ಬ್ಯಾನ್ ಬಳಿಕ ಟಿಕ್ ಟಾಕ್ ಗೆ ಮತ್ತೊಂದು ಶಾಕ್..!

ನವದೆಹಲಿ : ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್ ಸೇರಿದಂತೆ 59 ಚೀನಿ ಅಪ್ಲಿಕೇಶನ್ ಗಳನ್ನು ನಿಷೇಧಿಸಿದೆ. ಈ ಮೂಲಕ ಭಾರತ ಚೀನಾ ಕಂಪನಿಗಳಿಗೆ ಶಾಕ್ ನೀಡಿದೆ. ಇದೀಗ ಕೇಂದ್ರ ಸರ್ಕಾರದ ಬಳಿ ಚೀನಾ ಕಂಪನಿಗಳಿಗೆ ಭಾರತದ ವಕೀಲರು ಮತ್ತೊಂದು ಶಾಕ್ ನೀಡಿದ್ದಾರೆ.SUPREMECOURT

ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಭದ್ರತೆ ಕಾರಣ ನೀಡಿ ಟಿಕ್ ಟಾಕ್ ಸೇರಿ ಭಾರತದಲ್ಲಿ 59 ಚೀನಾ ನಿರ್ಮಿತ ಮೊಬೈಲ್ ಆಪ್ ಗಳನ್ನು ನಿರ್ಬಂಧಿಸಿರುವುದನ್ನು ಪ್ರಶ್ನಿಸಲು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಟಿಕ್ ಟಾಕ್ ಮುಂದಾಗಿದೆ. ಈ ಕಾರಣಕ್ಕಾಗಿ ಕೋರ್ಟ್ ನಲ್ಲಿ ತನ್ನಪರ ವಾದಮಂಡಲು ಭಾರತದ ಪ್ರಖ್ಯಾತ ವಕೀಲರನ್ನು ಟಿಕ್ ಟಾಕ್ ಸಂಪರ್ಕಿಸಿದೆ. ಆದ್ರೆ ವಕೀಲರು ಟಿಕ್ ಟಾಕ್ ಪರ ವಾದ ಮಂಡಿಸಲ್ಲ ಎಂದು ಕಡ್ಡಿತುಂಡಾಗೋ ರೀತಿ ಹೇಳಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವ ಪ್ಲ್ಯಾನ್ ಗೆ ಹಿನ್ನಡೆಯಾಗಿದೆ.

ಮೂಲಗಳ ಪ್ರಕಾರ ಟಿಕ್ ಟಾಕ್, ತಮ್ಮ ಪರ ವಾದ ಮಂಡಿಸಲು ಕೇಂದ್ರ ಸರ್ಕಾರದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಅವರನ್ನ ಭೇಟಿ ಮಾಡಿತ್ತಂತೆ. ಆದ್ರೆ ಮುಕುಲ್ ಅವರು, ಸರ್ಕಾರ ತೆಗೆದುಕೊಂಡ ನಿರ್ಧಾರದ ವಿರುದ್ಧವಾಗಿ ಯಾವುದೇ ಚೀನಾ ಕಂಪನಿಗಳ ಪರ ವಾದ ಮಂಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಭಾರತದಲ್ಲಿ ಬ್ಯಾನ್ ಬಳಿಕ ಟಿಕ್ ಟಾಕ್ ಗೆ ಮತ್ತೊಂದು ಹೊಡೆತ ಬಿದ್ದಿದೆ.

ಇನ್ನು ಟಿಕ್ ಟಾಕ್ ಬ್ಯಾನ್ ಬಗ್ಗೆ ನಿನ್ನೆ ಸ್ಪಷ್ಟನೆ ನೀಡಿದ್ದ ಸಂಸ್ಥೆ, ಭಾರತದ ಕಾನೂನುಗಳ ವ್ಯಾಪ್ತಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದ್ದೇವೆ ಬಳಕೆದಾರರು ಯಾವ ಮಾಹಿತಿಯನ್ನು ಚೀನಾ ಸೇರಿದಂತೆ ಇತರೆ ದೇಶಗಳೊಂದಿಗೆ ಹಂಚಿಕೊಂಡಿಲ್ಲ. ಭಾರತದ ಸಮಗ್ರತೆ ಧಕ್ಕೆ ತರುವ ಕೆಲಸ ಸಂಸ್ಥೆ ಮಾಡುವುದಿಲ್ಲ ಎಂದಿತ್ತು. ಬಗ್ಗೆ ಕೇಂದ್ರ ಸರ್ಕಾರಕ್ಕೂ ಮನವರಿಕೆ ಮಾಡುವ ಪ್ರಯತ್ನ ಮಾಡುವುದಾಗಿ ಟಿಕ್ ಟಾಕ್ ಹೇಳಿತ್ತು.

Leave a Reply

Your email address will not be published. Required fields are marked *

YOU MUST READ

Pin It on Pinterest

Share This