ADVERTISEMENT
Tuesday, March 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

“ಅಗ್ನಿಯ ರೆಕ್ಕೆಗಳು”

admin by admin
May 22, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸೋಲು ಮತ್ತು ಯಶಸ್ಸನ್ನು ಸಮಾನ ವಾಗಿ ಸ್ವೀಕರಿಸಿದ ಒಬ್ಬ ವಿಜ್ಞಾನಿಯ ಯಶೋಗಾಥೆ ಯೇ ” ಅಗ್ನಿಯ ರೆಕ್ಕೆಗಳು “.
ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ರವರು ತನ್ನವರಿಗೋಸ್ಕರ ನೆರವು ನೀಡಲು ದಿನಪತ್ರಿಕೆ ಹಂಚಿದ ಓರ್ವ ಪುಟ್ಟ ಬಾಲಕ. ಇವರು ತಮಿಳುನಾಡಿನ ರಾಮೇಶ್ವರಂ ನ ಲ್ಲಿ 15 ಅಕ್ಟೋಬರ್ 1931 ರಂದು ಜನಿಸಿದರು. ಬಡ ಹಿನ್ನಲೆಯಿಂದಾಗಿ ತನ್ನ ಕುಟುಂಬಕ್ಕೆ ಅರ್ಥಿಕವಾಗಿ ಬೆಂಬಲಿಸುವ ಸಲುವಾಗಿ ಕಿರಿಯ ವಯಸ್ಸಿನಲ್ಲೇ ಕೆಲಸ ಆರಂಭಿಸಿದರು. ಪರಿಶ್ರಮದ ಜೊತೆಗೆ ವಿದ್ಯಾಭ್ಯಾಸ ಪೂರೈಸಿದರು.

ಇವರ ಆತ್ಮಕಥನವನ್ನು ವಿಮರ್ಶೆ ಮಾಡಲು ಹರ್ಷವಾಗುತ್ತಿದೆ.  ಬಡವನಾದರೇನು, ಶ್ರೀಮಂತ ಆದರೇನು ಹೊಟ್ಟೆಗಾಗಿಯೇ ತಿನ್ನುವುದು.. ಎಷ್ಟೇ ಕಷ್ಟ ಇದ್ರೂ ತಾನೂ ಕೂಡ ಶ್ರದ್ದೆ, ಪರಿಶ್ರಮ, ವಿನಯತೆ, ಕನಸುಗಳಿಂದ ಗುರಿಯತ್ತ ನಡೆದರೆ ಯಾವುದೇ ಅಡೆತಡೆಗಳಿಲ್ಲದೇ ಯಶಸ್ಸು ಕಾಣಲು ಸಾಧ್ಯ ಎಂದು ನಿರೂಪಿಸಿದ್ದು ಅಬ್ದುಲ್ ಕಲಾಂ ರವರು.

Related posts

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

March 3, 2026
ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

March 3, 2026

ಬಡತನ ಎನ್ನುವುದು ಶಿಕ್ಷೆ ಅಲ್ಲ, ದೌರ್ಬಲ್ಯ ಅಲ್ಲ. ನಮ್ಮ ಜೀವನವನ್ನು ರೂಪಿಸುವ ಅಪರೂಪದ ಯಶಸ್ಸಿನ ಅಂಗ ಎಂದು ನನಗೆ ಅರಿವಾಗಿದ್ದು ಕಲಾಂ ರಿಂದ.
ಇವರು ಕಷ್ಟವನ್ನು ತೊರೆದು ಕನಸಿನಲ್ಲಿ ತಲ್ಲೀನರಾಗಿ ಯಶಸ್ಸಿನ ಸೂತ್ರವನ್ನು ಅರಿತು ಸಾಧಿಸಿ ಜಗತ್ತಿಗೆ ಮಾದರಿಯಾಗಿ ಬದುಕಿದವರು.. ಜಾತಿ, ಬೇಧ ಭಾವಗಳಿಲ್ಲದೆ ಸಂಯಮದ ಸ್ನೇಹ ಕೊಟ್ಟವರಲ್ಲಿ ಅಗ್ರರು.  ಒಂದು ದಿನ ಸಾಗರದ ಬಳಿ ಕೆಲವು ಹಕ್ಕಿಗಳು ಎತ್ತರಕ್ಕೆ ಹಾರುತ್ತ ಪಟಪಟನೆ ರೆಕ್ಕೆ ಬಡಿದು ಆನಂದದಿಂದ ತೇಲುತ್ತ ಮತ್ತೆ ಕೆಳಗೆ ಬಂದವು.ಆ ಸುಂದರ ದೃಶ್ಯವೇ ಕಲಾಂರವರ ಮನದಲ್ಲಿ ತಾನೂ ಮುಂದೊಂದು ದಿನ ಕಂಡಿತಾ ಆಕಾಶಕ್ಕೇರುತ್ತೇನೆ ಎಂಬ ಕನಸು ಕಾಣಲು ನಾಂದಿಯಾಗಿದ್ದು.
ಮಾನವ ಎಲ್ಲಿದ್ದರು ಈ ವಿಶ್ವದ ಅವಿಭಾಜ್ಯ ಅಂಗ. ಹೀಗಾಗಿ ಕಷ್ಟ ಕೋಟಲೆಗಳ ಭಯ ಬಿಟ್ಟು, ಸಾಧನೆ ಮಾಡಲು ಬೇಕಾಗಿರುವ ಆತ್ಮಶಕ್ತಿಯನ್ನು ಪಡೆಯಿರಿ ಎಂದು ಮನವರಿಕೆ ಮಾಡಿದ್ದೂ ಕಲಾಂರವರೇ.

“ಯಾವ ವಿಷಯಗಳು ನೋವು ಕೊಡುತ್ತವೋ, ಅವು ಮುಂದೆ ನಮಗೆ ಶಿಕ್ಷಣ ನೀಡುತ್ತವೆ ” ಎಂದು ಮೊದಲಿಗೆ ಅರಿತುಕೊಂಡ ಮಹಾನ್ ಶಕ್ತಿ ಅಬ್ದುಲ್ ಕಲಾಂ.
ನಾನು ಶಾಲಾ ದಿನಗಳಲ್ಲಿ ನಿಷ್ಠೆಯಿಂದ ಓದಿದ ಮೊದಲ ಪುಸ್ತಕ “ಅಗ್ನಿಯ ರೆಕ್ಕೆಗಳು “. ಅವರು ಶಿಕ್ಷಕನಾಗಿ, ದೇಶಪ್ರೇಮದ ಜೊತೆಗೆ ಪ್ರಜೆಗಳಿಗೆ ಅತ್ಯುತ್ತಮ ರಾಷ್ಟ್ರಪತಿಯಾಗಿ ಸರ್ವರನ್ನು ಮಕ್ಕಳಂತೆ ಪ್ರೀತಿಸಿದ ಕರುಣಾಮಯಿ. ಇವರೇ ನನ್ನ ಬದುಕಿನ ಆದರ್ಶವಾಗಲು ಕಾರಣವಾಗಿದ್ದು ಈ ಸಂಗತಿಗಳು ಎಂದರೆ ತಪ್ಪಲ್ಲ.  ತಮ್ಮ ಬದುಕಲ್ಲಿ ಸಾವಿರಾರು ಯೋಜನೆಗಳನ್ನು ಕೈಗೊಂಡು ಪ್ರತಿ ನಿಮಿಷವೂ ಕೆಲಸ ದಲ್ಲಿ ತಲ್ಲೀನರಾಗಿ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿ, ನಂತರ ಮಕ್ಕಳಿಗೆ ಜೀವನದ ಸಾರವನ್ನು ಹೇಳಿಕೊಟ್ಟು ಸನ್ಮಾರ್ಗದಲ್ಲಿ ನಡೆಸಿದ ಮಹಾತ್ಮ ಇವರು.  ಇಸ್ರೋ, ಡಿ. ಆರ್. ಡಿ. ಒ. ಗಳಲ್ಲಿ ಕಾರ್ಯನಿರ್ವಹಿಸಿ ” ಭಾರತದ ಕ್ಷಿಪಣಿ ಮತ್ತು ಅಣುಬಾಂಬ್ ಗಳ ಜನಕ ” ಎಂದು ಖ್ಯಾತಿಗೊಂಡು 1998 ರಲ್ಲಿ ನ್ಯೂಕ್ಲಿಯರ್ ಪರೀಕ್ಷೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ. ಇಂಜಿನೀಯರ್ ಆಗಿ, ವಿಜ್ಞಾನಿಯಾಗಿ, ಗುರುವಾಗಿ, ಕವಿಯಾಗಿ, ಸಾಹಿತಿಯಾಗಿ ಸಾಧನೆಯ ಶಿಖರ ಏರುತ್ತಾ ರಾಮಾನುಜನ್ ಪ್ರಶಸ್ತಿ, ವೀರ ಸಾವರ್ಕರ್ ಪ್ರಶಸ್ತಿ, ಭಾರತ ರತ್ನ, ಪದ್ಮವಿಭೂಷಣ ಪ್ರಶಸ್ತಿ ಗಳಿಗೆ ಭಾಜನರು ನಮ್ಮ ಕಲಾಂ..

ಜನಸಾಮಾನ್ಯರ ರಾಷ್ಟ್ರಪತಿಗೆ ಮಕ್ಕಳೆಂದರೆ ಅಕ್ಕರೆ. ಮಕ್ಕಳೊಂದಿಗೆ ಮಗುವಂತೆ ಬೆರೆತು ಅರ್ಹ ಮಾಹಿತಿ ನೀಡುವುದೇ ಇವರ ಕನಸು. ಮಕ್ಕಳಿಗೆ ಪಾಠ ಮಾಡುತ್ತ ಗುರುವಾಗಿ ತಾಯ್ನಾಡಿನಲ್ಲೇ ಮಡಿದ ಸಾಧಕ “ಡಾ. ಅಬ್ದುಲ್ ಕಲಾಂ “.

“ಕನಸು ಕಾಣಿರಿ ” ಎಂದಿದ್ದು ರಾತ್ರಿ ಕನಸು ಕಂಡು ಬೆಳಿಗ್ಗೆ ಮರೆಯುವುದಕ್ಕಲ್ಲ. ನಿರಂತರವಾದ ಕನಸಿನ ಜೊತೆಗೆ ಛಲ ಬಿಡದ ಪರಿಶ್ರಮದಿಂದ ಯಶಸ್ಸು ಕಾಣಿರಿ ಎನ್ನುವುದು ಕಲಾಂ ರವರ ನಿಲುವು ಎಂಬುದು ನನಗೆ ಅರಿವಾಗಿದ್ದೆ ಬಹುಶ “ಅಗ್ನಿಯ ರೆಕ್ಕೆಗಳು ‘ಆತ್ಮಕಥನ ವನ್ನು ಓದಿದ ಮೇಲೆ.  ಪ್ರತಿಯೊಬ್ಬ ಸಾಧಕನ ಬದುಕನ್ನು ಆಳವಾಗಿ ನೋಡಿದ್ರೆ ಒಂದಲ್ಲ ಒಂದು ಅಘಾಧ ನೋವೇ ಅವರ ಯಶಸ್ಸಿಗೆ ಕಾರಣವಾಗಿತ್ತೆ.

ನಮ್ಮಲ್ಲಿ ಸಾಧಿಸುವ ಇಚ್ಛಾಶಕ್ತಿ, ತಾಳ್ಮೆ, ಗುರಿ, ಪ್ರಯತ್ನ ಇದ್ರೆ ಜಗತ್ತನ್ನೇ ಗೆಲ್ಲಬಹುದು.  ಕಲಾಂ ರಂತೆ ಬಡತನದಲ್ಲಿ ಬೆಳೆದು ಮುಂದೆ ಯಶಸ್ಸು ಕಂಡವರು ಸಾವಿರಾರು ಮಂದಿ ಇದ್ದಾರೆ. ಆದರೆ ನನ್ನ ಬದುಕಿಗೆ ಆದರ್ಶವಾಗಿದ್ದು ಡಾ. ಅಬ್ದುಲ್ ಕಲಾಂ ರವರ ಆತ್ಮಕಥನ ” ಅಗ್ನಿಯ ರೆಕ್ಕೆಗಳು “.

-ಚೈತ್ರ ಕಬ್ಬಿನಾಲೆ

Tags: APJ Abdul Kalamwings of fire
ShareTweetSendShare
Join us on:

Related Posts

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

by Shwetha
March 3, 2026
0

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತ ತಲುಪಲು ವಿಫಲವಾದ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ತನ್ನ ಆಟಗಾರರ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಟೂರ್ನಿಯಲ್ಲಿ ನಿರಾಶಾಜನಕ ಪ್ರದರ್ಶನ...

ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

by Shwetha
March 3, 2026
0

ಪಶ್ಚಿಮ ಏಷ್ಯಾದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಕಿಚ್ಚು ತಣ್ಣಗಾಗುವ ಬದಲು ಮತ್ತಷ್ಟು ಉರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಸಂಧಾನದ ಪ್ರಸ್ತಾಪವನ್ನು...

ಪುಗಸಟ್ಟೆ ಕಲಿಸ್ತಾರಾ ಎಂದು ದರ್ಪ ತೋರಿದ್ದ ಶಿಕ್ಷಕಿಗೆ ಶಾಕ್: ಹಾಲ್ ಟಿಕೆಟ್ ತಡೆದಿದ್ದಕ್ಕೆ ಅಮಾನತು ಶಿಕ್ಷೆ

ಪುಗಸಟ್ಟೆ ಕಲಿಸ್ತಾರಾ ಎಂದು ದರ್ಪ ತೋರಿದ್ದ ಶಿಕ್ಷಕಿಗೆ ಶಾಕ್: ಹಾಲ್ ಟಿಕೆಟ್ ತಡೆದಿದ್ದಕ್ಕೆ ಅಮಾನತು ಶಿಕ್ಷೆ

by Shwetha
March 3, 2026
0

ರಾಣೇಬೆನ್ನೂರು: ವಿದ್ಯಾರ್ಥಿಗಳ ಪಾಲಿಗೆ ವಿದ್ಯಾದೇಗುಲವಾಗಬೇಕಿದ್ದ ಶಿಕ್ಷಣ ಸಂಸ್ಥೆಯೊಂದು ವ್ಯಾಪಾರ ಕೇಂದ್ರವಾಗಿ ಬದಲಾದ ಅಮಾನವೀಯ ಘಟನೆಗೆ ಶಿಕ್ಷಣ ಇಲಾಖೆ ಚುರುಕು ಮುಟ್ಟಿಸಿದೆ. ಶುಲ್ಕ ಬಾಕಿ ಇದೆ ಎಂಬ ಕಾರಣಕ್ಕೆ...

ವಿಶ್ವಗುರು ಪಟ್ಟಕ್ಕೇರಲು ಇದು ಸಕಾಲ, ಜಾಗತಿಕ ಶಾಂತಿಗೆ ಮುಂದಾಗಿ: ಪ್ರಧಾನಿ ಮೋದಿಗೆ ಓವೈಸಿ ಖಡಕ್ ಸಂದೇಶ

ವಿಶ್ವಗುರು ಪಟ್ಟಕ್ಕೇರಲು ಇದು ಸಕಾಲ, ಜಾಗತಿಕ ಶಾಂತಿಗೆ ಮುಂದಾಗಿ: ಪ್ರಧಾನಿ ಮೋದಿಗೆ ಓವೈಸಿ ಖಡಕ್ ಸಂದೇಶ

by Shwetha
March 3, 2026
0

ಹೈದರಾಬಾದ್: ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿರುವ ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಕಾರ್ಮೋಡ ದಟ್ಟವಾಗುತ್ತಿರುವ ಹೊತ್ತಿನಲ್ಲೇ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಪ್ರಧಾನಿ ನರೇಂದ್ರ...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (03-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 3, 2026
0

ದಿನ ಭವಿಷ್ಯ: 03-03-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಬಹಳ ಉತ್ಸಾಹದಾಯಕ ದಿನವಾಗಿದೆ. ರಾಶ್ಯಾಧಿಪತಿ ಕುಜನು ಅನುಕೂಲಕರ ಸ್ಥಾನದಲ್ಲಿರುವುದರಿಂದ ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗುತ್ತದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram