ಸಂಸದ ಅನಂತ್ ಕುಮಾರ್ ಇದ್ದರೆಷ್ಟು ಹೋದರೆಷ್ಟು – ಅಸ್ನೋಟಿಕರ್ ಟೀಕೆ..!
ಕಾರವಾರ : ಸಂಸದ ಅನಂತ್ ಕುಮಾರ್ ಅನಾರೋಗ್ಯಕ್ಕೆ ಒಳಗಾಗಿದ್ದು ಬಿಜೆಪಿಯಲ್ಲಿ ಚಾನ್ಸ್ ಸಿಗತ್ತೆ ಅಂದುಕೊಂಡಿದ್ದೆ.
ಆದ್ರೆ ಅನಂತಕುಮಾರ ಹೆಗಡೆ ಮತ್ತೆ ಗಟ್ಟಿ ಆದ್ರು ಎಂದು ಮಾಜಿ ಸಚಿವ ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರವಾರದಲ್ಲಿ ಮಾತನಾಡಿರುವ ಅಸ್ನೋಟಿಕರ್ ಸಂಸದ ಹೆಗಡೆ ಅನಾರೋಗ್ಯಕ್ಕೆ ಒಳಗಾಗಿದಕ್ಕೆ ತನ್ನ ಸ್ನೇಹಿತರು ಬಿಜೆಪಿ ಹೋಗಿ ಎಂದು ಸಲಹೆ ನೀಡಿದ್ರು.
ಆದ್ರೆ ಈಗ ಹೆಗಡೆ ಗಟ್ಟಿ ಆಗಿದ್ದಾರೆ. ಮತ್ತೆ ಈಗ ಯಾವುದಾದರೂ ಒಂದು ಅಲೆಯಲ್ಲಿ ಗೆಲುವು ಸಾದಿಸುತ್ತಾರೆ ಎಂದಿದ್ದಾರೆ.
ಅಲ್ಲದೇ ಸಂಸದ ಹೆಗಡೆ ಇದ್ದರೆಷ್ಟು ಹೋದರೆಷ್ಟು. ಆತ ಸಂಸದನಾಗಿ ಆರೋಗ್ಯದಿಂದ ಇದ್ರೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲ್ಲ.
ಅನಾರೋಗ್ಯಕ್ಕೆ ಒಳಗಾದ್ರೆ ಏನೂ ನಷ್ಟ ಇಲ್ಲ. ಕೋಮು ಗಲಭೆ ಇದ್ರೆ ಮಾತ್ರ ಕ್ಷೇತ್ರದಲ್ಲಿ ಬಂದು ಬೆಂಕಿ ಹಚ್ಚಿಸುವ ಸಂಸದನ ಬಗ್ಗೆ ಕರುಣೆ ಇಲ್ಲ ಎಂದು ಟೀಕೆ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
