Virat Kohli : ಉಜ್ಜಯನಿ ಮಹಾಕಾಳೇಶ್ವರನ ಮೊರೆಹೋದ ವಿರಾಟ್ ಅನುಷ್ಕಾ….
ಆಸ್ಟ್ರೇಲಿಯಾ ವಿರುದ್ಧದ 4 ನೇ ಟೆಸ್ಟ್ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರ ಜೊತೆ ಮಧ್ಯಪ್ರದೇಶದ ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಶನಿವಾರ ಬೆಳಗ್ಗೆ ಉಜ್ಜಯಿನಿ ಮಹಾಕಾಳೇಶ್ವರ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ ಭಸ್ಮ ಆರತಿಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಪುರೋಹಿತರು ವಿರುಷ್ಕಾ ದಂಪತಿಗೆ ಆಶೀರ್ವದಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಉಜ್ಜಯಿನಿ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ವಿರಾಟ್ ಮತ್ತು ಅನುಷ್ಕಾ ಇತ್ತೀಚೆಗೆ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ತಮ್ಮ ಮಗಳೊಂದಿಗೆ ರಿಷಿಕೇಶ ಮತ್ತು ಬೃಂದಾವನಕ್ಕೆ ಭೇಟಿ ನೀಡಿದ್ದರು. ವೃಂದಾವನದಲ್ಲಿದ್ದಾಗ, ಕುಟುಂಬವು ಬಾಬನೀಮ್ ಕರೋಲಿ ಆಶ್ರಮಕ್ಕೆ ಭೇಟಿ ನೀಡಿತು. ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮದಲ್ಲಿ ಸ್ವಾಮಿ ದಯಾನಂದ ಜಿ ಮಹಾರಾಜ್ ಸಮಾಧಿಗೆ ಭೇಟಿ ನೀಡಿದರು.
Anushka Sharma, Virat Kohli Visit Mahakaleshwar Temple In Ujjain, Offer Prayers
Virat Kohli and Anushka Sharma at Mahakal temple, Ujjain🧡pic.twitter.com/3GUMc0EXDd
— Mufaddal Vohra (@mufaddel_vohra) March 4, 2023