ರೋಹಿತ್, ರಾಣಿಗೆ ಖೇಲ್ ರತ್ನ, ಇಶಾಂತ್ ಗೆ ಅರ್ಜುನ ಪ್ರಶಸ್ತಿ.. ಕರ್ನಾಟಕದ ಪುರುಶೋತ್ತಮ ರೈಗೆ ದ್ರೋಣಾಚಾರ್ಯ ಪ್ರಶಸ್ತಿ..!

1 min read
Anurag Thakur hands over trophies to 2020 National Sports Awards winners

ರೋಹಿತ್, ರಾಣಿಗೆ ಖೇಲ್ ರತ್ನ, ಇಶಾಂತ್ ಗೆ ಅರ್ಜುನ ಪ್ರಶಸ್ತಿ.. ಕರ್ನಾಟಕದ ಪುರುಶೋತ್ತಮ ರೈಗೆ ದ್ರೋಣಾಚಾರ್ಯ ಪ್ರಶಸ್ತಿ..!

Anurag Thakur hands over trophies to 2020 National Sports Awards winnersಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು 2020ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಧಾನ ಮಾಡಿದ್ರು.
ಕೋವಿಡ್ -19 ಸೋಂಕಿನ ಕಾರಣ 2020ನೇ ಸಾಲಿನ ಕ್ರೀಡಾ ಪ್ರಶಸ್ತಿಗಳನ್ನು ಆಗಸ್ಟ್ 29ರಂದು ಪ್ರಧಾನ ಮಾಡಿರಲಿಲ್ಲ.
74ನೇ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಲ್ಲಿ ಐವರಿಗೆ ಖೇಲ್ ರತ್ನ ಮತ್ತು 27 ಮಂದಿಗೆ ಅರ್ಜುನ ಪ್ರಶಸ್ತಿಗಳನ್ನು ನೀಡಲಾಗಿದೆ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಾಂದ್ ಖೇಲ್ ರತ್ನ ಪ್ರಶಸ್ತಿ ಅಂತ ಮರು ನಾಮಕರಣ ಮಾಡಲಾಗಿದೆ.
ಕ್ರಿಕೆಟಿಗ ರೋಹಿತ್ ಶರ್ಮಾ, ಪ್ಯಾರಾ ಒಲಿಂಪಿಯನ್ ಮರಿಯಪ್ಪನ್ ತಂಗವೇಲು, ರೆಸ್ಲರ್ ವಿನೇಶ್ ಪೋಗತ್ ಹಾಗೂ ಹಾಕಿ ಆಟಗಾರ್ತಿ ರಾಣಿ ರಾಂಪಲ್ ಅವರಿಗೆ ಮೇಜರ್ ಧ್ಯಾನ್ ಚಾಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ಆಡುತ್ತಿರುವುದರಿಂದ ರೋಹಿತ್ ಶರ್ಮಾ ಅವರು ಈ ಪ್ರಶಸ್ತಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಅರ್ಜುನ ಪ್ರಶಸ್ತಿ ವಿಜೇತರು -ಅತನು ದಾಸ್ (ಆರ್ಚೆರಿ), ದುಟಿ ಚಾಂದ್ (ಅಥ್ಲೆಟಿಕ್ಸ್), ಸಾತ್ವಿಕ್ ಸಾಯ್ ರಾಜ್, ಚಿರಾಗ್ ಚಂದ್ರ ಶೇಖರ್ ಶೆಟ್ಟಿ (ಬ್ಯಾಡ್ಮಿಂಟನ್), ವಿಶೇಷ್ ಭ್ರಿಗುವಂಶಿ (ಬಾಸ್ಕೇಟ್ ಬಾಲ್), ಮನೀಶ್ ಕೌಶಿಕ್ (ಬಾಕ್ಸಿಂಗ್), ಲೊವ್ಲಿನಾ ಬೊರ್ಗೊಹೇನ್ (ಬಾಕ್ಸಿಂಗ್), ಇಶಾಂತ್ ಶರ್ಮಾ, ದೀಪ್ತಿ ಶರ್ಮಾ (ಕ್ರಿಕೆಟ್), ಸಾವಂತ್ ಅಜೇಯ್ (ಈಕ್ವೆಸ್ಟ್ರೀಯನ್), ಸಂದೇಶ್ ಝಿಂಗನ್ (ಫುಟ್‍ಬಾಲ್), ಆದಿತಿ ಅಶೋಕ್ (ಗಾಲ್ಫ್), ಆಕಾಶ್ ದೀಪ್ ಸಿಂಗ್, ದೀಪಿಕಾ (ಹಾಕಿ), ದೀಪಕ್ (ಕಬಡ್ಡಿ), ಕಾಲೆ ಸಾರಿಕಾ ಸುಧಾಕರ್ (ಖೋ ಖೋ), ದತ್ತು ಬಾಬನ್ (ರೋಯಿಂಗ್), ಮನು ಬಾಕರ್ (ಶೂಟಿಂಗ್), ಸೌರಭ್ ಚಾಧರಿ (ಶೂಟಿಂಗ್), ಮಧುರಿಕಾ ಪಾಟ್ಕರ್ ( ಟೇಬಲ್ ಟೆನಿಸ್), ದಿವಿಜಿ ಶರಣ್ (ಟೆನಿಸ್), ಶಿವ ಕೇಶವನ್ (ವಿಂಟರ್ ಸ್ಪೋಟ್ರ್ಸ್ ), ದಿವ್ಯ ಕಕ್ರನ್ (ರೆಸ್ಲಿಂಗ್), ರಾಹುಲ್ ಆವಾರೆ (ರೆಸ್ಲಿಂಗ್), ಸೂರ್ಯ ನಾರಾಯಣ ಜಾಧವ್ (ಪ್ಯಾರಾ ಸ್ವಿಮ್ಮಿಂಗ್), ಸಂದೀಪ್ (ಪ್ಯಾರಾ ಅಥ್ಲೆಟಿಕ್ಸ್), ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್)
ಇನ್ನು ಕರ್ನಾಟಕದ ಹಿರಿಯ ಅಥ್ಲೆಟಿಕ್ ಕೋಚ್ ಪುರುಶೋತ್ತಮ ರೈ, ಆರ್ಚೆರಿ ಕೋಚ್ ಧರ್ಮೆಂದ್ರ ತಿವಾರಿ, ಬಾಕ್ಸಿಂಗ್ ಕೋಚ್ ಶಿವ್ ಸಿಂಗ್, ಹಾಕಿ ಗುರು ರೊಮೇಶ್ ಪಥಾನಿಯಾ, ಕಬಡ್ಡಿ ಕೋಚ್ ಕೃಷ್ಣನ್ ಕುಮಾರ್ ಹೂಡಾ, ಪ್ಯಾರಾ ಪವರ್ ಲಿಫ್ಟಿಂಗ್ ಕೋಚ್ ವಿಜಯ್ ಬಾಲಚಂದ್ರ ಮುನಿಶ್ವರ್, ಟೆನಿಸ್ ಕೋಚ್ ನರೇಶ್ ಕುಮಾರ್ ಮತ್ತು ರೆಸ್ಲಿಂಗ್ ಕೋಚ್ ಓಂ ಪ್ರಕಾಶ್ ಅವರು ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd