ಇಂದು ವರನಟ ಡಾ.ರಾಜ್ ಕುಮಾರ್ ಅವರ 91ನೇ ಹುಟ್ಟುಹಬ್ಬ. ರಾಜ್ಯದ ಜನತೆ ಸೇರಿದಂತೆ ಚಿತ್ರರಂಗವೇ ಅಣ್ಣಾವ್ರನ್ನು ಸ್ಮರಿಸಿದೆ. ಲಾಕ್ ಡೌನ್ ಹಿನ್ನೆಲೆ ಅಭಿಮಾನಿಗಳು ಮನೆಯಲ್ಲೇ ನೆಚ್ಚಿನ ನಟನನ್ನು ಸ್ಮರಿಸಿದ್ದಾರೆ. ಇದೇ ಸಂದರ್ಭದಲ್ಲಿ ದೊಡ್ಮನೆಯ ಮತ್ತೊಂದು ಕುಡಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ.
ಹೌದು…! ಡಾ.ರಾಜ್‌ಕುಮಾರ್ ಅವರ ದ್ವಿತೀಯ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವರಾಜ್, ಯುವ ನಂ1 ಆಗಿ ಕನ್ನಡ ಚಿತ್ರರಂಗಕ್ಕೆ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಯುವರಾಜ ಅಭಿನಯದ ಮೊದಲ ಚಿತ್ರದ ಫಸ್ಟ್ ಲುಕ್ ಇಂದು ರಿಲೀಸ್ ಆಗಿದೆ. ಯುವ ನಂ.1 ವರ್ಕಿಂಗ್ ಟೈಟಲ್ ನೊಂದಿಗೆ ಯುವರಾಜ ಕೈನಲ್ಲಿ ಈಟಿ ಹಿಡಿದು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಪುನೀತ್ ರುದ್ರನಾಗ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಯುವ ರಾಜ್‌ಕುಮಾರ್‌ಗೆ ತಂದೆ ರಾಘವೇಂದ್ರ ರಾಜ್‌ಕುಮಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಭ ಹಾರೈಸಿದ್ದಾರೆ.








