Andhra Pradesh : ಸಂಕ್ರಾತಿಗೆ ಬಂದ ಅಳಿಯನಿಗೆ 379 ರೀತಿಯ ಭಕ್ಷ್ಯ ಭೋಜನ ಬಡಿಸಿದ ಕುಟುಂಬ…
ಹೊಸದಾಗಿ ಮದುವೆಯಾದ ಅಳಿಯನನ್ನ ಮನೆಗೆ ಕರೆದು ಸತ್ಕರಿದುವುದು ಭಾರತೀಯ ಸಂಪ್ರದಾಯ, ಹೀಗೆ ಬಂದ ಅಳಿಯನಿಗೆ ವಿವಿಧ ರೀತಿಯ ಭಕ್ಷ್ಯ ಭೋಜನಗಳನ್ನ ಸಿದ್ದ ಪಡಿಸಿ ಅಳಿಯನ್ನ ಗೌರವದಿಂದ ಕಾಣಲಾಗುತ್ತದೆ. ಶಿಷ್ಟಾಚಾರಕ್ಕೆ ಹೆಸರಾದ ಆಂಧ್ರಪ್ರದೇಶದ ಗೋದಾವಾರಿ ಜಿಲ್ಲೆಯಲ್ಲಿ ನೂತನವಾಗಿ ಮದುವೆಯಾಗಿದ್ದ ವಧು ವರರು ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬಂದಿದ್ದ ಸಮಯದಲ್ಲಿ ಕಟುಂಬವೊಂದು 379 ರೀತಿಯ ಅಡುಗೆಗಳನ್ನ ಅಳಿಯನಿಗೆ ಬಡಿಸಿ ಉಣ ಬಡಿಸಿದೆ.
ಏಲೂರು ನಗರದ ಡೊಂಗಲ ಮಂಟಪದ ಭೀಮಾ ರಾವ್ ಮತ್ತು ಚಂದ್ರಲೀಲಾ ತಮ್ಮ ಮಗಳನ್ನ ಅನಕಪಲ್ಲಿಯ ಮುರುಳಿ ಎಂಬುವವರಿಗೆ ಕೊಟ್ಟು ಏಪ್ರಿಲ್ ನಲ್ಲಿ ಮದುವೆ ಮಾಡಿದ್ದರು. ಮದುವೆ ನಂತರದ ಮೊದಲ ಸಂಕ್ರಾಂತಿ ಇದಾಗಿದ್ದರಿಂದ ಜೀವನದಲ್ಲಿ ಮರೆಯದ ರೀತಿಯಲ್ಲಿ ವ್ಯವಸ್ಥೆ ಮಾಡಬೇಕೇಂದು ಹಲವು ರೀತಿಯ ಸಿಹಿ ತಿಂಡಿಗಳು ಖಾರಾ ತಿಂಡಿಗಳು ಊಟ ಉಪ್ಪಿನಕಾಯಿ ಕೂಲ್ ಡ್ರಿಂಕ್ಸ್ ಸೇರಿದಂತೆ 379 ಬಗೆಯ ಖಾದ್ಯಗಳನ್ನ ಅಳಿಯನಿಗಾಗಿ ಸಿದ್ದಪಡಿಸಲಾಗಿದೆ.
ಅಳಿಯನನ್ನ ಎತ್ತಿಕೊಂಡು ಬಂದು ಡೈನಿಗ್ ಟೇಬಲ್ ಮೇಲೆ ಕೂರಿಸಿದಾಗ ಟೇಬಲ್ ಮೇಲಿದ್ದ ತಿಂಡಿ ತಿನಿಸುಗಳನ್ನನೋಡಿ ಅಳಿಯ ಬೆಚ್ಚಿ ಬಿದ್ದಿದ್ದಾನೆ.
Andhra Pradesh: Son-in-law who came to Sankranti was treated with 379 types of food.