ADVERTISEMENT
Thursday, August 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಯಶಸ್ಸಿನ ಹಿಂದೆ ಅಂಜು ಬಾಬಿ ಜಾರ್ಜ್ ಹೇಳಿಕೊಂಡ ಆ ನೋವಿನ ವಿಚಾರವೇನು..?

admin by admin
December 9, 2020
in Newsbeat, Sports, ಕ್ರೀಡೆ
anju george india saakshatv
Share on FacebookShare on TwitterShare on WhatsappShare on Telegram

ಯಶಸ್ಸಿನ ಹಿಂದೆ ಅಂಜು ಬಾಬಿ ಜಾರ್ಜ್ ಹೇಳಿಕೊಂಡ ಆ ನೋವಿನ ವಿಚಾರವೇನು..?

anju boby george india saakshatvಅಂಜು ಬಾಬಿ ಜಾರ್ಜ್… ಎರಡು ಮೂರು ದಶಕಗಳ ಹಿಂದೆ ಸದಾ ಸುದ್ದಿಯಲ್ಲಿರುತ್ತದ್ದ ಹೆಸರು. ಯಾಕಂದ್ರೆ ಭಾರತೀಯ ಅಥ್ಲೆಟಿಕ್ಸ್ ರಂಗಕ್ಕೆ ಹೊಸ ಮೆರಗನ್ನು ತಂದುಕೊಟ್ಟ ಕ್ರೀಡಾಪಟು ಅಂಜು ಬಾಬಿ ಜಾರ್ಜ್.
100 ಮೀಟರ್ ಹರ್ಡಲ್ಸ್, ಹೆಪ್ಟಥ್ಲಾನ್, ಟ್ರಿಪಲ್ ಜಂಪ್, ಲಾಂಗ್ ಜಂಪ್ ಸ್ಪರ್ಧೆಗಳಲ್ಲಿ ಭಾಗಿಯಾಗಿ ಯಶಸ್ಸು ಸಾಧಿಸಿದ್ದ ಅಂಜು ಕೊನೆಗೆ ಯಶಸ್ಸಿನ ಉತ್ತುಂಗಕ್ಕೇರಿದ್ದು ಲಾಂಗ್ ಜಂಪ್ ಸ್ಪರ್ಧೆಯಲ್ಲಿ.
2001ರಲ್ಲಿ ಲಾಂಗ್ ಜಂಪ್ ಸ್ಪರ್ಧೆಯಲ್ಲಿ 6.74 ಮೀಟರ್ ದೂರ ಜಿಗಿದು ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರು. ನಂತರ 2003ರ ಪ್ಯಾರಿಸ್ ವಿಶ್ವ ಚಾಂಪಿಯನ್‍ಶಿಪ್ ಅಥ್ಲೆಟಿಕ್ಸ್ ನಲ್ಲಿ 6.70 ಮೀಟರ್ ದೂರ ಜಿಗಿದು ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಹಾಗೇ 2003ರ ಆಫ್ರೋ ಏಷ್ಯನ್ ಗೇಮ್ಸ್ ನಲ್ಲಿ 6.83 ದೂರ ಜಿಗಿದು ಚಿನ್ನದ ಪದಕ ಜೊತೆಗೆ ತನ್ನ ಜೀವನದ ಶ್ರೇಷ್ಠ ಸಾಧನೆಯನ್ನು ಮಾಡಿದ್ದರು.
ಕಾಮನ್‍ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್, ಒಲಿಂಪಿಕ್ಸ್ ಸೇರಿದಂತೆ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಭಾರತದ ತ್ರಿವರ್ಣ ಧ್ವಜವನ್ನು ರಾರಾಜಿಸುವಂತೆ ಮಾಡಿರುವ ಭಾರತದ ಹೆಮ್ಮೆಯ ಅಥ್ಲೀಟ್ ಅಂಜು ಬಾಬಿ ಜಾರ್ಜ್.
ಅಂಜು ಬಾಬಿ ಜಾರ್ಜ್ ಸಾಧನೆಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಒಲಿದು ಬಂದಿವೆ, ಅಥೇನ್ಸ್ ಮತ್ತು ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಭಾಗಿಯಾಗಿರುವ ಹೆಮ್ಮೆ ಕೂಡ ಅಂಜು ಬಾಬಿ ಜಾರ್ಜ್ ಅವರದ್ದು.
ಆದ್ರೆ ಇದೀಗ ಅಂಜು ಬಾಬಿ ಜಾರ್ಜ್ ತನ್ನ ಕ್ರೀಡಾ ಬದುಕಿನ ನೋವಿನ ಗುಟ್ಟನ್ನು ಬಹಿರಂಗಗೊಳಿಸಿದ್ದಾರೆ. ಈ ವಿಚಾರವನ್ನು ಕೇಳಿದಾಗ ಒಂದು ಕ್ಷಣ ಅಚ್ಚರಿಯಾಗಬಹುದು. ನೋವಿನಲ್ಲೂ ಇಷ್ಟೆಲ್ಲಾ ಸಾಧನೆ ಮಾಡಿದ್ರಲ್ಲ ಅಂತ ಹೆಮ್ಮೆ ಪಡಬೇಕಾಗುತ್ತದೆ. ಅಷ್ಟಕ್ಕೂ ಅಂಜು ಬಾಬಿ ಜಾರ್ಜ್ ಅವರ ಕ್ರೀಡಾ ಬದುಕಿನಲ್ಲಿ ಕಾಡಿದ್ದ ನೋವು ಯಾವುದು ಅಂದಾಗ ಅವರು ಹೇಳಿಕೊಂಡಿದ್ದು ತನ್ನ ಮೂತ್ರಪಿಂಡದ ವಿಚಾರವನ್ನು.
ಹೌದು, ಅಂಜು ಬಾಬಿ ಜಾರ್ಜ್ ಅವರನ್ನು ನೋಡಿದಾಗ ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಆರೋಗ್ಯದ ತೊಂದರೆ ಏನು ಇಲ್ಲ ಅಂತ ಅಂದುಕೊಳ್ಳಬಹುದು. ಆದ್ರೆ ಅಂಜು ಜಾರ್ಜ್ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಒಂದು ಕಿಡ್ನಿಯನ್ನಿಟ್ಟುಕೊಂಡೇ ಅವರು ಕ್ರೀಡೆಯಲ್ಲಿ ಮತ್ತು ಜೀವನದದಲ್ಲಿ ಯಶಸ್ಸು ಸಾಧಿಸಿದ್ದಾರೆ.
ನೀವು ನಂಬುವುದಾದ್ರೆ ನಂಬಿ ಇಲ್ಲ ಬಿಟ್ಟು ಬಿಡಿ.. ಒಂದೇ ಕಿಡ್ನಿಯನ್ನಿಟ್ಟುಕೊಂಡು ವಿಶ್ವದ ಅಗ್ರಸ್ಥಾನಕ್ಕೇರಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬಳು. ಈ ವಿಚಾರದಲ್ಲಿ ನಾನು ಅದೃಷ್ಟಶಾಲಿ. ಹಾಗೇ ಇದನ್ನು ಕೋಚ್ ನ ಮ್ಯಾಜಿಕ್ ಅಂತೀರಾ.. ಪ್ರತಿಭೆ ಅಂತೀರಾ ಅಂತ ಅಂಜು ಬಾಬಿ ಜಾರ್ಜ್ ಅವರು ಟ್ವಿಟ್ ಮಾಡಿದ್ದಾರೆ.
anju boby george india saakshatvಸಹಜವಾಗಿ ನಾನು ಆರೋಗ್ಯವಾಗಿದ್ದೇನೆ. ಹಾಗಾಗಿ ನಾನು ಯಶಸ್ಸು ಸಾಧಿಸಿದ್ದೇನೆ ಅಂತ ಎಲ್ಲರು ತಿಳಿದುಕೊಂಡಿದ್ದಾರೆ. ಆದ್ರೆ ನನ್ನ ಯಶಸ್ಸು ಬಂದಿರೋದು ಕಷ್ಟ ಹಾಗೂ ನೋವಿನಲ್ಲೇ. ಹೀಗಾಗಿ ನನ್ನ ಕ್ರೀಡಾ ಬದುಕು ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಬಹುದು ಅನ್ನೋ ಕಾರಣಕ್ಕೆ ಈ ವಿಚಾರವನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
2003ರ ಪ್ಯಾರೀಸ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಸ್ ಗೆ ರೆಡಿಯಾಗುತ್ತಿದೆ. ಕೇವಲ 20 ದಿನಗಳಲ್ಲಿ ನಾನು ಎಲ್ಲಾ ಸಮಸ್ಯೆಗಳಿಂದ ಹೊರಬಂದಿದ್ದೇನೆ. ಇದು ನನಗೆ ಆಘಾತಕಾರಿ ಸುದ್ದಿಯಾಗಿತ್ತು. ಆದ್ರೆ ಬಾಬಿ ಅವರು ನನಗೆ ಪ್ರೇರಣೆ ನೀಡಿದ್ದರು. ಹೀಗಾಗಿ ಯಶಸ್ಸು ಸಾಧಿಸಲು ಸಾಧ್ಯವಾಯ್ತು. ನನಗೆ ಏನಾದ್ರೂ ತೊಂದರೆಯಾಗುತ್ತಿದ್ರೆ ಪತಿ ಬಾಬಿ ಅವರು ಕಿಡ್ನಿ ಕೂಡ ಕೊಡುತ್ತಿದ್ದರು. ಅಂತಿಮವಾಗಿ ಪ್ಯಾರಿಸ್ ನಲ್ಲಿ ಕಂಚಿನ ಪದಕ ಗೆಲ್ಲಲು ಕೂಡ ಸಫಲನಾದೆ ಎಂದು ಅಂಜು ಬಾಬಿ ಜಾರ್ಜ್ ಹೇಳಿಕೊಂಡಿದ್ದಾರೆ.
ಅಂಜು ಬಾಬಿ ಜಾರ್ಜ್ ಅವರ ಟ್ವಿಟ್ ಗೆ ಕೇಂದ್ರ ಕ್ರೀಡಾ ಸಚಿವ ಕಿರೇನ್ ರಿಜ್ಜು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಂಜು ನಿಮ್ಮ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಇದು ನಿಮ್ಮ ಕಠಿಣ ಶ್ರಮ, ಬದ್ಧತೆಯ ಜೊತೆಗೆ ತರಬೇತುದಾರರು ಸಹಾಯವೂ ಇದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಅಂಜು ಬಾಬಿ ಜಾರ್ಜ್ ಹಲವು ಯುವ ಅಥ್ಲೀಟ್ ಗಳಿಗೆ ಸ್ಪೂರ್ತಿಯಾಗಿದ್ದಾರೆ.

Related posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

August 13, 2026
upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

August 13, 2026
Tags: 'long jump2003 World Athletics Championship in ParisAnju Bobby GeorgeAsian Games in Busan.indiaindian athletkeralaOlympian Anju Bobby GeorgesaakshattvUnion Sports Minister Kiren Rijiju
ShareTweetSendShare
Join us on:

Related Posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

by admin
August 13, 2026
0

ರಿಲಯನ್ಸ್ ಡಿಜಿಟಲ್ ತಂದಿದೆ 'ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್ (D.I.S.C.O.)' ಸ್ಮಾರ್ಟ್ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಟಿವಿಗಳು, ಲ್ಯಾಪ್ ಟಾಪ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಗಳ ಮೇಲೆ ವಿಶೇಷ ಕೊಡುಗೆಗಳು ಮುಂಬೈ,  2026: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ರಿಟೇಲರ್  ರಿಲಯನ್ಸ್ ಡಿಜಿಟಲ್, ತನ್ನ ಅಪ್ರತಿಮ ಡಿಜಿಟಲ್ ಇಂಡಿಯಾ ಸೇಲ್‌ಗಾಗಿ ಹೊಸ ಗುರುತನ್ನು D.I.S.C.O. (ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್) ಅನ್ನು ಪ್ರಾರಂಭಿಸಿದೆ. ರಿಲಯನ್ಸ್ ಡಿಜಿಟಲ್ ಸ್ಟೋರ್ಸ್, RelianceDigital.in ಮತ್ತು ಮೈಜಿಯೋ ಸ್ಟೋರ್ಸ್‌ನಲ್ಲಿ ಆಗಸ್ಟ್ 16 ರವರೆಗೆ ಚಾಲನೆಯಲ್ಲಿರುವ ಈ ಅಭಿಯಾನವು ಸ್ಮಾರ್ಟ್ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್, ಗೃಹೋಪಯೋಗಿ ವಸ್ತುಗಳು ಮತ್ತು ಹೆಚ್ಚಿನವುಗಳ ಮೇಲೆ ವಿಶೇಷ ಕೊಡುಗೆಗಳನ್ನು ತಂದಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ಮೇಲಿನ ಋತುವಿನ ಕೆಲವು ಅತ್ಯುತ್ತಮ ಡೀಲ್ ಗಳನ್ನು ಒಟ್ಟುಗೂಡಿಸುವ ಈ ಮಾರಾಟವು ಹಳೆಯ ಉತ್ಪನ್ನಗಳ ಮೇಲೆ ವರ್ಧಿತ ವಿನಿಮಯ ಮೌಲ್ಯ, ಆಯ್ದ ಎಲೆಕ್ಟ್ರಾನಿಕ್ಸ್ ಮೇಲೆ ₹ 15,000 ವರೆಗೆ ಎಕ್ಸ್‌ಚೇಂಜ್ ಬೋನಸ್, ಎರಡನೇ ಉತ್ಪನ್ನದ ಖರೀದಿಗೆ ಫ್ಲಾಟ್ 50% ರಿಯಾಯಿತಿ, ಬ್ಯಾಂಕ್ ಕಾರ್ಡ್‌ಗಳು, ಪೇಪರ್ ಫೈನಾನ್ಸ್ ಮತ್ತು ಯುಪಿಐ ಮೂಲಕ ₹ 30,000 ವರೆಗೆ ರಿಯಾಯಿತಿ ಮತ್ತು ಮಾರಾಟದ ಸಮಯದಲ್ಲಿ ಪೂರಕ ಒಂದು ವರ್ಷದ ವಿಸ್ತೃತ ವಾರಂಟಿಯನ್ನು ನೀಡುತ್ತದೆ. ನಿಮ್ಮ ಸ್ಮಾರ್ಟ್ಫೋನ್, ಟಿವಿ, ಲ್ಯಾಪ್‌ಟಾಪ್ ಅಥವಾ ಗೃಹೋಪಯೋಗಿ ಉಪಕರಣಗಳನ್ನು ಅಪ್ಗ್ರೇಡ್ ಮಾಡಲು ಯೋಜಿಸುತ್ತಿದ್ದರೂ, ಅದನ್ನು ಮಾಡಲು ಇದಕ್ಕಿಂತ ಉತ್ತಮ ಸಮಯ ಎಂದಿಗೂ ಸಿಗಲಾರದು.  D.I.S.C.O. ಕೊಡುಗೆಗಳ ವಿವರ ಇಲ್ಲಿದೆ: ಸ್ಮಾರ್ಟ್ಫೋನ್‌ಗಳು ಮತ್ತು ಪರಿಕರಗಳು: ಗ್ರಾಹಕರು ₹10,999 ರಿಂದ ಪ್ರಾರಂಭವಾಗುವ ಕೈಗೆಟುಕುವ 4G ಸ್ಮಾರ್ಟ್ಫೋನ್, ₹13,999 ನಿಂದ 5G ಸ್ಮಾರ್ಟ್ಫೋನ್ ಅಥವಾ ಐಫೋನ್‌ಗಳು ಮತ್ತು ₹2 ಲಕ್ಷದವರೆಗೆ ಬೆಲೆಯ ಫೋಲ್ಡೆಬಲ್ ಫೋನ್ ಸೇರಿದಂತೆ ಪ್ರೀಮಿಯಂ ಫ್ಲ್ಯಾಗ್ ಶಿಪ್ ಸಾಧನಗಳನ್ನು ಹುಡುಕುತ್ತಿರಲಿ, ರಿಲಯನ್ಸ್ ಡಿಜಿಟಲ್ ಪ್ರತಿ ಬೆಲೆ ವಿಭಾಗದಲ್ಲಿ ಆಯ್ಕೆಗಳನ್ನು ಹೊಂದಿದೆ. ಗ್ರಾಹಕರು 30 ತಿಂಗಳವರೆಗೆ ನೋ ಕಾಸ್ಟ್ ಇಎಂಐ, ಆಯ್ದ ಸ್ಮಾರ್ಟ್ಫೋನ್‌ಗಳಿಗೆ 10,000 ರೂ.ವರೆಗೆ ವಿನಿಮಯ ಬೋನಸ್, ಇಯರ್ಬಡ್‌ಗಳು, ಹೆಡ್ಫೋನ್‌ಗಳು, ಬ್ಲೂಟೂತ್ ಸ್ಪೀಕರ್‌ಗಳು, ಧರಿಸಬಹುದಾದ ವಸ್ತುಗಳು ಮತ್ತು ಮೊಬೈಲ್ ಬಿಡಿಭಾಗಗಳಿಗೆ ಯುಪಿಐ ಪಾವತಿಗಳ ಮೇಲೆ 10% ವರೆಗೆ ರಿಯಾಯಿತಿ ಮತ್ತು ಆಯ್ದ ಬ್ಲೂಟೂತ್ ಸ್ಪೀಕರ್,, ಇಯರ್ಬಡ್ ಮತ್ತು ಪವರ್ ಬ್ಯಾಂಕ್ ಮೇಲೆ ₹15,000 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಖರೀದಿಗಳೊಂದಿಗೆ ಫ್ಲಾಟ್ 50% ರಿಯಾಯಿತಿ ಪಡೆಯಬಹುದು. ಗೃಹೋಪಯೋಗಿ ಉಪಕರಣಗಳು: ₹50,000 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿ ಮತ್ತು 43,900 ರೂ.ಗಳ ಡೈಸನ್ ಬಿಗ್ ಬಾಲ್ ವ್ಯಾಕ್ಯೂಮ್ ಕ್ಲೀನರ್ ಅನ್ನು 13,900 ರೂ.ಗೆ ಪಡೆಯಿರಿ. ₹39,990 ನಿಂದ ಪ್ರಾರಂಭವಾಗುವ 65-ಇಂಚಿನ 4K UHD ಗೂಗಲ್ ಟಿವಿ ಮೂಲಕ  ನಿಮ್ಮ ಮನೆಯ ಮನರಂಜನೆಯನ್ನು ನವೀಕರಿಸಿ, ಮತ್ತು ₹39,990 ನಿಂದ ಪ್ರಾರಂಭವಾಗುವ ಸೈಡ್ ಬೈ ಸೈಡ್ ರೆಫ್ರಿಜರೇಟರ್ ಆಯ್ಕೆ ಮಾಡಿ ಮತ್ತು 12000/- ವರೆಗಿ‌ನ ಮೌಲ್ಯದ ಉಚಿತ ಪಡೆಯಿರಿ ಮತ್ತು 15,000/-ವರೆಗೆ ವಿನಿಮಯ ಪ್ರಯೋಜನಗಳನ್ನು ಪಡೆಯಿರಿ. ಗ್ರಾಹಕರು *₹18,000 ಮೌಲ್ಯದ ಉಚಿತಗಳೊಂದಿಗೆ ₹55,990 ರಿಂದ ಪ್ರಾರಂಭವಾಗುವ ವಾಷರ್ ಡ್ರೈಯರ್ ಅನ್ನು ಸಹ ಮನೆಗೆ ತರಬಹುದು. ಲ್ಯಾಪ್ ಟಾಪ್‌ಗಳು: ಕೇವಲ ₹ 39,999 ರಿಂದ ಪ್ರಾರಂಭವಾಗುವ ಲ್ಯಾಪ್ ಟಾಪ್‌ಗಳ ಮೇಲೆ ₹ 5,000 ವರೆಗೆ ಉಚಿತ 1+2 ವರ್ಷಗಳ ವಿಸ್ತೃತ ವಾರಂಟಿ ಮತ್ತು ವಿನಿಮಯ ಪ್ರಯೋಜನಗಳನ್ನು ಪಡೆಯಿರಿ.

upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

by admin
August 13, 2026
0

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಕನ್ನಡ - ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ನೆಕ್ಟ್ಸ್‌ ಲೆವೆಲ್’ (Next Level) ಅಧಿಕೃತವಾಗಿ ಆರಂಭವಾಗಿದೆ....

ashoka-university-placements-100-percent-record-highest-package

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು!

by admin
August 13, 2026
0

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು! ದೆಹಲಿ - ಎನ್‌ಸಿಆರ್ ಮೂಲದ ಪ್ರಸಿದ್ಧ ಅಶೋಕ...

shatkarma-kerala-mantravada-truth-psychology

Astro- ಈ_ಪ್ರಯೋಗಗಳು_ಕೇರಳದ_ಮಂತ್ರವಾದದ_ಅತ್ಯಂತ_ಹಳೆಯ_ಭಾಗ.

by admin
August 13, 2026
0

ಇದನ್ನ ಷಟ್ಕರ್ಮ ಅಂತ ಕರೀತಾರೆ - ಅಂದ್ರೆ 6 ಕರ್ಮಗಳು. ಒಡಿಯನ್ ವಿದ್ಯೆಯೂ ಇದರಲ್ಲೇ ಬರುತ್ತೆ. ಇವು ಅಥರ್ವಣ ವೇದದಿಂದ ಬಂದಿವೆ ಅಂತ ಹೇಳ್ತಾರೆ. ಶ್ರೀ ಕ್ಷೇತ್ರ...

nagara-panchami-2026-date-muhurat-significance

ನಾಗ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ಮುಖ್ಯಾಂಶಗಳು

by admin
August 13, 2026
0

ನಾಗ ಪಂಚಮಿ ಸೋಮವಾರ, ಆಗಸ್ಟ್ 17, 2026 ನಾಗ ಪಂಚಮಿ ಪೂಜೆ ಮುಹೂರ್ತ - 05:51 AM ರಿಂದ 08:29 AM ಅವಧಿ - 02 ಗಂಟೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram