ಕಾರವಾರ: ರಾಜ್ಯದಲ್ಲಿ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಪರಸ್ಪರ ಕಾಲೆಳೆಯುವ ಕಾರ್ಯ ನಡೆಯುತ್ತಿದೆ. ಸದ್ಯ ಭಜರಿಂಗ ವಿಷಯವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ತಿಕ್ಕಾಟ ನಡೆಸುತ್ತಿವೆ. ಇದೇ ವಿಷಯ ಮುಂದಿಟ್ಟುಕೊಂಡು ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಣಿಯಲು ಬಿಜೆಪಿ ತಂತ್ರ ನಡೆಸುತ್ತಿದೆ.
ಈ ವಿಷಯವಾಗಿ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar), ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಜೆಪಿಯವರು ಸರಿಯಾಗಿ ಓದಿಲ್ಲ. ಕಾರವಾರದಲ್ಲಿ ಹೇಳಿದರು. ಹಿಂದೂತ್ವ (Hindutva) ಮತ್ತು ಅಂಜನೇಯನನ್ನು (Anjaneya) ಬಿಜೆಪಿಯವರದ್ದಾ? ನಾನು ಹಿಂದೂ, ಸಿದ್ದರಾಮಯ್ಯನವರೂ ಹಿಂದೂ. ಈ ರೀತಿ ಜನರನ್ನು ತಪ್ಪು ದಾರಿಗೆ ಎಳೆಯಬಾರದು ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಬಂಗಾರಪ್ಪನವರು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ ಆರಾಧನಾ ಯೋಜನೆ ಜಾರಿಗೆ ತಂದು ಹಳ್ಳಿಹಳ್ಳಿಯಲ್ಲಿರುವ ದೇವಸ್ಥಾನಗಳನ್ನು ಸುಸ್ಥಿತಿಗೆ ತಂದಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಹನುಮ ಹುಟ್ಟಿದ ಸ್ಥಳದಲ್ಲಿ ಒಂದು ಪ್ರಾಧಿಕಾರವನ್ನು ಸ್ಥಾಪಿಸಿ, ಎಲ್ಲ ಗ್ರಾಮಗಳಲ್ಲಿ ಆಂಜನೇಯ ದೇವಸ್ಥಾನ ಮತ್ತು ಹನುಮಾನ್ ಗರಡಿಮನೆಗಳನ್ನು ಸ್ಥಾಪಿಸಲು ಬದ್ಧವಾಗಿದೆ ಎಂದು ಹೇಳಿದರು.