ವಿಶ್ವದ ಅತೀ ದೊಡ್ಡ ಜಾಲ ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ಆಗಾಗ ಬಳಕೆದಾರ ಅನುಕೂಲಕ್ಕಾಗಿ ಹೊಸ ಹೊಸ ವೈಶಿಷ್ಟ್ಯ ಬಿಡುಗಡೆ ಮಾಡುತ್ತಲೇ ಇದೆ. ಈಗ ಮತ್ತೊಂದು ಫೀಚರ್ ಬಿಡುಗಡೆ ಮಾಡಿದೆ.
ಈ ಮೂಲಕ ಬಳಕೆದಾರರು ತಮ್ಮ ನೆಚ್ಚಿನ ಜನರೊಂದಿಗೆ ಸುಲಭವಾಗಿ ಚಿಟ್-ಚಾಟ್ ಮಾಡಬಹುದಾಗಿದೆ. ಈ ಕುರಿತ ಮಾಹಿತಿಯನ್ನು ವಾಟ್ಸಾಪ್ ತನ್ನ ಅಧೀಕೃತ ಎಕ್ಸ್ ಖಾತೆಯಲ್ಲಿ ಹೇಳಿದೆ.
ಮೊಬೈಲ್ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ “ಫೇವರೆಟ್ಸ್” ಎಂಬ ಆಪ್ಷನ್ ಇತ್ತು. ಈಗ ವಾಟ್ಸಾಪ್ ಕೂಡಾ ಈ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ಈ ಮೂಲಕ ನಿಮ್ಮ ಕ್ಲೋಸ್ ಫ್ರೆಂಡ್ಸ್, ಫ್ಯಾಮಿಲಿ ಮೆಂಬರ್ಸ್ ಸೇರಿದಂತೆ ಹತ್ತಿರವಾದವಕ ಕಾಂಟ್ಯಾಕ್ಟ್ ನಂಬರ್ ನ್ನು ಫೇವರೆಟ್ ಲಿಸ್ಟ್‌ಗೆ ಸೇರಿಸುವ ಮೂಲಕ ಸುಲಭವಾಗಿ ಚಾಟ್ ಮಾಡಬಹುದಾಗಿದೆ. ವಾಟ್ಸಾಪ್ ಓಪನ್ ಮಾಡಿದಾಗ ಕಾಣುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ, ಅಲ್ಲಿಂದ ಸೆಟ್ಟಿಂಗ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಫೇವರೆಟ್ಸ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಫೇವರೆಟ್ ಪರ್ಸನ್ ಕಾಂಟ್ಯಾಕ್ಟ್ ಅನ್ನು favourite ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು.








