ಲಂಡನ್ : ದಶಕದ ಹಿಂದೆ ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದ ಅನಿಲ್ ಧೀರೂಭಾಯ್ ಅಂಬಾನಿ ಗ್ರೂಫ್ ನ ಚೇರ್ ಮನ್ ಅನಿಲ್ ಅಂಬಾನಿ ಈಗ ನಿರ್ಗತಿಕರಾಗಿದ್ದಾರೆ.
ಈಗ ನಾನು ಪಾಪರ್ ಆಗಿದ್ದೇನೆ ಎಂದು ಅನಿಲ್ ಅಂಬಾನಿ ಅವರು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.
ಚೀನೀ ಕಂಪನಿಗಳು ಹೂಡಿರುವ ವ್ಯಾಜ್ಯದಂತೆ ಸಾಲ ಮರುಪಾವತಿಸಲು ಅಥವಾ ಕಾನೂನು ಹೋರಾಟದ ವೆಚ್ಚ ಭರಿಸುವುದಕ್ಕೆ ತನ್ನ ಬಳಿ ಈಗ ಬೆಲೆ ಬಾಳುವಂಥದ್ದೇನೂ ಉಳಿದಿಲ್ಲ.
ನನ್ನ ಬಳಿ ರಾಲ್ಸ್ ರಾಯ್ಸ್ ಅಥವಾ ಯಾವುದೇ ಐಷಾರಾಮಿ ಕಾರು ಇಲ್ಲ. ಇರುವುದು ಒಂದೇ ಒಂದು ಕಾರು. ವ್ಯಾಜ್ಯದ ವೆಚ್ಚವನ್ನು ಸರಿದೂಗಿಸಲು ಚಿನ್ನಾಭರಣ ಮಾರಾಟ ಮಾಡಿದೆ.
ಅದರಿಂದ 9.9 ಕೋಟಿ ರೂಪಾಯಿ ಬಂದಿದೆ. ಸದ್ಯ ನನ್ನ ಜೀವನಶೈಲಿಯೂ ಸರಳವಾಗಿದೆ. ಕನಿಷ್ಠ ವೆಚ್ಚದಲ್ಲಿ ಜೀವನ ಸಾಗಿಸುತ್ತಿದ್ದೇನೆ.
ಸಂಗೀತಲೋಕದ ಅಪೂರ್ವ ಸಹೋದರರು : 2 ವರ್ಷಗಳ ಹಿಂದೆ ಜೇಸುದಾಸ್ ಕುರಿತು ಎಸ್ಪಿಬಿ ಹೇಳಿದ ಕಥೆ
ಅದನ್ನು ನನ್ನ ಪತ್ನಿ ಮತ್ತು ಕುಟುಂಬದವರು ನೋಡಿಕೊಳ್ಳುತ್ತಿದ್ದಾರೆ ಎಂದು ಅನಿಲ್ ಅಂಬಾನಿ ಲಂಡನ್ ಕೋರ್ಟ್ ಗೆ ತಿಳಿಸಿರುವುದಾಗಿ ವರದಿಯಾಗಿದೆ.
680 ಶತಕೋಟಿ ಡಾಲರ್ ಸಾಲ ಮರುಪಾವತಿಸಿಲ್ಲ, ಅಲ್ಲದೆ, ಮರುಸಾಲ ರೂಪದಲ್ಲಿ ಪಡೆದ 925 ದಶಲಕ್ಷ ಡಾಲರನ್ನೂ ಹಿಂದಿರುಗಿಸದೇ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಮೂರು ಚೀನೀ ಬ್ಯಾಂಕುಗಳು ಅನಿಲ್ ಅಂಬಾನಿ ವಿರುದ್ಧ ವ್ಯಾಜ್ಯ ಹೂಡಿವೆ.








