ADVERTISEMENT
Sunday, July 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆನಂದಪುರದ ಪ್ರೇಮ‌ಸೌಧ – 16 ನೇ ಶತಮಾನದ ಹಿರಿಯ ವೆಂಕಟಪ್ಪನಾಯಕನ ನವಿರಾದ ಪ್ರೇಮಕಥೆ:

Shwetha by Shwetha
January 17, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv Naavu kelada charitre episode11
Share on FacebookShare on TwitterShare on WhatsappShare on Telegram

ಆನಂದಪುರದ ಪ್ರೇಮ‌ಸೌಧ – 16 ನೇ ಶತಮಾನದ ಹಿರಿಯ ವೆಂಕಟಪ್ಪನಾಯಕನ ನವಿರಾದ ಪ್ರೇಮಕಥೆ: Saakshatv Naavu kelada charitre episode11

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಈ ಹಿಂದೆ ಇತಿಹಾಸ ಪ್ರಸಿದ್ಧ ಕ್ಷೇತ್ರ ಆಗಿತ್ತು. ಇತಿಹಾಸ ಮತ್ತು ಶಾಸನಗಳಲ್ಲಿ ಆನಂದಾಪುರಕ್ಕೆ ಆನಂದೂರು, ಅಂತರಾಸಿಪುರ, ಔಷಧಪುರ ಮತ್ತು ಅನಂತಶಿವಪುರ ಎಂಬ ಹೆಸರುಗಳಿತ್ತು. ಇಲ್ಲಿನ ಪೇಟೆ ಎಷ್ಟರಮಟ್ಟಿಗೆ ಪ್ರಸಿದ್ಧವಾಗಿತ್ತು ಅಂದರೆ ಇಲ್ಲಿ ಇರುವ ಚಂಪಕಸರಸಿ ಮಹಂತಿನ ಮಠಕ್ಕೆ ದೂರದ ಬೆಂಗಳೂರು, ಮುಳಬಾಗಿಲು, ನಾಗಮಂಗಲ ಮತ್ತು ನೆರೆಯ ಆಂದ್ರಪ್ರದೇಶದ ಸುಪ್ರಸಿದ್ಧ ವರ್ತಕರು ದಾನ ನೀಡಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಳದಿ ಗುಂಡಾಜೋಯ್ಸರ ಸಂಗ್ರಹದಲ್ಲಿ ಇರುವ ಕ್ರಿ ಶ 1606 ಒಂದು ಶಾಸನ ಇದರ ಬಗ್ಗೆ ಬೆಳಕು ಚೆಲ್ಲುತ್ತದೆ. ಕೆಳದಿಯ ಹಿರಿಯ ವೆಂಕಟಪ್ಪನಾಯಕ, ಇಲ್ಲಿನ ಕೋಟೆಯನ್ನು ಬಲಪಡಿಸಿ, ಇದರ ಒಳಗೆ ತಾಂಡವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅಲ್ಲಿ ಒಂದು ಸುಂದರವಾದ ಅರಮನೆಯನ್ನು ಕಟ್ಟಿಸಿ, ಬಾವಿ, ಕೆರೆ, ಕೊಳ ಮತ್ತು ತೋಟವನ್ನು ನಿರ್ಮಾಣ ಮಾಡಿದ. ಇಕ್ಕೇರಿಯಿಂದ ಆನಂದಪುರಕ್ಕೆ ರಾಜಮಾರ್ಗವನ್ನು ಮಾಡಿಸಿರುವ ಬಗ್ಗೆ ಕೆಳದಿ ನೃಪವಿಜಯ ಮತ್ತು ಶ್ರೀಶಿವತತ್ವರತ್ನಾಕರದಲ್ಲಿ ಉಲ್ಲೇಖ ಇದೆ. Saakshatv Naavu kelada charitre episode11
Saakshatv Naavu kelada charitre episode11

Related posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

July 5, 2026
ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

July 5, 2026

ನಮ್ಮ ಭಾರತ ದೇಶದಲ್ಲಿ ಪ್ರೀತಿ ಹಾಗೂ ಪ್ರೇಮದ ಕಥೆಗಳಿಗೆ ಬರವಿಲ್ಲ. ನಮ್ಮ ಭಾರತ ದೇಶದ ಪ್ರತಿ ರಾಜ್ಯದಲ್ಲೂ ಹೀರ್ ಮತ್ತು ರಾಂಜಾ ತರಹದ ಅನೇಕ ಬಗೆ ಬಗೆಯ ಕುತೂಹಲಕಾರಿ ಪ್ರೇಮಕಥೆಗಳು ಕೇಳಲಿಕ್ಕೆ ಸಿಗುತ್ತವೆ. ನಮ್ಮ ಜನರಿಗೆ ವಿಶೇಷವಾಗಿ ರಾಜ, ರಾಣಿ, ಯುವರಾಜ, ರಾಜಕುಮಾರಿ ಇವರುಗಳ ಪ್ರೇಮ ಕಥೆಯ ಬಗ್ಗೆ ಆಸಕ್ತಿ ಮತ್ತು ಒಲವು ಜಾಸ್ತಿ. ಆದರೆ ಸಾವಿರಾರು ಸಂಖ್ಯೆಯ ಪ್ರೇಮಕಥೆಗಳಲ್ಲಿ ಕೆಲವೊಂದು ಕಥೆಗಳು ನಿಗೂಢವಾಗಿ ಯಾರಿಗೂ ತಿಳಿಯದೆ ಇತಿಹಾಸದ ಪುಟಗಳಲ್ಲಿ ಸಮಾಧಿ ಆಗಿದೆ. ಇಂತಹದೇ ಒಂದು ರೋಚಕ ಪ್ರೇಮಕಥೆಗೆ ಸಾಕ್ಷಿಯಾಗಿ ನಿಂತಿರುವುದು ಪಶ್ಚಿಮ ಘಟ್ಟದ ತಪ್ಪಲಿನ ಮಲೆನಾಡಿನಲ್ಲಿರುವ ಆನಂದಪುರದ ಚಂಪಕಸರಸಿ ಪುಷ್ಕರಣಿ.

ಚಂಪಕಸರಸಿ ಹಾಗೂ ಕೆಳದಿ ರಾಜ್ಯದ ವೀರ ರಾಜಾ ವೆಂಕಟಪ್ಪ ನಾಯಕನ (1586 – 1629) ಪ್ರೇಮಕಥೆ ಈ ಭಾಗದ ಜನರಲ್ಲಿ ಲಾವಣಿಯ ಮುಖಾಂತರ ಪ್ರಸಿದ್ಧವಾಗಿದೆ. ಹಂಪಿ ಸಾಮ್ರಾಜ್ಯದ ಪತನದ ನಂತರ ರ‍್ನಾಟಕ ರಾಜ್ಯದ ಅತಿ ದೊಡ್ಡ, ಬಲಿಷ್ಠ ಹಾಗೂ ಶ್ರೀಮಂತ ರಾಜ್ಯವಾಗಿ ಹೊರಹೊಮ್ಮಿದ್ದು ಕೆಳದಿ ರಾಜ್ಯ. ಈ ರಾಜ್ಯದ ಪ್ರಥಮ ಸ್ವಾತಂತ್ರ‍್ಯ ರಾಜಾ ಎಂದೇ ಬಿಂಬಿತ ವೆಂಕಟಪ್ಪ ನಾಯಕನ ರಾಜ್ಯ ಎಷ್ಟು ವಿಶಾಲವಾಗಿತ್ತು ಅಂದರೆ ಗೋವಾದ ಬುಡದಿಂದ ಶುರುವಾಗಿ ಕೇರಳದ ವರೆಗೆ ವಿಸ್ತರಿಸಿತ್ತು. ಪಶ್ಚಿಮ ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಇರುವ ಪ್ರದೇಶದ ಒಡೆಯನಾಗಿದ್ದ ವೆಂಕಟಪ್ಪ ನಾಯಕನ ಪ್ರೇಮ ಕಥೆಯೇ ಬಲು ರೋಚಕ. ಆದರೆ ಕಾರಣಾಂತರಗಳಿಂದ ಈ ಪ್ರೇಮ ಕಥೆಯ ಬಗ್ಗೆ ಶ್ರೀಶಿವತತ್ವರತ್ನಾಕರ, ಕೆಳದಿ ನೃಪವಿಜಯ ಅಥವಾ ಬೇರೆ ಸ್ಥಳೀಯ ದಾಖಲಾತಿಗಳಲ್ಲಿ ಉಲ್ಲೇಖ ಮಾಡದೇ ಹೋದರೂ ಸಹ ಈ ಪ್ರೇಮಕಥೆ ಸ್ಥಳೀಯ ಜಾನಪದ ಕಲೆಯಾಗಿರುವ ಲಾವಣಿ ಮುಖಾಂತರ ಸುಪ್ರಸಿದ್ಧ ಆಗಿದೆ. ಇತ್ತೀಚಿಗೆ ಶ್ರೀ ಕೆ. ಅರುಣ್ ಪ್ರಸಾದ್ ಅವರು ಈ ಲಾವಣಿಯನ್ನು ಆಧಾರವಾಗಿ ಇಟ್ಟುಕೊಂಡು “ಬೆಸ್ತರರಾಣಿ ಚಂಪಕಾ” ಎಂಬ ಕಾದಂಬರಿಯನ್ನು ಬರೆದಿದ್ದಾರೆ. Saakshatv Naavu kelada charitre episode11

Saakshatv Naavu kelada charitre episode11

ಇನ್ನೂ ಈ ಪ್ರೇಮ ಕಥೆಗೆ ಸಂಬಂಧಿಸಿ ಸಿಗುವ ಏಕೈಕ ದಾಖಲಾತಿ ಎಂದರೆ 1624ರಲ್ಲಿ ವೆಂಕಟಪ್ಪ ನಾಯಕರನ್ನು ಭೇಟಿ ಮಾಡಿ ಇಕ್ಕೇರಿ ರಾಜ್ಯವನ್ನು ಕಣ್ಣಾರೆ ನೋಡಿದ ಇಟಾಲಿಯನ್ ಪ್ರವಾಸಿ “ಪಿಯೆಟ್ರೊ ಡೆಲ್ಲಾ ವೇಲ್ಲಾ” (Pietro Della Valle) ಅವರು ತಮ್ಮ ಭಾರತ ಪ್ರವಾಸದ ಕುರಿತು ತಮ್ಮ ಮಾತೃಭಾಷೆ ಇಟಾಲಿಯನ್ ಭಾಷೆಯಲ್ಲಿ ಬರೆದಿರುವ ಪುಸ್ತಕ. ಈ ಪುಸ್ತಕವನ್ನು ಮೊಟ್ಟಮೊದಲ ಬಾರಿಗೆ ಅಂದರೆ 1664ರಲ್ಲಿ ಆಂಗ್ಲ ಭಾಷೆಯಲ್ಲಿ ಭಾಷಾಂತರ ಮಾಡಿ “The Travels of Pietro Della Valle in India” ಎಂದು ಎರಡು ಭಾಗಗಳಲ್ಲಿ (Volume) ಮುದ್ರಣ ಮಾಡಲಾಯಿತು. ಪಿಯೆಟ್ರೊ ಡೆಲ್ಲಾ ವೇಲ್ಲಾ ತನ್ನ ದಾಖಲಾತಿಯಲ್ಲಿ ವೆಂಕಟಪ್ಪ ನಾಯಕರ ಪಟ್ಟದ ರಾಣಿ ಅಭಿನವ ವೀರಾಂಭ (ವೀರಮ್ಮ) ಮತ್ತು ಅವನ ಪ್ರೀತಿಯ ಮಡದಿ ಭದ್ರಮ್ಮ ಬಗ್ಗೆ ಹಾಗು ವೆಂಕಟಪ್ಪ ನಾಯಕರ ಆನಂದಪುರದ ಪ್ರೇಯಸಿಯ ಬಗ್ಗೆಯೂ ಸಹ ಬರೆದಿದ್ದು ಇದು ಒಂದು ಪ್ರಮುಖ ಆಧಾರ. ರಾಣಿ ಭದ್ರಮ್ಮ ವೆಂಕಟಪ್ಪ ನಾಯಕರ ಪ್ರೇಮ ಪ್ರಕರಣದಿಂದ ಸಾಕಷ್ಟು ಮನನೊಂದು 29 ಅಕ್ಟೋಬರ್ 1623ರಲ್ಲಿ ಶಿವೈಕ್ಯೆ ಆಗಿರುವ ಬಗ್ಗೆ ಪಿಯೆಟ್ರೊ ಡೆಲ್ಲಾ ವೇಲ್ಲಾ ಮಾಹಿತಿ ನೀಡುತ್ತಾನೆ. ಪಿಯೆಟ್ರೊ ಡೆಲ್ಲಾ ವೇಲ್ಲಾ ತನ್ನ ಪುಸ್ತಕದಲ್ಲಿ ಈ ಪ್ರೇಮ ಪ್ರಕರಣದ ಬಗ್ಗೆ ಬರೆದಿರುವ ಕೆಲವು ಸಾಲುಗಳು ಯಥಾವತ್ತಾಗಿ ಇಲ್ಲಿ ಹೇಳಿರುವೆ –

Saakshatv Naavu kelada charitre episode11

“They say that twelve or thirteen years since, when she was about five and thirty years old, it came to her ears that Venkatappa Naieka, her husband, having becoming fond of a Moorish woman, kept her secretly in a Fort not far from the court, where he frequently solac’d himself with her for two or three days together; whereupon Badra Ama, first complaining to him not only of the wrong which he did to himself, defiling himself with a strange woman of impure race and of a Nation which drank wine and ate flesh and all sort of uncleannesses, told him that, if he had a mind for other woman of their own clean race without contaminating himself with this Moor, and she would have suffered it with patience; but, since he had thus defiled himself with her, she for the future would have no more to do with him; and thereupon she took an oath that she would be to him as his Daughter and he should be to her as her Father; after which she shew’d no further resentment, but liv’d with him as formerly keeping him company in the Palace, tending upon him in his sickness and doing other things with the same love as at first, helping and advising him in matters of government, wherein she had always great authority with him; and in short, excepting the Matrimonial Act, perfectly fulfilling all other offices of a good wife”.
Saakshatv Naavu kelada charitre episode11

ಪಿಯೆಟ್ರೊ ಡೆಲ್ಲಾ ವೇಲ್ಲಾ ಅವರ ಬರವಣಿಗೆಯಲ್ಲಿ ಗಮನಿಸ ಬೇಕಾದ ಬಹು ಮುಖ್ಯವಾದ ಪದ ಅಂದರೆ ಮೂರಿಶ್ ಅಥವಾ ಮೂರ್. ಇದು ಮೂಲತಃ ಯುರೋಪಿಯನ್ ಕ್ರಿಶ್ಚಿಯನ್ನರು ಇಸ್ಲಾಂ ಧರ್ಮದ ವ್ಯಕ್ತಿಗೆ ಸಂಬೋಧಿಸುವಾಗ ಬಳಸುತ್ತಿದ್ದ ಪದ. ಪಿಯೆಟ್ರೊ ಡೆಲ್ಲಾ ವೇಲ್ಲಾ ಅವರ ಪ್ರಕಾರ ಸುಮಾರು ಹನ್ನೆರಡು ಹದಿಮೂರು ರ‍್ಷಗಳ ಹಿಂದೆ ರಾಣಿ ಭದ್ರಮ್ಮಗೆ ಮೂವತೈದು ವರ್ಷ ಇದ್ದಾಗ ರಾಜ ವೆಂಕಟಪ್ಪ ನಾಯಕ ಮತ್ತು ಅವನ ಇಸ್ಲಾಂ (ಮೂರಿಶ್) ರ‍್ಮದ ಪ್ರೇಯಸಿಯ ಬಗ್ಗೆ ತಿಳಿಯುತ್ತದೆ. ಪ್ರೇಯಸಿಯನ್ನು ಇಕ್ಕೇರಿ ಸಂಸ್ಥಾನದ ಹತ್ತಿರ ಇರುವ ಕೋಟೆಯಲ್ಲಿ ಇರಿಸಿ ವೆಂಕಟಪ್ಪ ನಾಯಕರು ಅಲ್ಲಿಗೆ ಪದೇಪದೇ ಹೋಗಿ ಅವಳ ಜೊತೆಗೆ ಮೂರು ನಾಲ್ಕು ದಿನಗಳು ಜೊತೆಗೆ ಇರುತ್ತಿದ್ದರು ಎಂಬ ಸುದ್ದಿ ತಿಳಿದ ತಕ್ಷಣ ರಾಣಿ ಭದ್ರಮ್ಮ ಈ ಸಂಬಂಧವನ್ನು ಕಟುವಾಗಿ ವಿರೋಧಿಸುತ್ತಾಳೆ. ವೀರಶೈವ ರ‍್ಮದ ಅನುಯಾಯಿಗಳಾಗಿದ್ದ ಇಕ್ಕೇರಿ ನಾಯಕರು ಮಾಂಸಹಾರಿ ಸೇವಿಸುವ ಅನ್ಯ ಧರ್ಮದ ಹೆಣ್ಣಿನ ಸಾಂಗತ್ಯ ಬಯಸದೆ ಬೇರೆ ಹೆಣ್ಣನ್ನು (ಹಿಂದು ಹೆಣ್ಣು) ಪ್ರೀತಿಸುತ್ತಿದ್ದರೆ ಅದನ್ನು ನಾನು ಒಪ್ಪುತ್ತಿದ್ದೆ ಎಂದು ರಾಣಿ ಭದ್ರಮ್ಮ ಹೇಳುತ್ತಾಳೆ. ರಾಣಿ ಭದ್ರಮ್ಮನ ಸಲಹೆಗೆ ಕಿವಿಗೊಡದೆ ಇದ್ದಾಗ ರಾಣಿ ಭದ್ರಮ್ಮ ಭಯಂಕರವಾದ ಪ್ರತಿಜ್ಞೆಯನ್ನು ಮಾಡುತ್ತಾಳೆ – ತಾನು ಇನ್ನೂ ಮುಂದೆ ರಾಜ ವೆಂಕಟಪ್ಪ ನಾಯಕರಿಗೆ ಮಗಳಾಗಿ ಇರುವೆ (ವೈವಾಹಿಕ ಸಂಬಂಧವನ್ನು ತ್ಯಾಜಿಸುತ್ತಾಳೆ). ರಾಣಿ ಭದ್ರಮ್ಮ ತನ್ನ ಕೊನೆಯ ಉಸಿರಿನವರೆಗೂ ತನ್ನ ರಾಣಿ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ. ರಾಜ ವೆಂಕಟಪ್ಪ ನಾಯಕ ಒಬ್ಬ ರಾಜ್ಯ ವಿಸ್ತಾರಕವಾಗಿದ್ದು ತನ್ನ ರಾಜ್ಯಭಾರದ ಹೆಚ್ಚಿನ ಕಾಲವನ್ನು ಯುದ್ಧದಲ್ಲಿ ಕಳೆಯುತ್ತಾರೆ ಹಾಗಾಗಿ ರಾಜ್ಯಭಾರ ಮತ್ತು ಆಡಳಿತದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ರಾಣಿ ಭದ್ರಮ್ಮ. ಇಕ್ಕೇರಿ ನಾಯಕರ ಇತಿಹಾಸವನ್ನು ಒಮ್ಮೆ ಮೆಲುಕು ಹಾಕಿದರೆ ಎಲ್ಲರಿಗಿಂತ ಶ್ರೇಷ್ಠ ರಾಜ ವೆಂಕಟಪ್ಪ ನಾಯಕವಾದರೆ ಅತ್ಯಂತ ಪ್ರಭಾವಶಾಲಿ ಮತ್ತು ಸಮರ್ಥ ರಾಣಿ ಭದ್ರಮ್ಮ ಎನ್ನುವುದು ತಿಳಿದುಬರುತ್ತದೆ.

ಆಂಗ್ಲ ಭಾಷೆಯಲ್ಲಿ “Love is Blind” ಎನ್ನುತ್ತಾರೆ ಯಾಕೆಂದರೆ ಪ್ರೀತಿಗೆ ಧರ್ಮ ಜಾತಿ, ಬಣ್ಣ, ಆಸ್ತಿ, ಅಂತಸ್ತು, ಭಾಷೆ ಯಾವುದು ಮುಖ್ಯವಲ್ಲ. 16ನೇ ಶತಮಾನದ ಕೊನೆಯ ಕಾಲಘಟ್ಟದಲ್ಲಿ ಮಲೆನಾಡಿನ ಅತ್ಯಂತ ಪ್ರಭಾವ ಹಾಗೂ ಶಕ್ತಿಶಾಲಿ ರಾಜ ಮತ್ತು ಒಂದು ಸಾಮಾನ್ಯ ಹೆಣ್ಣಿನ ಮಧ್ಯೆ ಅರಳಿದ ಪ್ರೀತಿ ನಿಜಕ್ಕೂ ಕುರುಡು. ಆದರೆ ಸಮಾಜದ ಶಿಷ್ಟಾಚಾರಕ್ಕೆ ಜೋತು ಬಿದ್ದು ಈ ಅಸಮಾನ್ಯ ಪ್ರೇಮವು ಸಹಾ ಕೊನೆಯಲ್ಲಿ ದುರಂತಕ್ಕೆ ಬಲಿಯಾಯಿತು. ಅದೇನೇ ಇರಲಿ ಮಲೆನಾಡಿನ ಆನಂದಪುರದ ಹತ್ತಿರ ಇರುವ ಚಂಪಕಸರಸಿ ಪುಷ್ಕರಣಿ ಮತ್ತು ಅದರ ಪರಿಸರ ನಿಜಕ್ಕೂ ಸುಂದರವಾಗಿದೆ. ವೆಂಕಟಪ್ಪ ನಾಯಕ ಮತ್ತು ಅವನ ಪ್ರೇಯಸಿಯ ಪ್ರೀತಿಗೆ ಸಾಕ್ಷಿಯಾಗಿ ಪರ‍್ವಾಭಿಮುಖವಾಗಿ ನಿಂತಿರುವ ಎರಡು ಆನೆಗಳು ಆ ಪರಿಸರದ ನಿಜವಾದ ಆಕರ್ಷಣೆ. ದೊಡ್ಡದಾದ ಪುಷ್ಕರಣಿ ಅದರ ಮಧ್ಯದಲ್ಲಿ ಒಂದು ಪುಟ್ಟ ಗುಡಿ ಅದನ್ನು ಸಂರಕ್ಷಿಸಲು ಕಲ್ಲಿನ ಸಂಕ, ಪೂರ್ವದಲ್ಲಿ ಒಂದು ದ್ವಾರ, ಪಶ್ಚಿಮದಲ್ಲಿ ಪೂರ್ವಾಭಿಮುಖವಾಗಿ ಕಟ್ಟಿರುವ ಇನ್ನೊಂದು ದೇವಾಲಯ, ಅದರ ಮುಂದೆ ಸುಂದರವಾದ ತೊಟ್ಟಿ, ತೊಟ್ಟಿಯಲ್ಲಿ ಇರುವ ಸುಂದರವಾದ ಸಿಂಹಕಟಾಂಜನ, ಉತ್ತರ ದಿಕ್ಕಿನಲ್ಲಿ ಇರುವ ಗುಡ್ಡದಿಂದ ಬರುವ ನೀರು ನಂದಿಯ ಬಾಯಿಯ ಮುಖೇನ ಪುಷ್ಕರಣಿಯಲ್ಲಿ ಸೇರುವುದು, ದಕ್ಷಿಣದಲ್ಲಿ ಇರುವ ತೂಬು ಮತ್ತು ನೀರಿನ ಕಾಲುವೆ, ನೈರುತ್ಯದಲ್ಲಿ ಪುಷ್ಕರಣಿ ಇಂದ ನೀರನ್ನು ಸೇದಲು ಮಾಡಿರುವ ವ್ಯವಸ್ಥೆ, ಸುತ್ತಲೂ ಇರುವ ರಕ್ಷಣಾ ಗೋಡೆ, ಪುಷ್ಕರಣಿಯ ನೆಲಹಾಸು ಎಲ್ಲವೂ ಅದ್ಭುತವಾಗಿದ್ದು ಅಂದಿನ ಕಾಲದ ತಂತ್ರಜ್ಞಾನಕ್ಕೆ ಕೈಗನ್ನಡಿಯಾಗಿದೆ.
Saakshatv Naavu kelada charitre episode11

ಈ ಸ್ಮಾರಕದಲ್ಲಿ ಸಂಪೂರ್ಣವಾಗಿ ಸ್ಥಳೀಯವಾಗಿ ಸಿಗುವ ಜಂಬಿಟ್ಟಿಗೆ ಮತ್ತು ಕಲ್ಲುಗಳನ್ನು ಉಪಯೋಗಿಸಿರುವುದು ಇನ್ನೊಂದು ವಿಶೇಷ. ಆದರೆ ಎಲ್ಲದಕ್ಕಿಂತ ಆ ಆನೆಗಳೇ ಮುಖ್ಯವಾದದ್ದು ಏಕೆಂದರೆ ಅದರಲ್ಲಿ ಒಂದು ಗಂಡಾನೆ ಆದರೆ ಇನ್ನೊಂದು ಹೆಣ್ಣಾನೆ. ಈ ಆನೆಗಳನ್ನು ಕೆತ್ತಿರುವ ಶಿಲ್ಪಿಯನ್ನು ನಿಜಕ್ಕೂ ಮೆಚ್ಚ ಬೇಕು ಏಕೆಂದರೆ ಅವನಿಗೆ ಗಂಡು ಮತ್ತು ಹಣ್ಣು ಆನೆಗಳ ಭೌತಿಕ ಲಕ್ಷಣಗಳು, ಹಾವಭಾವಗಳು, ಮೈಕಟ್ಟು ಎಲ್ಲವೂ ಗೊತ್ತಿದ್ದು ಅದರ ಪರಿಣಾಮವಾಗಿ ಈ ಎರಡು ಆನೆಗಳು ವೆಂಕಟಪ್ಪ ನಾಯಕ ಮತ್ತು ಅವರ ಪ್ರೇಯಸಿಯ ಪ್ರೇಮಾಕುರದ ಜೀವಂತ ಸಾಕ್ಷಿಯಾಗಿ ನಿಂತಿವೆ. ಗಂಡು ಮತ್ತು ಹೆಣ್ಣು ಆನೆಗಳನ್ನು ಸುಲಭವಾಗಿ ಗುರುತಿಸಬಹುದು ಅದಕ್ಕೆ ಯಾವುದೇ ರೀತಿಯ ಬ್ರಹ್ಮ ವಿದ್ಯೆಯ ಅವಶ್ಯಕತೆ ಇರುವುದಿಲ್ಲ. ತಲೆ, ಹಣೆ, ಕಣ್ಣುಗಳು, ದವಡೆ, ಗುದದ್ವಾರ ಮತ್ತು ಕಿವಿಗಳಿಂದ ಗಂಡು ಮತ್ತು ಹೆಣ್ಣಾನೆಯನ್ನು ಗುರುತಿಸ ಬಹುದು. ಗಂಡಾನೆಗೆ ಯಾವುದೇ ಬಾಹ್ಯ ವೃಷಣಗಳಿಲ್ಲ ಮತ್ತು ಹೆಣ್ಣಾನೆಯ ಮುಂಭಾಗದ ಕಾಲುಗಳ ನಡುವೆ ಇರುವ ಸ್ತನವನ್ನು ಇಲ್ಲಿ ಗಮನಿಸಬಹುದು. ಅದೇ ರೀತಿ ಗಂಡು ಮತ್ತು ಹೆಣ್ಣು ಆನೆಗಳ ಕಣ್ಣಿಗೆ ಮಾಡಿರುವ ಅಲಂಕಾರ, ಕುತ್ತಿಗೆಯ ಸುತ್ತ ಕಟ್ಟಿರುವ ಗಂಟೆಯ ಸರಮಾಲೆ, ಬೆನ್ನಿನ ಮೇಲೆ ಇರುವ ಜೀನು ಗಮನಿಸಿದರೆ ಗಂಡು ಮತ್ತು ಹೆಣ್ಣು ಆನೆಯನ್ನು ಪ್ರತ್ಯೇಕಗೊಳಿಸ ಬಹುದು. ಗಂಡಾನೆಯ ಹಣೆಯ ಮೇಲಿರುವ ಪರಸ್ಪರಾಭಿಮುಖ ಗಿಳಿಗಳ ಹೃದಯ ಆಕಾರದ ಚಿತ್ರ ಬಹಳ ಆಕರ್ಷಕವಾಗಿದೆ. ಗಂಡು ಆನೆ ತನ್ನ ಸೊಂಡಲಿನಲ್ಲಿ ಅರಳುವ ಕಮಲ ಇಟ್ಟುಕೊಂಡಿದ್ದರೆ ಹೆಣ್ಣು ಆನೆಯ ಸೊಂಡಲಿನಲ್ಲಿ ಕಮಲದ ಮೊಗ್ಗು ಇರುವುದನ್ನು ಗಮನಿಸಬಹುದು. ಒಟ್ಟಾರೆ ಹೇಳುವುದಾದರೆ ಈ ಸ್ಮಾರಕ ಮಲೆನಾಡಿನ ಪಾಲಿಗೆ ಒಂದು ಸುಂದರ ಪ್ರೇಮಸೌಧ. ಒಬ್ಬ ಮಹಾನ್ ರಾಜಾ ವೆಂಕಟಪ್ಪ ನಾಯಕ ಹಾಗೂ ಸಾಮಾನ್ಯ ಮಹಿಳೆಯ ಪ್ರೇಮಕಥೆಗೆ ಸಾಕ್ಷಿಯಾಗಿರುವ ಈ ಸ್ಮಾರಕ ಹಾಗೂ ಅದರ ಪರಿಸರ ಹಾಳಾಗುತ್ತಿರುವುದು ಬೇಸರದ ಸಂಗತಿ. ಸರಸಿ ಎಂದರೆ ಆನಂದ ಆಶ್ರಯ ನೀಡುವ ಕೊಳ ಹಾಗಾಗಿ ಬಹುಶಃ ಈ ಊರಿಗೆ ಆನಂದಪುರ ಎಂದು ವೆಂಕಟಪ್ಪ ನಾಯಕರು ಮರುನಾಮಕರಣ ಮಾಡಿರಬಹುದು.

ಇನ್ನೂ ಅನಂದಪುರ ಮತ್ತು ಅದರ ಪರಿಸರಕ್ಕೆ ಸಂಬಂಧಿಸಿದಂತೆ ಇಕ್ಕೇರಿ ನಾಯಕರ ಪೋಷಿತ ಗ್ರಂಥಗಳಲ್ಲಿ ಈ ಪ್ರೇಮ ಕಥೆಯನ್ನು ಮರೆಮಾಚಿ ಹೊಸ ಸಂಗತಿಗಳು ನೀಡಲಾಗಿದೆ. ಕೆಳದಿ ಬಸವರಾಜ ನಾಯಕರು 16ನೇ ಶತಮಾನದಲ್ಲಿ ಸಂಕಲಿಸಿದ “ಶ್ರೀಶಿವತತ್ತ್ವರತ್ನಾಕರ” ಎಂಬ ಅದ್ಭುತ ಸಂಸ್ಕೃತ ವಿಶ್ವಕೋಶದಲ್ಲಿ ಒಂಭತ್ತು ಕಲ್ಲೋಲದ ನೂರಾಎಂಟು ತರಂಗಗಳ ಸುಮಾರು ಹದಿಮೂರು ಸಾವಿರ ಶ್ಲೋಕಗಳ ಮೂಲಕ ಹಲವಾರು ಕ್ಷೇತ್ರ, ಇತಿಹಾಸ, ಶಿಲ್ಪ ವಿಜ್ಞಾನ, ಪೂಜಾ ವಿಧಾನ ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಈ ವಿಶ್ವಕೋಶದ ಆರನೇ ಕಲ್ಲೋಲ – ಹದಿಮೂರನೇಯ ತರಂಗದ 158 ರಿಂದ 163 ನೇಯ ಸಂಸ್ಕೃತ ಶ್ಲೋಕ ಇಂದಿನ ಆನಂದಪುರಕ್ಕೆ ಸಂಬಂಧಿಸಿದ್ದು.
Saakshatv Naavu kelada charitre episode11

ಮೂಲ ಶ್ಲೋಕ:-
ತತ್ರ ಶೃಂಗಪುರಾಧೀಶಸ್ವಾಮಿನಾಂ ಮಠಮಾತನೋತ್ ||೧೫೮||
ಅಗ್ರಹಾರಂ ಚ ತತ್ರ‍್ಯೆವ ಬ್ರಾಹ್ಮಣಾನಾಮಕಲ್ಪಯತ್ |
ಭೂರುದ್ರಾಸ್ಪದಮತ್ರ‍್ಥಂ ಮಹಾಂತಂ ಮಠಮಾತನೋತ್ ||೧೫೯||
ತೇಷಾಮನಿತರಾಪೇಕ್ಷಾಂ ಭುವಂ ಭೂಯೋ ವಿತರ‍್ಣವಾನ್ |
ಅನಂತಂ ಚೋಚ್ಚಸರ‍್ವಭೌಮಸಂಸ್ಥಾನತಾಂ ಗತೇ ||೧೬೦||
ಅನಂತಶಿವಪರ‍್ಯಾಖ್ಯೇ ಸ್ಥಲೇ ಚಾನಂದನಾಮಕಮ್ |
ಪುರಂ ನರ‍್ಮಾಪ್ಯ ತಸ್ಯಾಂತಃ ಪ್ರಾಕಾರಂ ನಿರಮಾಪಯತ್ ||೧೬೧||
ತಸ್ಯಾಂತಸ್ತಾಂಡವೇಶಾಖ್ಯಮಾಲಯೇsಸ್ಥಾಪಯಚ್ಛಿವಮ್ |
ತಥೈವ ರಂಗನಾಥಾಖ್ಯದೇವಸ್ಯಾಪ್ಯಾಲಯಂ ನವಮ್ ||೧೬೨||
ನರ‍್ಮಾಪ್ಯ ತಸ್ಯ ಪೂಜರ‍್ಥಂ ಕ್ಷೇಂತ್ರ ಭೂರಿ ವಿಸೃಪ್ಟವಾನ್ |
ತತ್ರ ನಿಃಶ್ರೇಯಸರ‍್ಥಂ ಚ ಭೂರುದ್ರಾಣಾಂ ಮಹಾತ್ಮನಾಮ್ ||೧೬೩||
ಸನ್ಮಠಂ ಚಂಪಕಸರೋನಾಮಕಂ ರ‍್ಯಕಲ್ಪಯತ್ |
ಕನ್ನಡ ಅನುವಾದ:-
ಶೃಂಗೇರಿಯ ಅಧೀಶರಾದ ಸ್ವಾಮಿಗಳ ಮಠವನ್ನು ನರ‍್ಮಿಸಿದನು (ಕೆಳದಿ ವೆಂಕಟಪ್ಪ ನಾಯಕರು). ಅಲೇ ಬ್ರಾಹ್ಮಣರಿಗೆ ಅಗ್ರಹಾರವನ್ನು ಕಟ್ಟಿಕೊಟ್ಟನು. ಭೂರುದ್ರರಿಗೆ ವಾಸಸ್ಥಾನವಾದ ಅತ್ಯಂತ ವಿಶಾಲವಾದ ಮಠವನ್ನು ಕಟ್ಟಿಸಿದನು. ಅವರಿಗೆ ಸಮೃದ್ಧವಾದ ಭೂಮಿಯನ್ನು ಹೇರಳವಾಗಿ ವಿತರಿಸಿದನು. ಆ ಬಳಿಕ ಶ್ರೇಷ್ಠ ಸಾರ್ವಭೌಮ ಸಂಸ್ಥಾನವಾದ ಅನಂತ ಶಿವಪುರಿಯಲ್ಲಿ ಆನಂದ ಎಂಬ ಪಟ್ಟಣವನ್ನು ನರ‍್ಮಿಸಿ ಅದರ ಸುತ್ತಲೂ ಕೋಟೆಯನ್ನು ಕಟ್ಟಿಸಿದನು. ಅಲ್ಲಿ ತಾಂಡವೇಶ ದೇವಾಲಯದಲ್ಲಿ ಶಿವನನ್ನು ಪ್ರತಿಷ್ಠಾಪಿಸಿದನು. ಹಾಗೆಯೇ ರಂಗನಾಥ ದೇವಾಲಯವನ್ನೂ ಹೊಸದಾಗಿ ಕಟ್ಟಿಸಿದನು. ಅದರ ಪೂಜೆಗಾಗಿ ಹೇರಳ ಹೊಲವನ್ನು ದಾನಮಾಡಿದನು. ಅಲ್ಲಿ ಮೋಕ್ಷಸಾಧನೆಗಾಗಿ ಮಹಾತ್ಮರಾದ ಭೂರುದ್ರರ ಮಠವನ್ನು ನರ‍್ಮಿಸಿದನು. ಅದಕ್ಕೆ ಚಂಪಕ, ನೈಮಿಶಾ, ಚೈವ, ದಂಡಕಾ, ಗುಹಾಹ್ವಯಾ, ದ್ವೈಪಾಯನೀಯಾ, ಬದರೀ, ಕದಲೀ ಎಂಬ ಎಂಟು ಪುಣ್ಯ ಅರಣ್ಯಗಳಲ್ಲಿ ಒಂದಾದ “ಚಂಪಕ” ಅರಣ್ಯ ನಾಮಾಂಕಿತ “ಚಂಪಕಸರ” ಹೆಸರನ್ನು ಇಟ್ಟನು.

ಚಂಪಕಸರಸಿ ಪುಷ್ಕರಣಿ ವೆಂಕಟಪ್ಪನಾಯಕ ತನ್ನ ಪ್ರಿಯತಮೆಯ ನೆನಪಿಗೆ ಕಟ್ಟಿಸಿದನೋ ಅಥವಾ ಅದು ಚಂಪಕಸರಸಿ ಮಹಂತಿನ ಮಠವೋ ಅಥವಾ ಭೂರುದ್ರರಮಠವೋ ಅಥವಾ ಮಾಲತಿ ಮಠವೋ ಅಥವಾ ಅದು ಗುರುಗಳ ಗದ್ದಿಗೆಯೋ ಹೀಗೆ ಹತ್ತು ಹಲವಾರು ಪ್ರಶ್ನೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಇನ್ನೂ ಚಂಪಕ ಬೆಸ್ತರರಾಣಿಯೋ ಅಥವಾ ಇಸ್ಲಾಂ ಧರ್ಮದ ಹೆಣ್ಣೆ ಎನ್ನುವ ಗೋಜಿಗೆ ಹೋಗದೆ ಆ ಸುಂದರವಾದ ಪ್ರೇಮಸೌಧವನ್ನು ಸಂರಕ್ಷಿಸೋಣ.ಈ ಪುಷ್ಕರಣಿಗೆ ನೀರು ಒದಗಿಸುವ ಗುಡ್ಡದಲ್ಲಿ ನೀಲಗಿರಿ ಮತ್ತು ಅಕೇಶಿಯ ಮರಗಳ ನೆಡುತೋಪುಗಳು ನರ‍್ಮಾಣವಾಗಿ ನೀರಿನ‌ ಹರಿವು ಎಂದೋ ಸ್ತಬ್ಧವಾಗಿದೆ. ಅದೇ ರೀತಿ ನೀರು ಹೊರ ಹೋಗುವ ತೂಬು ಮತ್ತು ಕಾಲುವೆ ಸಹಾ ಹಾಳಾಗಿದ್ದು ಈ ಪುಷ್ಕರಣಿ ತನ್ನ ಕೊನೆಯ ಗಳಿಗೆಯಲ್ಲಿ ಸಹಾಯಕ್ಕಾಗಿ ಕೈಚಾಚಿರುವುದು ಬೇಸರದ ಸಂಗತಿ. ಈ ಸ್ಮಾರಕದ ಪಶ್ಚಿಮ ಭಾಗದ ಪರಿಸರ ಜಂಬಿಟ್ಟಿಗೆ ಗಣಿಗಾರಿಕೆ ಇಂದ ಹಾಳಾದರೆ ಪೂರ್ವದಲ್ಲಿ ಶುಂಠಿ ಬೆಳೆ ಪರಿಸರವನ್ನು ಹಾಳುಮಾಡುತ್ತಿದ್ದು ಇದರ ಬಗ್ಗೆ ಸ್ಥಳೀಯರು, ರಾಜಕೀಯ ನಾಯಕರು, ಸರ್ಕಾರರ ಮತ್ತು ಮಠಾಧೀಶರು ಜಾಗೃತವಹಿಸ ಬೇಕಾಗಿದೆ.

ಲೇಖನ ಮತ್ತು ಚಿತ್ರಗಳು:
-ಅಜಯ್‌ ಕುಮಾರ್‌ ಶರ್ಮಾ
ಇತಿಹಾಸ ಮತ್ತು ಪರಿಸರ ಅಧ್ಯಯನಕಾರರು
ಶಿವಮೊಗ್ಗ

Saakshatv Naavu kelada charitre episode11

ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: charitre episode11Saakshatv Naavu keladaSaakshatv Naavu kelada charitre episode11
ShareTweetSendShare
Join us on:

Related Posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

by Shwetha
July 5, 2026
0

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಸಂಭವಿಸಿದ ಅಡ್ಡ ಮತದಾನದ ಪ್ರಹಸನ ಈಗ ಹೈಕಮಾಂಡ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಕ್ಷದ್ರೋಹಿಗಳು ಯಾರು ಎಂಬುದು ಸಾಕ್ಷಿ ಸಮೇತ ಸಾಬೀತಾಗಿದ್ದರೂ, ಅವರ...

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

by Shwetha
July 5, 2026
0

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗ್ವಿಜಯ್ ಸಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ.ಅವರು, ನಾನು ಅಯೋಧ್ಯೆಯಲ್ಲಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ. ನಾನು ನೀಡಿದ ₹1.11 ಲಕ್ಷ...

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

by Shwetha
July 5, 2026
0

ಭಾರತದ ತೈಲ ಮಾರುಕಟ್ಟೆ ಕಂಪನಿಗಳು ಪೂರೈಸುತ್ತಿರುವ E20 (20% ಎಥೆನಾಲ್ ಮಿಶ್ರಿತ) ಪೆಟ್ರೋಲ್ ಅನ್ನು ಭೂತಾನ್ ಸ್ವೀಕರಿಸಲು ನಿರಾಕರಿಸಿದ್ದು, ಅದರ ಬದಲಿಗೆ ಸಾಮಾನ್ಯ (ಸ್ಟ್ಯಾಂಡರ್ಡ್) ಪೆಟ್ರೋಲ್ ಪೂರೈಸುವಂತೆ...

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

SIRಗೆ ಸರ್ಕಾರ ಯಾರಿಗೂ ಒತ್ತಾಯ ಮಾಡುತ್ತಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

by Shwetha
July 5, 2026
0

SIR ಪ್ರಕ್ರಿಯೆಯಲ್ಲಿ ಲೋಪಗಳಾಗುತ್ತಿವೆ ಎಂಬ ವಿಪಕ್ಷಗಳ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಮೀರಿ ಯಾರೂ ಏನನ್ನೂ ಮಾಡಲು...

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

by Shwetha
July 5, 2026
0

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು ಮತ್ತು ನಾಳೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram