ಬೆಂಗಳೂರು: ಇತ್ತೀಚೆಗಷ್ಟೇ ಸರ್ಕಾರವು ಬಸ್ ಟಿಕೆಟ್ ದರ ಏರಿಕೆ ಮಾಡಿತ್ತು. ಈಗ ಅದರ ಬೆನ್ನಲ್ಲೇ ನಮ್ಮ ಮೆಟ್ರೋ (Namma Metro) ದರವೂ ಏರಿಕೆಗೆ ಮುಂದಾಗಿದೆ. ಸಭೆಯಲ್ಲಿ ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಶನ್ ಲಿಮಿಟೆಡ್ (BMRCL) ದರ ಏರಿಕೆಗೆ ಅಸ್ತು ಎಂದಿದೆ
ಮೆಟ್ರೋ ದರ ಪರಿಷ್ಕರಣೆ ಪ್ರಕ್ರಿಯೆ ಕುರಿತು ಬಿಎಂಆರ್‌ಸಿಎಲ್ ಅಧಿಕಾರಿಗಳು ಮತ್ತು ದರ ಏರಿಕೆ ಸಮಿತಿಯ ಸದಸ್ಯರ ಜೊತೆ ಹೈವೊಲ್ಟೇಜ್ ಸಭೆ ನಡೆಯಿತು. ಸಭೆಯಲ್ಲಿ ದರ ಏರಿಕೆ, ಜೊತೆಗೆ ಪರಿಷ್ಕೃತ ದರ ನಿಗದಿ ದಿನಾಂಕ ಕೂಡ ಮಾಡಲಾಗಿದೆ. ಶನಿವಾರ ಅಧಿಕೃತವಾಗಿ ಬಿಎಂಆರ್‌ಸಿಎಲ್ ದರ ಏರಿಕೆ ವಿವರವನ್ನು ಪ್ರಕಟಿಸಲಿದೆ.bengalore
8 ವರ್ಷಗಳಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಕುರಿತು ರಚಿಸಿದ್ದ ಸಮಿತಿ ಸಿಂಗಾಪುರ, ಹಾಂಕಾಂಗ್, ದೆಹಲಿಗೆ ತೆರಳಿ ಅಲ್ಲಿನ ಮೆಟ್ರೋ ದರ ಪರಿಷ್ಕರಣೆಯ ಕ್ರಮ, ದರ ಹೆಚ್ಚಳದ ಕುರಿತು ಅಧ್ಯಯನ ಮಾಡಿ ದರ ಪರಿಷ್ಕರಣೆ ವರದಿ ಸಿದ್ಧಪಡಿಸಿದೆ. ಹೀಗಾಗಿ ಅಧ್ಯಯನದ ವರದಿಯಂತೆ ಮೆಟ್ರೋ ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೆಟ್ರೋ ವಿಸ್ತರಣೆ ಮಾಡಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ 220 ಕಿಮೀ ನಷ್ಟು ವಿಸ್ತರಣೆಯಾಗಲಿದೆ. ಮೆಟ್ರೋ ಕಾಮಗಾರಿಗಾಗಿ ವಿವಿಧ ಬ್ಯಾಂಕ್, ಏಜೆನ್ಸಿಗಳಿಗೆ ಪಾವತಿಸಬೇಕಾದ ಸಾಲದ ಮೇಲಿನ ಬಡ್ಡಿ, ಪ್ರಸ್ತುತ ರೈಲುಗಳ ಕಾರ್ಯಾಚರಣೆ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮತ್ತಿತರ ವಿವಿಧ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಿದ್ದುರುವುದರಿಂದಾಗಿ ಹೆಚ್ಚಳ ಮಾಡಲು ಮುಂದಾಗಲಾಗಿದೆ.








