1 ವರ್ಷ ಪೂರೈಸಿದ ವಮಿಕಾ – ಬರ್ತಡೇ ಆಚರಿಸಿದ ವಿರುಷ್ಕಾ…
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾಳ ಮೊದಲ ಹುಟ್ಟುಹಬ್ಬವನ್ನು ದಕ್ಷಿಣ ಆಫ್ರಿಕಾದಲ್ಲಿ ಆಚರಿಸಿಕೊಂಡಿದ್ದಾರೆ. ಆತಿಥೇಯ ರಾಷ್ಟ್ರದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ವಿರಾಟ್ ಟೀಮ್ ಇಂಡಿಯಾ ಪರ ಆಡುತ್ತಿರುವುದರಿಂದ ಕುಟುಂಬವು ಬಯೋ ಬಬಲ್ನಲ್ಲಿದೆ, ಆದರೆ ಅನುಷ್ಕಾ ವಮಿಕಾ ಅವರ ಜನ್ಮದಿನವು ಎಲ್ಲ ರೀತಿಯಲ್ಲೂ ಪರಿಪೂರ್ಣವಾಗಿದೆ ಎಂದು ಖಚಿತಪಡಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ವಮಿಕಾ ಅವರ ಹುಟ್ಟುಹಬ್ಬದ ಆಚರಣೆಯ ಚಿತ್ರವನ್ನು ಹಂಚಿಕೊಂಡ ಅನುಷ್ಕಾ, “ಸೂರ್ಯ ಪ್ರಕಾಶಮಾನವಾಗಿತ್ತು, ಬೆಳಕು ಸುಂದರವಾಗಿತ್ತು, ಟೇಬಲ್ ತುಂಬಿತ್ತು ಮತ್ತು ಅದರಂತೆಯೇ ನಮ್ಮ ಪುಟ್ಟ ಹುಡುಗಿ ಒಂದು ವರ್ಷಕ್ಕೆ ಕಾಲಿಟ್ಟಿದ್ದಾಳೆ ” ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಮತ್ತು ಅನುಷ್ಕಾವಮಿಕಾಹುಟ್ಟುಹಬ್ಬದ ಪಾರ್ಟಿಯ ಬಗ್ಗೆ ಮಾತನಾಡುತ್ತಾ ದಿನವನ್ನು ವಿಶೇಷವಾಗಿ ಮಾಡಿದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. “ಅನುಷ್ಕಾ ವಮಿಕಾಳನ್ನ ತನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡಿರುವ ಚಿತ್ರ ಹಂಚಿಕೊಂಡು, ಅದಕ್ಕೆ “my baby girl “ ಎಂದು ಶೀರ್ಷಿಕೆ ನೀಡಿದ್ದಾರೆ.
ಕಳೆದ ವರ್ಷ ಜನವರಿ 11 ರಂದು ವಿರಾಟ್ ಮತ್ತು ಅನುಷ್ಕಾವಮಿಕಾಳನ್ನ ಬರಮಾಡಿಕೊಂಡಿದ್ದರು. ಅಂದಿನಿಂದ ಮಗಳ ಬಗ್ಗೆ ಪೋಷಕಕರು ತೀವ್ರ ಕಾಳಜಿ ವಹಿಸಿದ್ದಾರೆ. ಆಕೆಯ ಮುಖವನ್ನ ಇದುವರೆಗೆ ಎಲ್ಲಿಯೂ ರಿವಿಲ್ ಮಾಡಿಲ್ಲ.