ಹಾವೇರಿ: ನಿಂತಿದ್ದ ಕಾರಿಗೆ ಹಿಂದಿನಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ (Byadagi) ತಾಲೂಕಿನ ಛತ್ರ ಗ್ರಾಮದ ಹತ್ತಿರ ನಡೆದಿದೆ. ಅಲ್ಲದೇ, ಈ ಘಟನೆಯಲ್ಲಿ 6 ಜನ ಗಾಯಗೊಂಡಿದ್ದಾರೆ. ನ್ಯೂ ಇಯರ್ ಪಾರ್ಟಿ ಮಾಡಲೆಂದು ಗೋವಾಗೆ ತೆರಳುತ್ತಿದ್ದ ಆಂಧ್ರ ಮೂಲದ ಯುವಕರ ತಂಡ ತೆರಳುತ್ತಿತ್ತು. ಈ ವೇಳೆ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಈ ದುರ್ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡವರನ್ನು ದಾವಣಗೆರೆ ಮೂಲದ ತೇಜಸ್ (25), ಸಂದೇಶ್ (25), ದೀಪಕ್ (25) ಮತ್ತು ವೆಂಕಟೇಶ್ (26) ಎಂದು ಗುರುತಿಸಲಾಗಿದೆ. ವೀರೇಶ್ (23), ಲಕ್ಷ್ಮಣ (23), ಅಶೋಕ್ (24), ಗೌಡನಬಿ (24), ಸಾಗರ್ (26) ಮತ್ತು ಸಂಕೇತ್ (36) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಅಣ್ಣಾವ್ರ ನೆನಪಲ್ಲಿ ಕನ್ನಡಿಗರು: ರಾಜ್ ಕುಮಾರ್ ಜನ್ಮದಿನದ ಸ್ಮರಣೆ
ಕನ್ನಡ ನಾಡಿಗೆ ಪ್ರತಿ ವರ್ಷ ಏಪ್ರಿಲ್ 24 ಬಂದರೇ, ಒಂದು ಸ್ಮರಣೆ ತಲೆ ಎತ್ತಿ ನಿಲ್ಲುತ್ತದೆ – ಅಣ್ಣಾವ್ರ ಜನ್ಮದಿನ ಅಂತ.. ಹೌದು, ಅವರಿಲ್ಲಿ ಹುಟ್ಟಿದ್ದು, ನಟಿಸಿದ್ದು,...