ಬೀಜಿಂಗ್: ಇಡೀ ದೇಶಕ್ಕೆ ಕೊರೊನಾ ಕೊಡುಗೆ ನೀಡಿರುವ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈಗ ಚೀನಾದಲ್ಲಿ (China) ಮತ್ತೊಂದು ವೈರಸ್ ವ್ಯಾಪಕವಾಗಿ ಹರಡಿರುವ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಐದು ವರ್ಷಗಳ ನಂತರ ಚೀನಾ ಮಾನವ ಮೆಟಾಪ್ನ್ಯೂಮೋವೈರಸ್ (HMPV) ಏಕಾಏಕಿ ಹಬ್ಬಿದೆ ಎಂದು ತಿಳಿದು ಬಂದಿದೆ.
ಕಾರಣ ಚೀನಾದ ಜನ ದಂಡು ದಂಡಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ದೃಶ್ಯದ ವೀಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಕೆಲವರು, ಆಸ್ಪತ್ರೆಗಳು ಮತ್ತು ಸ್ಮಶಾನಗಳು ತುಂಬಿಹೋಗಿವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಜನರು ಆಸ್ಪತ್ರೆಗಳಲ್ಲಿ ಕಿಕ್ಕಿರಿದು ತುಂಬಿರುವ ವೀಡಿಯೋಗಳು ಹರಿದಾಡುತ್ತಿವೆ. ಕೆಲವರು ಇನ್ಫ್ಲುಯೆನ್ಸ A, HMPV, ಮೈಕೋಪ್ಲಾಸ್ಮಾ ನ್ಯುಮೋನಿಯಾ, ಮತ್ತು ಕೋವಿಡ್-19 ಸೇರಿದಂತೆ ಅನೇಕ ವೈರಸ್‌ಗಳು ವ್ಯಾಪಿಸಿವೆ ಎಂದು ಪೋಸ್ಟ್‌ಗಳನ್ನು ಹರಿಬಿಟ್ಟಿದ್ದಾರೆ.
ಚೀನಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಹೇಳಲಾಗಿದೆ. ಆದರೂ ಈ ಸುದ್ದಿ ಇನ್ನೂ ದೃಢಪಟ್ಟಿಲ್ಲ. HMPV ಜ್ವರ ತರಹದ ರೋಗಲಕ್ಷಣ ಮತ್ತು Covid-19 ನಂತಹ ರೋಗಲಕ್ಷಣಗಳನ್ನು ಸಹ ಉಂಟು ಮಾಡಬಹುದು ಎಂದು ಹೇಳಲಾಗಿದೆ.
ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡಿದ ನಟ ಸೈಫ್ ಅಲಿ ಖಾನ್!
ನಟ ಸೈಫ್ ಅಲಿ ಖಾನ್ (Saif Ali Khan) ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಈ ಮಧ್ಯೆ...