ADVERTISEMENT
Friday, September 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅನುಭವ ಮಂಟಪವು ಮಾನವ ನಿರ್ಮಾಣ ಕಾರ್ಯ: ಸಾಹಿತಿ ಗೋರೂಚ ಬಣ್ಣನೆ

Kariyappa N by Kariyappa N
January 6, 2021
in Newsbeat, Politics, Samagra karnataka, ರಾಜ್ಯ
basava kalyana
Share on FacebookShare on TwitterShare on WhatsappShare on Telegram

ಬೀದರ್: ನೂತನ ಅನುಭವ ಮಂಟಪ ನಿರ್ಮಾಣ ಐತಿಹಾಸಿಕ ಪವಿತ್ರ ಕಾರ್ಯ. ಇದು ಕಟ್ಟಡ ನಿರ್ಮಾಣವಲ್ಲ, ಇದು ಮಾನವ ನಿರ್ಮಾಣ ಕಾರ್ಯ ಎಂದು ಸಾಹಿತಿ ಗೋ.ರು.ಚನ್ನಬಸಪ್ಪ ಬಣ್ಣಿಸಿದ್ದಾರೆ.
ಬಸವಕಲ್ಯಾಣದಲ್ಲಿ ನಡೆದ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಗೋರುಚ, ನಾಡಿನ ಲಕ್ಷ ಲಕ್ಷ ಜನರು ಬಹುದಿನಗಳಿಂದ ನಿರೀಕ್ಷೆ ಇಟ್ಟುಕೊಂಡ ಕಾರ್ಯವು ಇಂದು ನಡೆದಿದೆ. ಕೆಲವು ವರ್ಷಗಳಿಂದ ವಿಳಂಭವಾಗಿದ್ದ ಈ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾದ ಮೊದಲ ತಿಂಗಳಲ್ಲೇ ಘೋಷಣೆ ಮಾಡಿದ್ದಕ್ಕೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

basava
ಅನುಭವ ಮಂಟಪ ನಿರ್ಮಾಣ ಸಮಿತಿಯ ವರದಿ ಮಾಡುವಾಗ ನಾಡಿನ ಅನೇಕ ಸಾಹಿತಿಗಳು, ಚಿಂತಕರು, ಎಲ್ಲ ಭಾಷಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ನೀಡಿದ ಸಹಕಾರವನ್ನು ನಾವು ಸ್ಮರಿಸಲೇಬೇಕು ಎಂದು ತಿಳಿಸಿದರು.
ಬಸವಣ್ಣನವರ ಕಾಲದಲ್ಲಿ ಇದ್ದ ಸಾಮಾಜಿಕ ಮತ್ತು ಧಾರ್ಮಿಕ ಅಸಮಾನತೆಯ ವಿರುದ್ಧದ ಹೊರಾಟಕ್ಕೆ ಈ ಅನುಭವ ಮಂಟಪವು ತಳಹದಿಯಾಗಿತ್ತು. ರಾಜಕೀಯ ಧಾರ್ಮಿಕ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಸಾಕಷ್ಟು ಸುಧಾರಣೆ ಮಾಡಿದ, ಪ್ರಜೆಗಳನ್ನು ಒಳ್ಳೆಯವರನ್ನಾಗಿ ಮಾಡುವ ಕಾರ್ಯವನ್ನು ಅಂದು ಈ ಅನುಭವ ಮಂಟಪ ಮಾಡಿದೆ. ಯಾವುದೇ ಕ್ಷೇತ್ರದಲ್ಲಿನ ಆದೇಶ ನಿರೂಪಕರಿಗೆ, ಕಾರ್ಯ ನಿರ್ವಾಹಕರಿಗೆ ಸೂಕ್ತವಾದಂತಹ ಮಾರ್ಗದರ್ಶನ ನೀಡುವ ಕೇಂದ್ರ ಇದಾಗಬೇಕಿದೆ ಎಂದು ತಿಳಿಸಿದರು.
ಜಗತ್ತಿನ ಎಲ್ಲ ಚಿಂತಕರು ಇಲ್ಲಿ ಬರಬೇಕು. ಬೃಹತ್ ಶೈಕ್ಷಣಿಕ ಪ್ರವಾಸಿ ಕೇಂದ್ರ ಇದಾಗಬೇಕು. ನುಡಿದಂತೆ ನಡೆದಿರುವುದು ಶರಣ ಸಂಸ್ಕೃತಿಯಾಗಿದೆ. ಈ ತತ್ವವನ್ನು ನಾವು ಅರ್ಥ ಮಾಡಿಕೊಂಡರೆ ಇಡೀ ಜಗತ್ತೆ ಸರಿ ಇರುತ್ತದೆ. ತಮಗೆ ಮೋಜಿಗೆ ಬೇಕಾದಷ್ಟು ಹಣ ಕೊಡಲಿಲ್ಲ ಎಂದು ಒಬ್ಬ ಯುವಕ ತಂದೆತಾಯಿಯನ್ನು ಕೊಲ್ಲುವ ಕಾಲದಲ್ಲಿ ನಾವಿದ್ದೇವೆ. ಇಂತಹ ಮನೋಭಾವವು ನಮ್ಮ ಇಡೀ ವ್ಯವಸ್ಥೆಯಲ್ಲಿ ಉಳಿದಿದೆ. ಈ ವ್ಯವಸ್ಥೆ ಬದಲಾಗಬೇಕಿದೆ ಎಂದು ಗೋ.ರು ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು.

Related posts

ಬಿಜೆಪಿ ಪಾದಯಾತ್ರೆಗೆ ಸೊಪ್ಪು ಹಾಕಬೇಡಿ :ಸರ್ಕಾರದ ನೂರು ದಿನಗಳ ಪಥ ಸರಿಯಾಗಿದೆ ಸಿದ್ದರಾಮಯ್ಯರಿಂದ ಡಿಕೆಶಿ ತಂಡಕ್ಕೆ ಭರ್ಜರಿ ಬೆಂಬಲ

ಬಿಜೆಪಿ ಪಾದಯಾತ್ರೆಗೆ ಸೊಪ್ಪು ಹಾಕಬೇಡಿ :ಸರ್ಕಾರದ ನೂರು ದಿನಗಳ ಪಥ ಸರಿಯಾಗಿದೆ ಸಿದ್ದರಾಮಯ್ಯರಿಂದ ಡಿಕೆಶಿ ತಂಡಕ್ಕೆ ಭರ್ಜರಿ ಬೆಂಬಲ

September 11, 2026
ಖರ್ಗೆ ಕುಟುಂಬದ ಟ್ರಸ್ಟ್‌ಗೆ ಬಿಡಿಎ ಸಿಎ ನಿವೇಶನ ಮಂಜೂರು ಆರೋಪ: ಲೋಕಾಯುಕ್ತ ತನಿಖೆ ಬಗ್ಗೆ ನಿರ್ಧರಿಸಲು ಹೈಕೋರ್ಟ್ ಸೂಚನೆ

ಖರ್ಗೆ ಕುಟುಂಬದ ಟ್ರಸ್ಟ್‌ಗೆ ಬಿಡಿಎ ಸಿಎ ನಿವೇಶನ ಮಂಜೂರು ಆರೋಪ: ಲೋಕಾಯುಕ್ತ ತನಿಖೆ ಬಗ್ಗೆ ನಿರ್ಧರಿಸಲು ಹೈಕೋರ್ಟ್ ಸೂಚನೆ

September 11, 2026

anubhava mandapa
ನನಗೂ ವಯಸ್ಸಾಗಿದೆ. ನಾನು ನೋಡಬಹುದೇ ಅನುಭವ ಮಂಟಪವನ್ನು ಎಂದು ಹೇಳಿದ ಗೋರೂಚ ಅವರು, ತಾವು ಸಲಹೆ ನೀಡಿದಂತೆ ನಾಡಿನಲ್ಲಿ ಈಗಾಗಲೇ ಜಾನಪದ ವಿಶ್ವ ವಿದ್ಯಾಲಯ ಕಾರ್ಯಾರಂಭಗೊಂಡಂತೆ ಅನುಭವ ಮಂಟಪ ನಿರ್ಮಾಣ ಕಾರ್ಯ ಕೂಡ ಬೇಗನೆ ಆಗಬೇಕು. ಇದನ್ನು ಸವಾಲಿನಂತೆ ಸ್ಚೀಕರಿಸಿ ಕಟ್ಟಡ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಬೇಕು ಎಂದರು.
ಚಿಂತಕರಾದ ಬಸವರಾಜ ಪಾಟೀಲ ಸೆಡಂ ಅವರು ಮಾತನಾಡಿ, ಎಲ್ಲರ ಸಹಕಾರ ಪಡೆದು ಅನುಭವ ಮಂಟಪ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೂ ಶ್ರಮಿಸುವುದಾಗಿ ತಿಳಿಸಿದರು.
ಅನುಭವ ಮಂಟಪದ ಅಧ್ಯಕ್ಷರಾದ ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ದೆಹಲಿಯಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಸಂಸತ್ ಭವನ ಉದ್ಘಾಟನೆ ವೇಳೆಯಲ್ಲಿ ಇಡೀ ಜಗತ್ತಿಗೆ ಸಂಸತ್ತು ನಿರ್ಮಾಣದ ಸಂದೇಶ ನೀಡಿದ ನೆಲ ಬಸವಕಲ್ಯಾಣ ಎಂದು ಹೇಳಿರುವುದು ಕಲ್ಯಾಣ ನಾಡಿನ ಮಹತ್ವವನ್ನು ತಿಳಿಸುತ್ತದೆ ಎಂದರು.
ಸಮಾರಂಭದಲ್ಲಿ ಹಾರಕೂಡ ಡಾ.ಚನ್ನವೀರ ಶಿವಾಚಾರ್ಯರು, ಶಿವಾನಂದ ಸ್ವಾಮೀಜಿ, ರಾಜೇಶ್ವರ ಶಿವಾಚಾರ್ಯರು, ಅಕ್ಕ ಅನ್ನ ಪೂರ್ಣತಾಯಿ, ಅಕ್ಕ ಗಂಗಂಬಿಕಾ ತಾಯಿ, ಸಿದ್ದರಾಮ ಶರಣರು, ಸಿದ್ದರಾಮೇಶ್ವರ ಸ್ವಾಮೀಜಿ, ಗುರುಬಸವಲಿಂಗ ಪಟ್ಟದ್ದೇವರು ಹಾಗೂ ಇನ್ನೀತರರು ಉಪಸ್ಥಿತರಿದ್ದರು.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Anubhava mantapbasava kalyanaBasavannago.ru channabasappa
ShareTweetSendShare
Join us on:

Related Posts

ಬಿಜೆಪಿ ಪಾದಯಾತ್ರೆಗೆ ಸೊಪ್ಪು ಹಾಕಬೇಡಿ :ಸರ್ಕಾರದ ನೂರು ದಿನಗಳ ಪಥ ಸರಿಯಾಗಿದೆ ಸಿದ್ದರಾಮಯ್ಯರಿಂದ ಡಿಕೆಶಿ ತಂಡಕ್ಕೆ ಭರ್ಜರಿ ಬೆಂಬಲ

ಬಿಜೆಪಿ ಪಾದಯಾತ್ರೆಗೆ ಸೊಪ್ಪು ಹಾಕಬೇಡಿ :ಸರ್ಕಾರದ ನೂರು ದಿನಗಳ ಪಥ ಸರಿಯಾಗಿದೆ ಸಿದ್ದರಾಮಯ್ಯರಿಂದ ಡಿಕೆಶಿ ತಂಡಕ್ಕೆ ಭರ್ಜರಿ ಬೆಂಬಲ

by Shwetha
September 11, 2026
0

ರಾಜ್ಯ ರಾಜಕಾರಣದಲ್ಲಿ ಬಿಜೆಪಿಯ ಪಾದಯಾತ್ರೆ ಮತ್ತು ಕಾಂಗ್ರೆಸ್ ಸರ್ಕಾರದ ನೂರು ದಿನಗಳ ಸಂಭ್ರಮದ ನಡುವೆ ಹೊಸ ವಾಕ್ಸಮರ ಶುರುವಾಗಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರ...

ಖರ್ಗೆ ಕುಟುಂಬದ ಟ್ರಸ್ಟ್‌ಗೆ ಬಿಡಿಎ ಸಿಎ ನಿವೇಶನ ಮಂಜೂರು ಆರೋಪ: ಲೋಕಾಯುಕ್ತ ತನಿಖೆ ಬಗ್ಗೆ ನಿರ್ಧರಿಸಲು ಹೈಕೋರ್ಟ್ ಸೂಚನೆ

ಖರ್ಗೆ ಕುಟುಂಬದ ಟ್ರಸ್ಟ್‌ಗೆ ಬಿಡಿಎ ಸಿಎ ನಿವೇಶನ ಮಂಜೂರು ಆರೋಪ: ಲೋಕಾಯುಕ್ತ ತನಿಖೆ ಬಗ್ಗೆ ನಿರ್ಧರಿಸಲು ಹೈಕೋರ್ಟ್ ಸೂಚನೆ

by Shwetha
September 11, 2026
0

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ)ಯಿಂದ ನಿಯಮಬಾಹಿರವಾಗಿ ಸಿಎ ನಿವೇಶನ ಮಂಜೂರು ಮಾಡಲಾಗಿದೆ ಎಂಬ ಆರೋಪಕ್ಕೆ...

ನಕಲಿ GST ನೋಂದಣಿಗೆ ಕಡಿವಾಣ: ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲು ದೆಹಲಿ ಹೈಕೋರ್ಟ್ ಸೂಚನೆ

ನಕಲಿ GST ನೋಂದಣಿಗೆ ಕಡಿವಾಣ: ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲು ದೆಹಲಿ ಹೈಕೋರ್ಟ್ ಸೂಚನೆ

by Shwetha
September 11, 2026
0

ಕಳವುಗೊಂಡ ಅಥವಾ ದುರುಪಯೋಗಪಡಿಸಿಕೊಂಡ PAN ಮತ್ತು ಆಧಾರ್ ವಿವರಗಳನ್ನು ಬಳಸಿಕೊಂಡು ನಕಲಿ GST ನೋಂದಣಿ ಮಾಡಿಸಿ ಹಣಕಾಸು ವಂಚನೆ ನಡೆಸುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೆಹಲಿ...

ಆಪರೇಷನ್ ಕರಾವಳಿ 2028:ಕೇಸರಿ ಕೋಟೆಯಲ್ಲಿ ಡಿಕೆಶಿ ಬ್ಯಾಟಿಂಗ್ 30 ವರ್ಷಗಳ ಬಿಜೆಪಿ ಪ್ರಾಬಲ್ಯಕ್ಕೆ ಲಗಾಮು ಹಾಕಲು ಕಾಂಗ್ರೆಸ್ ರಣತಂತ್ರ

ಆಪರೇಷನ್ ಕರಾವಳಿ 2028:ಕೇಸರಿ ಕೋಟೆಯಲ್ಲಿ ಡಿಕೆಶಿ ಬ್ಯಾಟಿಂಗ್ 30 ವರ್ಷಗಳ ಬಿಜೆಪಿ ಪ್ರಾಬಲ್ಯಕ್ಕೆ ಲಗಾಮು ಹಾಕಲು ಕಾಂಗ್ರೆಸ್ ರಣತಂತ್ರ

by Shwetha
September 11, 2026
0

ಕರ್ನಾಟಕ ರಾಜಕಾರಣದಲ್ಲಿ ಈಗಲೇ 2028ರ ವಿಧಾನಸಭಾ ಚುನಾವಣೆಯ ರಣಕಹಳೆ ಮೊಳಗಿದೆ. ರಾಜ್ಯದ ಅತ್ಯಂತ ಪ್ರಭಾವಿ ರಾಜಕೀಯ ತಂತ್ರಗಾರ ಎನಿಸಿಕೊಂಡಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈಗ ಬಿಜೆಪಿಯ...

ಕಾಂಗ್ರೆಸ್ ಜನಪ್ರಿಯತೆ ಕಂಡು ಕೇಂದ್ರಕ್ಕೆ ಹೊಟ್ಟೆಕಿಚ್ಚು:ಸತೀಶ್ ಜಾರಕಿಹೊಳಿ ಇಡಿ ದಾಳಿ ಕೇವಲ ಆರಂಭವಷ್ಟೇ ನನ್ನ ಮತ್ತು ಡಿಕೆಶಿ ಮೇಲೆ ದಾಳಿ ಗ್ಯಾರಂಟಿ ಎಂದ ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್ ಜನಪ್ರಿಯತೆ ಕಂಡು ಕೇಂದ್ರಕ್ಕೆ ಹೊಟ್ಟೆಕಿಚ್ಚು:ಸತೀಶ್ ಜಾರಕಿಹೊಳಿ ಇಡಿ ದಾಳಿ ಕೇವಲ ಆರಂಭವಷ್ಟೇ ನನ್ನ ಮತ್ತು ಡಿಕೆಶಿ ಮೇಲೆ ದಾಳಿ ಗ್ಯಾರಂಟಿ ಎಂದ ಪ್ರಿಯಾಂಕ್ ಖರ್ಗೆ

by Shwetha
September 11, 2026
0

ರಾಜ್ಯ ರಾಜಕಾರಣದಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಈಗ ಹೊಸ ಸಂಚಲನ ಮೂಡಿಸಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಬೆನ್ನಲ್ಲೇ ಈಗ ಮತ್ತಷ್ಟು ಕಾಂಗ್ರೆಸ್ ಸಚಿವರ ಮೇಲೆ ಇಡಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram