Anasuya | ನೀರಿನ ಅಲೆಗಳ ನಡುವೆ ಅನುಸೂಯ ಲಿಪ್ ಲಾಕ್
ಆ ಕಡೆ ಆಂಕರಿಂಗ್ .. ಈ ಕಡೆ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿರುವ ಅನಸೂಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.
ಸದ್ಯ ದರ್ಜಾ, ವಾಂಟೆಡ್ ಪಾಂಡುಗಡ್, ಗಾಡ್ ಫಾದರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸದಾ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಅನಸೂಯ, ತನ್ನ ಪತಿ ಸುಶಾಂಕ್ ಭಾರದ್ವಾಜ್ ಜೊತೆ ಬೀಚ್ ನಲ್ಲಿದ್ದ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಅನಸೂಯಾ ಮತ್ತು ಸುಶಾಂಕ್ ಪರಸ್ಪರ ಪ್ರೀತಿಯಿಂದ ಅಪ್ಪಿಕೊಂಡಿರೋದು. ಲಿಪ್ಲಾಕ್ ಮತ್ತು ರೋಮ್ಯಾಂಟಿಕ್ ಭಂಗಿಗಳಿಂದ ವಿಡಿಯೋ ತುಂಬಿದೆ.
ತಮ್ಮ 12 ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅನಸೂಯಾ ತನ್ನ ಪತಿಯೊಂದಿಗೆ ಸಮುದ್ರದ ತೀರದಲ್ಲಿ ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯುತ್ತಾರೆ.
ಈ ವಿಡಿಯೋವನ್ನು ಶೇರ್ ಮಾಡುತ್ತಾ, ‘ಆತ್ಮೀಯ ನಿಕ್ಕು.. ನಾವಿಬ್ಬರೂ ಜೊತೆಗಿರೋದೇ ನನಗೆ ಅದ್ಭುತ ಪ್ರದೇಶ. ನೀನು ನನ್ನ ಪಕ್ಕದಲ್ಲಿದ್ದರೆ ನಾನು ಒಂದು ಕೈಯಿಂದ ಈ ಜಗತ್ತನ್ನು ಗೆಲ್ಲಬಲ್ಲೆ.
ನಮ್ಮ ಪ್ರೀತಿಯ ಪಯಣದಲ್ಲಿ ಹಲವು ಮಧುರ ನೆನಪುಗಳು, ಹಲವು ಏರಿಳಿತಗಳು, ಹಲವು ಮಧುರ ಕ್ಷಣಗಳಿವೆ.
ಎಲ್ಲಕ್ಕಿಂತ ಹೆಚ್ಚಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ. ನನಗೆ ವಯಸ್ಸಾಗುವವರೆಗೂ ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ ಬರೆದಿದ್ದಾರೆ.