Bollywood News : 400 ಕೋಟಿ ರೂಪಾಯಿಗಳ ಡೀಲ್ ಗೆ ಅನುಷ್ಕಾ ಸಹಿ…!!
ಸದ್ಯ ಮಗಳ ಜನನದ ನಂತರ ನಿಧಾನವಾಗಿ ಸಿನಿಮಾ ಇಂಡಸ್ಟ್ರಿಗೆ ಕಮ್ ಬ್ಯಾಕ್ ಮಾಡ್ತಿರುವ ನಟಿ , ನಿರ್ಮಾಪಕಿ ಅನುಷ್ಕಾ ಶರ್ಮಾ ಈಗ ದೊಡ್ಡ ಮೊತ್ತಕ್ಕೆ ಡೀಲ್ ಮಾಡಿಕೊಂಡಿದ್ದಾರೆ.
ಹೌದು… ಅನುಷ್ಕಾ ಶರ್ಮಾ ಅವರ ಸಿನಿಮಾ ನಿರ್ಮಾಣ ಸಂಸ್ಥೆಯು ಅಮೆಜಾನ್, ನೆಟ್ ಫ್ಲಿಕ್ಸ್‌ನೊಂದಿಗೆ 400 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದೆ.
ನಟಿ ಅನುಷ್ಕಾ ಶರ್ಮಾ ಮತ್ತು ಅವರ ಸಹೋದರ ಕರ್ಣೇಶ್ ಶರ್ಮಾ ಅವರ ನಿರ್ಮಾಣ ಸಂಸ್ಥೆ ಕ್ಲೀನ್ ಸ್ಲೇಟ್ ಫಿಲ್ಮ್ಸ್ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಜೊತೆಗೆ ಸುಮಾರು 400 ಕೋಟಿ ($ 54 ಮಿಲಿಯನ್) ಮೌಲ್ಯದ ಮಾಡಿಕೊಂಡಿದ್ದಾರೆ.
ಕ್ಲೀನ್ ಸ್ಲೇಟ್ ಫಿಲ್ಮ್ಜ್ ಮುಂದಿನ 18 ತಿಂಗಳುಗಳಲ್ಲಿ ಸ್ಟ್ರೀಮಿಂಗ್ ಸೇವೆಗಳಲ್ಲಿ ಎಂಟು ಚಲನಚಿತ್ರಗಳು ಮತ್ತು ಸರಣಿಗಳನ್ನು ಬಿಡುಗಡೆ ಮಾಡುತ್ತದೆ. ಕ್ಲೀನ್ ಸ್ಲೇಟ್ ಫಿಲ್ಮ್ಜ್‌ನೊಂದಿಗೆ ಮುಂಬರುವ ಮೂರು ನಿರ್ಮಾಣಗಳನ್ನು ಬಹಿರಂಗಪಡಿಸುವುದಾಗಿ ನೆಟ್‌ಫ್ಲಿಕ್ಸ್ ವಕ್ತಾರರು ಖಾಸಗಿ ವೆನ್ ಪೋರ್ಟಲ್ ಗೆ ದೃಢಪಡಿಸಿದ್ದಾರೆ..
anushka sharma – made a deal of 400 crore rupees with netflix , amazon prime
ಧನುಶ್ ‘ಸರ್’ ಸಿನಿಮಾದಿಂದ ಹೊರನಡೆದ ಛಾಯಾಗ್ರಾಹಕ..!!! ಕಾರಣವೇನು..??
ಒಟ್ಟು 8 ತಿಂಗಳುಗಳ ಕಾಲ ಸಿನಿಮಾಗಳು ಮತ್ತು ವೆಬ್ ಸರಣಿಯನ್ನು ಅನುಷ್ಕಾ ಶರ್ಮಾ ಅವರ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಲಿದೆ. ಈ ಒಟಿಟಿ ಯೋಜನೆ ಒಟ್ಟು 54 ಮಿಲಿಯನ್ ಡಾಲರ್ ಅಂದರೆ 400 ಕೋಟಿ ರೂ.ಗೆ ಡೀಲ್ ಆಗಿದೆ ಎಂದು ವರದಿ ಆಗಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ.
ಸದ್ಯ ಮತ್ತೆ ಕಮ್ ಬ್ಯಾಕ್ ಮಾಡಲು ಹೊರಟಿರುವ ಅನುಷ್ಕಾ ಈಗಾಗಲೇ ಮೂರು ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ..