸದ್ಯ ಸಂಪುಟ ವಿಸ್ತರಣೆ ಕೂಡ ಆಗುತ್ತಿದೆ.
ನಾನು ಈಗಲೇ ರಾಜೀನಾಮೆ ಪತ್ರವನ್ನು ಸಿಎಂ ಯಡಿಯೂರಪ್ಪನವರಿಗೆ ನೀಡಿ ಶಾಸಕನಾಗಿ ಮುಂದುವರೆಯಲು ಸಿದ್ಧನಿದ್ದೇನೆ. ನನಗೆ ಜಿಲ್ಲೆ ಜನತೆಯ ಅಭಿವೃದ್ಧಿ ಮುಖ್ಯ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ನನ್ನ ಹೆದರಿಸಬೇಡಿ, ನೀವು ನನಗಿಂತ ಜ್ಯೂನಿಯರ್ : ವಾಟಾಳ್
ಹಾಗೇ ಸರ್ಕಾರದ ಈ ನಿರ್ಧಾರಕ್ಕೆ ಬಳ್ಳಾರಿ ಜಿಲ್ಲೆಯ ಕೆಲ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾತನಾಡಿ, ಬಳ್ಳಾರಿ ಹಾಗೂ ವಿಜಯನಗರ ಎರಡೂ ಜಿಲ್ಲೆಗಳ ಜನ ಅಣ್ಣ-ತಮ್ಮಂದಿರಂತೆ ಬಾಳೋಣ.
ಸೂರ್ಯ- ಚಂದ್ರ ಇರುವವರೆಗೂ ಸಿಎಂ ಯಡಿಯೂರಪ್ಪ ಅವರ ಹೆಸರನ್ನು ಚಿರಸ್ಥಾಯಿ ಮಾಡೋಣ ಎಂದು ಮನವಿ ಮಾಡಿಕೊಂಡರು ಆನಂದ್ ಸಿಂಗ್.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel