U20 ರೆಸ್ಲಿಂಗ್ ವಿಶ್ವಚಾಂಪಿಯನ್ ಶಿಪ್‌ನಲ್ಲಿ ಭಾರತದ ಕುಸ್ತಿ ಪಟುಗಳು ಭರ್ಜರಿ ಸಾಧನೆ ಮಾಡಿದ್ದಾರೆ. ಮೂರು ಚಿನ್ನದ ಪದಕ ಸೇರಿದಂತೆ ಭಾರತದ ಅಂಡರ್ 20 ಕುಸ್ತಿಪಟುಗಳು 7 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಮೂಲಕ ಇದೇ ಮೊದಲ ಬಾರಿಗೆ ಭಾರತ ತಂಡವು ಚಾಂಪಿಯನ್‌ಶಿಪ್ ಗೆದ್ದುಕೊಂಡಿದೆ. 53 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಅಂತಿಮ್ ಪಂಘಾಲ್ ಯುಕ್ರೇನ್‌ನ ಮರಿಯಾ ಯೆಪ್ರೆಮೋವಾ ಅವರನ್ನು 4-0 ಅಂತರದಿಂದ ಮಣಿಸಿದರು. ಈ ಮೂಲಕ 53 ಕೆಜಿ ವಿಭಾಗದ ಪಟ್ಟವನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಈ ಮೂಲಕ ಈ ಐತಿಹಾಸಿಕ ಸಾಧನೆಯನ್ನು ಯುವ ರೆಸ್ಲರ್ ಮಾಡಿದ್ದಾರೆ.
ಪಂಘಾಲ್ ಮಾತ್ರವಲ್ಲದೆ 62 ಕೆಜಿ ವಿಭಾಗದಲ್ಲಿ ಸವಿತಾ ಕೂಡ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪ್ರಿಯಾ ಮಲಿಕ್ 76 ಕೆಜಿ ವಿಭಾಗದಲ್ಲಿ ಟೈಟಲ್ ಗೆದ್ದುಕೊಂಡಿದ್ದರು. ಚಿನ್ನದ ಪದಕ ಹೊರತುಪಡಿಸಿ ಆಂತಿಮ್ ಕುಂದು 65 ಕೆಜಿ ವಿಭಾಗದಲ್ಲಿ ಒಂದು ಬೆಳ್ಳಿ ಹಾಗೂ 57 ಕೆಜಿ ವಿಭಾಗದಲ್ಲಿ ರೀನಾ, 68 ಕೆಜಿ ವಿಭಾಗದಲ್ಲಿ ಅರ್ಜು ಮತ್ತು 72 ಕೆಜಿ ವಿಭಾಗದಲ್ಲಿ ಹರ್ಷಿತಾ ಸೇರಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
19 ವರ್ಷದ ಅಂತಿಮ್ ಪಂಘಾಲ್ ಮುಂಬರುವ ಎರಡು ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗುತ್ತಿದ್ದಾರೆ. ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ 53 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಅಂತಿಮ್ ಪಂಘಾಲ್ ಗೆಲ್ಲಲಿ ಎಂದು ಭಾರತೀಯರು ಹಾರೈಸುತ್ತಿದ್ದಾರೆ .








