ಹೊಸ ಪ್ರತಿಭಗಳನ್ನೇ ಒಳಗೊಂಡ ಸ್ಯಾಂಡಲ್ ವುಡ್ ನ ಹೊಸ ಚಿತ್ರ “ಅಂದುಕೊಂಡಂತೆ” (andukondante kannada movie) ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಚಿತ್ರದ ಫಸ್ಟ್ ಲುಕ್ ಲೋಕಾರ್ಪಣೆಗೊಳಿಸಿದ್ದಾರೆ. ಟೈಟಲ್ ನಿಂದಲೇ ಗಮನ ಸೆಳೆದಿದ್ದ ಚಿತ್ರದ ಫಸ್ಟ್ ಲುಕ್ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.
ಪೋಸ್ಟರ್ ವಿಭಿನ್ನವಾಗಿರುವ ಜೊತೆಜೊತೆಗೆ ಚಿತ್ರದ ಕಥೆ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಪೋಸ್ಟರ್ ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಚಿತ್ರದಲ್ಲಿ (andukondante kannada movie) ವಿಶ್ರುತ್ ರಾಜ್ , ಪ್ರಮೋದ್ ಬೋಪಣ್ಣ, ರಿಷ್ವಿ ಭಟ್ , ಲೋಕೇಶ್, ಲೋಹಿತ್ ಗೌಡ, ಕಿರಣ್, ವಿನಯ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಈ ಚಿತ್ರಕ್ಕೆ ಯುವ ನಿರ್ದೇಶಕ ಶ್ರೇಯಸ್ ಆಕ್ಷನ್ ಕಟ್ ಹೇಳುತ್ತಿದ್ದು, ಅವರೇ ಕಥೆ,ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಚಿತ್ರಕ್ಕೆ ರಮೇಶ್ ಕೊಯಿರ ಹಾಗೂ ಶ್ರೇಯಸ್ ಬಂಡವಾಳ ಹೂಡಿದ್ದಾರೆ. ಇನ್ನೂ ಚಿತ್ರಕ್ಕೆ ಅನಂತ ಕಾಮತ್ ಅವರ ಸಂಗೀತವಿದ್ದು, ರಮೇಶ್ ಕೊಯಿರ ಅವರ ಛಾಯಾಗ್ರಹಣವಿದೆ.
ಸ್ಯಾಂಡಲ್ ವುಡ್ ನ ಹೊಸ ಸುದ್ದಿಗಳನ್ನು ಇಲ್ಲಿ ಓದಿ