ಸುಶಾಂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ತಮ್ಮ ವಿರುದ್ಧ ದೂರು ದಾಖಲಾಗ್ತಿದ್ದಂತೆ ಮುಂಬೈನ ನಿವಾಸದಿಂದ ಸುಶಾಂತ್ ಪ್ರೇಯಸಿ ರೆಹಾ ಎಸ್ಕೇಪ್ ಆಗಿರೋದು ಇದೀಗ ಜಗತ್ ಜಾಹೀರಾಗಿರುವಂತಹ ವಿಚಾರ. ಆದ್ರೆ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಕಾಂಡೆ ಅವರು ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ವ್ಯಾಪಕವಾಗಿ ಚರ್ಚೆಯಾಗ್ತಿದೆ.
ಹೌದು ಒಂದೆಡೆ ಸುಶಾಂತ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೂ ಎಂದು ರೆಹಾ ಹೇಳಿಕೊಂಡು ತಿರುಗಾಡಿದ್ರೆ, ಮತ್ತೊಂದೆಡೆ ಮಾಜಿ ಪ್ರೇಯಸಿ ಅಂಕಿತ ಹೇಳುವುದೇ ಬೇರೆ. ಸುಶಾಂತ್ ಮಾನಸಿಕ ಖಿನ್ನತೆಗೆ ಒಳಗಾಗಿರಲಿಲ್ಲ. ಆತ ಡಿಪ್ರೆಶನ್ ಗೆ ಹೋಗುವಂತ ವ್ಯಕ್ತಿಯೇ ಅಲ್ಲ. ಅವರಿಗೆ ಯಾವುದರ ಬಗ್ಗೆಯೂ ಬೇಸರ, ಹತಾಶೆ ಇರಲಿಲ್ಲ. ಅವರ ಬಗ್ಗೆ ಕಟ್ಟುಕಥೆ ಸೃಷ್ಟಿಸಲಾಗಿದೆ. ಅವರಿಗೆ ಬಲವಂತವಾಗಿ ಖಿನ್ನತೆ ನಿಗ್ರಹ ಔಷಧಗಳನ್ನು ಕೊಡಲಾಗಿದೆ. ಹಂತಹಂತವಾಗಿ ಅವರನ್ನು ಈ ರೀತಿ ಬಿಂಬಿಸಲಾಗಿದೆ. ಸುಶಾಂತ್ ಅವರ ವೃತ್ತಿ ಬದುಕು ಹಾಗೂ ಆಲೋಚನೆಗಳ ಕುರಿತು ಅವರ ಕುಟುಂಬದವರಿಗಿಂತಲೂ ಹೆಚ್ಚು ನನಗೆ ಗೊತ್ತಿದೆ. ಸುಶಾಂತ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎನ್ನುವುದು ಸುಳ್ಳು ಎನ್ನುವ ಮೂಲಕ ಇಷ್ಟು ದಿನದ ಮೌನಕ್ಕೆ ಬ್ರೇಕ್ ಹಾಕಿದ್ದಾರೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿ ಅಲ್ಲವೇ ಅಲ್ಲ. ನಾವು ಜತೆಗಿದ್ದಾಗ ಸುಶಾಂತ್ ಜೀವನದಲ್ಲಿ ಇನ್ನೂ ಕೆಟ್ಟ ಪರಿಸ್ಥಿತಿಯನ್ನು ನಾವು ನೋಡಿದ್ದೇವೆ. ಆತ ಯಾವಾಗಲೂ ಖುಷಿಯಿಂದ ಇರುತ್ತಿದ್ದ. ಬಂದಿದ್ದನ್ನು ಸಮಚಿತ್ತದಿಂದ ಸ್ವೀಕರಿಸುತ್ತಿದ್ದ. ಅವನು ಖಿನ್ನತೆಗೇ ಒಳಗಾಗಿರಲಿಲ್ಲ.
ಅವರು ಬಹಳ ವರ್ಷಗಳ ಹಿಂದೆಯೇ ಒಂದು ಡೈರಿಯಲ್ಲಿ ನಾನು ಮುಂದಿನ 5 ವರ್ಷಗಳಲ್ಲಿ ಏನೆಲ್ಲ ಸಾಧಿಸಬೇಕು, ನಾನು ಹೇಗಿರಬೇಕು ಎಂಬುದನ್ನ ಬರೆದುಕೊಂಡಿದ್ದರು. ಹಾಗೇ ಅವರು ಅದನ್ನೆಲ್ಲಾ ಸಾಧಿಸಿದ್ರು. ‘ಖಿನ್ನತೆ’ಯಂತಹ ವಿಚಾರಗಳನ್ನು ಆತನ ಹೆಸರಿನ ಜತೆ ಪದೇ ಪದೇ ಬಳಸಲಾಗುತ್ತಿದೆ. ಇದು ನೋವಿನ ಸಂಗತಿ. ಆತ ಮುಂದಿನ ಯುಕರ ಪಾಲಿಗೆ ಸ್ಪೂರ್ತಿಯಾಗಬೇಕೇ ಹೊರತು, ಆತನ ಹೆಸರಿನ ಜೊತೆಗೆ ಖಿನ್ನತೆ ಪದ ಜೋಡಣೆ ಮಾಡಬಾರದು ಎಂದು ಅಂಕಿತಾ ಹೇಳಿದ್ದಾರೆ. ನಾನು ತಿಳಿದಿರುವ ಸುಶಾಂತ್ ಸಣ್ಣ ಪಟ್ಟಣದಿಂದ ಬಂದವನು. ತನ್ನ ಸ್ವಂತ ಬಲದಿಂದ ತನ್ನನ್ನು ತಾನು ಬೆಳೆಸಿಕೊಂಡನು. ಆತ ನನಗೆ ಅನೇಕ ವಿಚಾರಗಳನ್ನು ಕಲಿಸಿಕೊಟ್ಟಿದ್ದಾನೆ. ನಿಜವಾದ ಸುಶಾಂತ್ ಏನು ಎನ್ನುವುದು ಯಾರಿಗಾದರೂ ಗೊತ್ತಾ?. ಸುಶಾಂತ್ ಎಷ್ಟು ಖಿನ್ನತೆಗೆ ಒಳಗಾಗಿದ್ದ ಎಂದು ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ.ಆದರೆ ಸುಶಾಂತ್ ಬಗ್ಗೆ ತಿಳಿಯದೇ ಇರುವವರೆಲ್ಲಾ ಈ ರೀತಿ ಮಾತನಾಡಿದರೆ ಮನಸಿಗೆ ತುಂಬಾ ನೋವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಅಂಕಿತಾ ಲೋಕಾಂಡೆ.
ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ
ಹಿರಿಯ ನಟ ರವಿಚಂದ್ರನ್ ಈ ವರ್ಷ ಹುಟ್ಟು ಹಬ್ಬ ಆಚರಣೆಯಿಂದ ದೂರ ಉಳಿಯಲು ನಿರ್ಧಾರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರ ಮನೆಯ ಮುಂದೆ ಗಲಾಟೆ ನಡೆಸಿದ್ದಾರೆ. ಮನೆ ಬಳಿ...