ಜೂನ್ 30 ರಿಂದ ಅಮರನಾಥ ಯಾತ್ರೆ ಪ್ರಾರಂಭ – ಏಪ್ರಿಲ್ 11 ರಿಂದ ನೊಂದಾವಣಿ ಪ್ರಾರಂಭ
ವಾರ್ಷಿಕ ಅಮರನಾಥ ಯಾತ್ರೆಯು ಈ ವರ್ಷ ಜೂನ್ 30 ರಂದು ಎಲ್ಲಾ ಕೋವಿಡ್ ಪ್ರೋಟೋಕಾಲ್ಗಳೊಂದಿಗೆ ಪ್ರಾರಂಭವಾಲಿದೆ. ಶ್ರೀ ಅಮರನಾಥ ದೇಗುಲ ಮಂಡಳಿ ಅಧ್ಯಕ್ಷ ಮತ್ತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಯಾತ್ರೆಗೆ ಆನ್‌ಲೈನ್ ನೋಂದಣಿ ಏಪ್ರಿಲ್ 11 ರಂದು ಪ್ರಾರಂಭವಾಗಲಿದೆ ಎಂದು ಹೇಳಿದರು.
43 ದಿನಗಳ ಸುದೀರ್ಘ ಯಾತ್ರೆಯು ರಕ್ಷಾ ಬಂಧನದ ಹಬ್ಬವಾದ ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು. ನಿನ್ನೆ ಜಮ್ಮುವಿನ ರಾಜಭವನದಲ್ಲಿ ನಡೆದ ಶ್ರೀ ಅಮರನಾಥಜಿ ಪುಣ್ಯಕ್ಷೇತ್ರ ಮಂಡಳಿಯ ಸಭೆಯಲ್ಲಿ ಜೂನ್ 30 ರಿಂದ ಯಾತ್ರೆಯನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಹಲ್ಗಾಮ್ ಮತ್ತು ಬಲ್ಟಾಲ್ ಮಾರ್ಗಗಳಿಂದ ಏಕಕಾಲದಲ್ಲಿ ಯಾತ್ರೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ನಿತೀಶ್ವರ್ ಕುಮಾರ್ ಹೇಳಿದರು.
ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವವರನ್ನು ಹೊರತುಪಡಿಸಿ ಪ್ರತಿ ಮಾರ್ಗದಲ್ಲಿ ದಿನಕ್ಕೆ 10,000 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು. ಯಾತ್ರಾರ್ಥಿಗಳ ಚಲನವಲನವನ್ನು ಪತ್ತೆಹಚ್ಚಲು ಸರ್ಕಾರ RFID ವ್ಯವಸ್ಥೆಯನ್ನು ಪರಿಚಯಿಸಲಿದೆ ಎಂದು ನಿತೀಶ್ವರ್ ಕುಮಾರ್ ಹೇಳಿದ್ದಾರೆ.