5 ಸಿಕ್ಸರ್..1 ಬೌಂಡರಿ.. ರಸೆಲ್ ರನ್ ಸುನಾಮಿ andre-russell saaksha tv
ವಿಶ್ವಕ್ರಿಕೆಟ್ ಬಾಹುಬಲಿ ಆಂಡ್ರೆ ರಸೆಲ್ ವಿಧ್ವಂಸಕ ಆಟಕ್ಕೆ ಹೇಳಿ ಮಾಡಿಸಿದಂತಹ ಆಟಗಾರ. ಚುಟುಕು ಕ್ರಿಕೆಟ್ ನಲ್ಲಿ ಸಿಂಹದಂತೆ ಘರ್ಜಿಸುವ ರಸೆಲ್, ಎದುರಾಳಿ ಬೌಲರ್ ಗಳಿಗೆ ಸಿಂಹಸ್ವಪ್ನವಾಗುತ್ತಾರೆ.
ಬೌಲಿಂಗ್ ನಲ್ಲಿ ಬೆಂಕಿ ಚೆಂಡುಗಳಂತಹ ಯಾರ್ಕರ್ ಗಳನ್ನ ಹಾಕಿ ಬ್ಯಾಟರ್ ಗಳ ಎದೆನಡುಗಿಸುತ್ತಾರೆ.
ಸದ್ಯ ರೆಡ್ ಹಾರ್ಸ್ ಫಾರ್ಮ್ ನಲ್ಲಿರುವ ರಸೆಲ್, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ನಲ್ಲಿ ಸುನಾಮಿ ಇನ್ನಿಂಗ್ಸ್ ಆಡಲಿದ್ದಾರೆ.
ಆರು ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿ ಘರ್ಜಿಸಿದ್ದಾರೆ. ಇದರೊಂದಿಗೆ ಪಂದ್ಯದ ಗತಿಯಲ್ಲೇ ಬದಲಾಯಿಸಿದ್ದಾರೆ.
ರಸೆಲ್ ಈ ಬಾರಿಯ ಬಿಗ್ ಬ್ಯಾಷ್ ಲೀಗ್ ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಟೂರ್ನಿಯಲ್ಲಿ ಮೆಲ್ಬಾರ್ನ್ ವಿರುದ್ಧದ ಪಂದ್ಯದಲ್ಲಿ ಸಿಡ್ನಿ ಥಂಡರ್ ತಂಡವೂ ಮೊದಲು ಬ್ಯಾಟ್ ಮಾಡಿತ್ತು. ನಿಗದಿತ 20 ಓವರ್ ಗಳಲ್ಲಿ ಸಿಡ್ನಿ ತಂಡ 152 ರನ್ ಗಳಿಸಿತ್ತು.
ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಮೆಲ್ಬೋರ್ನ್ 12 ಓವರ್ಗಳಲ್ಲಿ 83 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ಕ್ರೀಸ್ ಗೆ ಇಳಿದ ರಸೆಲ್ ಒಂದೇ ಓವರ್ ನಲ್ಲಿ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು.
ರಸೆಲ್ 21 ಎಸೆತಗಳಲ್ಲಿ ಐದು ಸಿಕ್ಸರ್ಗಳನ್ನು ಹೊಡೆದು 200 ಸ್ಟ್ರೈಕ್ ರೇಟ್ ನಲ್ಲಿ 42 ರನ್ ಗಳಿಸಿದರು. ಅಲ್ಲದೇ ಇನ್ನೂ
17 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.