Angelo Mathews : 14ನೇ ಟೆಸ್ಟ್ ಶತಕದೊಂದಿಗೆ ಜಯಸೂರ್ಯ ದಾಖಲೆ ಸರಿಗಟ್ಟಿದ ಮ್ಯಾಥ್ಯೂಸ್
ಶ್ರೀಲಂಕಾ ತಂಡದ ಹಿರಿಯ ಆಟಗಾರ ಏಂಜೆಲೋ ಮ್ಯಾಥ್ಯೂವ್ಸ್(115) ನ್ಯೂಜಿ಼ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್‌ನಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಲಂಕಾ ತಂಡದ ಮಾಜಿ ಆಟಗಾರ ಸನತ್ ಜಯಸೂರ್ಯ ದಾಖಲೆ ಸರಿಗಟ್ಟಿದ್ದಾರೆ.
ಕ್ರೈಸ್ಟ್ ಚರ್ಚ್‌ನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನದಾಟದಲ್ಲಿ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಮ್ಯಾಥ್ಯೂವ್ಸ್ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಏಂಜೆಲೋ ಮ್ಯಾಥ್ಯೂವ್ಸ್, ಕಿವೀಸ್ ಬೌಲಿಂಗ್ ದಾಳಿಗೆ ದಿಟ್ಟಪ್ರತ್ಯುತ್ತರ ನೀಡಿದರು. ಅತ್ಯುತ್ತಮ ಆಟವಾಡಿದ ಮ್ಯಾಥ್ಯೂವ್ಸ್ ಶತಕ ದಾಖಲಿಸಿದರು. ಇವರ ಶತಕದ ನೆರವಿನಿಂದ ಶ್ರೀಲಂಕಾ 2ನೇ ಇನ್ನಿಂಗ್ಸ್‌ನಲ್ಲಿ 302 ರನ್‌ಗಳಿಸುವ ಮೂಲಕ ಅತಿಥೇಯ ತಂಡಕ್ಕೆ 285 ರನ್‌ಗಳ ಟಾರ್ಗೆಟ್ ನೀಡಿದೆ.
ಈ ಶತಕದೊಂದಿಗೆ ಏಂಜೆಲೋ ಮ್ಯಾಥ್ಯೂವ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಬಾರಿಸಿದ ಆಟಗಾರರ ಲಿಸ್ಟ್‌ನಲ್ಲಿ ಸನತ್ ಜಯಸೂರ್ಯ(14 ಶತಕ) ಅವರ ದಾಖಲೆ ಸರಿಗಟ್ಟಿದರು. ಇದು ಮ್ಯಾಥ್ಯೂವ್ಸ್ ಅವರ 14ನೇ ಟೆಸ್ಟ್ ಶತಕವಾಗಿದ್ದು, ಈ ವರ್ಷದ ಮೊದಲ ಶತಕವಾಗಿದೆ. ಅಲ್ಲದೇ ಕಿವೀಸ್ ವಿರುದ್ಧ ದಾಖಲಾದ 2ನೇ ಶತಕವಾಗಿದ್ದು, ಈ ಮೊದಲು 2018ರಲ್ಲಿ ನ್ಯೂಜಿ಼ಲೆಂಡ್ ವಿರುದ್ಧ ಮೊದಲ ಶತಕ ದಾಖಲಿಸಿದ್ದರು.
ಅಲ್ಲದೇ ಈ ಶತಕದೊಂದಿಗೆ ಏಂಜೆಲೋ ಮ್ಯಾಥ್ಯೂವ್ಸ್, ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣಾರತ್ನೆ ಅವರ 14 ಟೆಸ್ಟ್ ಶತಕಗಳ ಸಾಧನೆಯನ್ನು ಸಮಗೊಳಿಸಿದರು. ಅನುಭವಿ ಆಟಗಾರ ಮ್ಯಾಥ್ಯೂವ್ಸ್ ಅವರ ಈ ಪ್ರದರ್ಶನ ಲಂಕಾ ತಂಡಕ್ಕೆ ಆಸರೆಯಾಗಿದ್ದು, ಪಂದ್ಯದಲ್ಲಿ ಮೇಲುಗೈ ಸಾಧಿಸಿರುವ ಶ್ರೀಲಂಕಾ ಮೊದಲ ಟೆಸ್ಟ್ ಗೆಲುವಿನ ನಿರೀಕ್ಷೆ ಹೊಂದಿದೆ.
ಶ್ರೀಲಂಕಾ ಪರ ಹೆಚ್ಚು ಶತಕಗಳು:
1. ಕುಮಾರ ಸಂಗಕ್ಕಾರ – 134 ಪಂದ್ಯಗಳಲ್ಲಿ 38
2. ಮಹೇಲಾ ಜಯವರ್ಧನೆ – 149 ಪಂದ್ಯಗಳಲ್ಲಿ 34
3. ಅರವಿಂದ ಡಿಸಿಲ್ವಾ – 93 ಪಂದ್ಯಗಳಲ್ಲಿ 20
4. ತಿಲಕರತ್ನೆ ದಿಲ್ಶನ್ – 87 ಪಂದ್ಯಗಳಲ್ಲಿ 16
5. ಮಾರ್ವನ್ ಅಟಪಟ್ಟು – 90 ಪಂದ್ಯಗಳಲ್ಲಿ 16
6. ತಿಲನ್ ಸಮರವೀರ – 81 ಪಂದ್ಯಗಳಲ್ಲಿ 14
7. ದಿಮುತ್ ಕರುಣರತ್ನ – 83 ಪಂದ್ಯಗಳಲ್ಲಿ 14
8. ಏಂಜೆಲೊ ಮ್ಯಾಥ್ಯೂಸ್ – 101 ಪಂದ್ಯಗಳಲ್ಲಿ 14
9. ಸನತ್ ಜಯಸೂರ್ಯ – 110 ಪಂದ್ಯಗಳಲ್ಲಿ 14
Angelo Mathews : Mathews equaled Jayasuriya’s record with 14th Test century