ಪಾಪಿ ಪಾಕ್ – ನೀಚ ಚೀನಾದ ಷಡ್ಯಂತ್ರ; ಇಬ್ಬದಿಗಳಿಂದ ಭಾರತವನ್ನು ಬೆದರಿಸುವ ತಂತ್ರ: ಲಡಾಕ್ ಎಲ್ಓಸಿ ಗಡಿಯಲ್ಲಿ 20 ಸಾವಿರ ಪಾಕಿಗಳ ಸೈನ್ಯ ಜಮಾವಣೆ

ಚೀನಾ ಭಾರತಕ್ಕೆ ಯಾವತ್ತಿಗೂ ನಂಬಿಕೆ ಅರ್ಹವಲ್ಲದ ಮಿತ್ರ ಅನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಲೇ ಇದೆ. ಒಂದು ಕಡೆಗೆ ಚೀನಾದ 59 ಆ್ಯಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ ಅದರ ಬೆನ್ನ ಹಿಂದೆಯೇ ಚೀನಾ ಮತ್ತೊಮ್ಮೆ ಭಾರತವನ್ನು ಹೆದರಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದಕ್ಕಾಗಿ ಈಗ ತನ್ನ ಚೇಲಾ ಪಾಕಿಸ್ತಾನವನ್ನು ಎತ್ತಿ ಕಟ್ಟಿದೆ. ಭಾರತವನ್ನು ಎರಡೂ ದಿಕ್ಕಿನಿಂದ ಆಕ್ರಮಣ ಮಾಡಲು ಹಿಂಜರಿಯುವುದಿಲ್ಲ ಅನ್ನುವ ಸಂದೇಶ ರವಾನಿಸ್ತಿದೆಯಾ ನೀಚ ಚೀನಾ? ಇಂತದ್ದೊಂದು ಅನುಮಾನಕ್ಕೆ ಕಾರಣ ಲಡಾಕ್ ಗಡಿಗೆ ಹೊಂದಿಕೊಂಡಿರುವ ಗಿಲ್ಗಿಟ್ ಬಾಲ್ಟಿಸ್ತಾನ ಭಾಗದಲ್ಲಿ ಪಾಕ್ ಸೇನೆಯ 20 ಸಾವಿರ ಸೈನಿಕರು ಜಮಾವಣೆಗೊಂಡಿದ್ದಾರೆ. ಇದು ಯುದ್ಧೋನ್ಮಾದಿ ಪಾಕ್ ನ ಐಎಸ್ಐ ಪ್ರೇರಿತ ನಡೆ ಎಂದು ಭಾರತದ ಬೇಹುಗಾರಿಕೆ ಪಡೆ ಎಚ್ಚರಿಕೆ ನೀಡಿದೆ.

ಇನ್ನು ಹೇಳಿ ಕೇಳಿ ಪಾಕಿಸ್ತಾನ ಉಗ್ರರ ತವರೂರು. ಅಲ್ಲಿಂದ ತಯಾರಿಗಾ ಬಂದವರೇ ಕಾಶ್ಮೀರದಲ್ಲಿ ಶಾಂತಿ ಭಂಗಕ್ಕಾಗಿ ಪುನಃ ಪುನಃ ಪ್ರಯತ್ನಿಸುತ್ತಿರುವುದು ಗುಟ್ಟಿನ ವಿಷಯವೇನಲ್ಲ. ಮೊನ್ನೆ ಮೊನ್ನೆಯಷ್ಟೇ ಕಾಶ್ಮೀರದ ಗಡಿಯಲ್ಲಿ ಭಾರತೀಯ ಯೋಧರಿಂದ ಹತರಾದ 120 ಉಗ್ರರಲ್ಲಿ 20 ಜನ ಹೊರಗಿನಿಂದ ಬಂದವರಾಗಿದ್ದರೇ, ಉಳಿದ 100 ಜನ ಅವರಿಂದ ಟ್ರೈನಿಂಗ್ ಪಡೆದುಕೊಂಡಿದ್ದ ಸ್ಥಳೀಯ ಕಾಶ್ಮೀರಿ ನಿವಾಸಿಗಳು. ಇಂತಹ ಪಾಪಿ ಪಾಕಿ ಉಗ್ರ ಸಂಘಟನೆಗಳ ಜೊತೆ ಚೀನಾ ಮಾತುಕತೆ ನಡೆಸುತ್ತಿದೆ. ಪಾಕ್ ಮೂಲದ ಅಲ್ ಬದರ್ ಸಂಘಟನೆಯ ಜೊತೆ ಚೀನಾ ಮಾತುಕಥೆ ನಡೆಸಿರುವುದನ್ನು ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ಇವೆಲ್ಲವೂ ಸಾರ್ವಭೌಮ ಭಾರತದ ಮೇಲೆ ಯುದ್ಧ ಸಾರುವ ಚೀನಿಯರ ಹುನ್ನಾರವೇ? ಈ ನಿಟ್ಟಿನಲ್ಲಿ ಭಾರತದ ರಾಜತಾಂತ್ರಿಕ ನಡೆಯೇನು ಅನ್ನುವುದು ಈಗ ಕುತೂಹಲ ಹುಟ್ಟಿಸಿದೆ.


ಪಾಕಿಸ್ತಾನ ಸೇನೆ ಉತ್ತರ ಲಡಾಕ್‌ನ ಎಲ್‌ಒಸಿಗೆ :

ಈಗಾಗಲೇ ಕುತಂತ್ರಿ ಚೀನಾದ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್ಎ) ಭಾರತದ ಲಡಾಕ್ ಗಡಿಯಲ್ಲಿ ಜಮಾವಣೆಗೊಂಡಿದ್ದು, ಇದೀಗ ಚೀನಾದ ಸಾಕುನಾಯಿ ಪಾಕಿಸ್ತಾನ ಈ ಸಂದರ್ಭವನ್ನು ಉಪಯೋಗಿಸಿಕೊಂಡು ಕಾಶ್ಮೀರ ಮೇಲೆ ಆಕ್ರಮಣ ನಡೆಸಲು ಸುಮಾರು 20,000 ಹೆಚ್ಚುವರಿ ಸೈನಿಕರನ್ನು ಉತ್ತರ ಲಡಾಕ್‌ನ ಎಲ್‌ಒಸಿಗೆ ಸ್ಥಳಾಂತರಿಸಿದೆ. ಇದು ಪಾಕಿಸ್ತಾನ ಬಾಲಕೋಟ್ ವಾಯುದಾಳಿಯ ನಂತರ ನಿಯೋಜಿಸಿರುವ ಸೈನ್ಯದ ಸಂಖ್ಯೆಗಿಂತ ಹೆಚ್ಚಿನದಾಗಿದೆ. ಪಾಕಿಸ್ತಾನದ ರಾಡಾರ್‌ಗಳು ಈ ಪ್ರದೇಶದಾದ್ಯಂತ ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇರಿಸಿದೆ ಎಂದು ವರದಿಯಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕ್ ಸೈನ ನೆರೆದಿದ್ದು, ಪೂರ್ಣ ಪ್ರಮಾಣದ ದಾಳಿಗೆ ಸಿದ್ಧವಾಗಿದಂತಿದೆ. ಇದೀಗ ಚೀನಾದ ಅಧಿಕಾರಿಗಳು, ಪಾಕ್ ಭಯೋತ್ಪಾದಕ ಸಂಘಟನೆಯ ಅಲ್ ಬದ್ರ್ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಪ್ರೇರಿತ ಹಿಂಸಾಚಾರವನ್ನು ಪ್ರಚೋದಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ಇವೆಲ್ಲವನ್ನೂ ನೋಡುತ್ತಿದ್ದರೇ, ಉಗ್ರರ ನೆರವಿನಿಂದ ಚೀನಾ ಮತ್ತು ಪಾಕ್ ಪರೋಕ್ಷ ಯುದ್ಧಕ್ಕೆ ಸಜ್ಜಾಗಿದ್ದಂತೂ ನಿಜವೆಂದು ತೋರುತ್ತಿದೆ. ಈಗಾಗಲೇ ಭಾರತದ ಸೇನೆ ಚೀನಾ ಗಡಿ ಪ್ರದೇಶದಲ್ಲಿ ಜಮಾವಣೆಗೊಂಡಿದ್ದು ಸೈನದ ದಿಕ್ಕು ತಪ್ಪಿಸಲು ಚೀನಾದ ಈ ನಡೆ ಅನೇಕ ಸಂಶಯಕ್ಕೆ ಕಾರಣವಾಗಿದೆ. ಮೇಲಾಗಿ ಇಂಡಿಯನ್ ಮುಜಾಹಿದ್ ಉಗ್ರ ಸಂಘಟನೆಯ ಮೌಲಾನಾ ಮಸೂದ್ ಅಜರ್ ನಂತಹ ನರ ರಾಕ್ಷಸರನ್ನು ಉಗ್ರರ ಪಟ್ಟಿಗೆ ಸೇರಿಸದಿರಲು ಚೀನ ನಡೆಸಿದ ಕುತಂತ್ರಕ್ಕೆ ಪ್ರತ್ಯುಪಕಾರವಾಗಿ ಈಗ ಉಗ್ರರು ಭಾರತದ ವಿರುದ್ಧ ಚೀನಾಕ್ಕೆ ಬೆಂಬಲ ನೀಡಿದ್ದರು ಆಶ್ಚರ್ಯವಿಲ್ಲ. ಸದ್ಯಕ್ಕಂತೂ ಲಡಾಕ್ ಗಡಿಯಲ್ಲಿ ಎರಡೂ ಕಡೆಯಿಂದ ಯುದ್ಧ ಭೀತಿ ಎದುರಾಗಿದ್ದು, ಚೀನಾ ಮತ್ತು ಪಾಕ್ ಎರಡನ್ನೂ ಹೆಡಮುರಿ ಕಟ್ಟಲು ಸೈನ್ಯಕ್ಕೆ ಪೂರ್ಣ ಸ್ವಾತಂತ್ರ ಕೊಡಬೇಕು ಅನ್ನುವ ಆಗ್ರಹ ವ್ಯಕ್ತವಾಗ್ತಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This