ಬಹು ನಿರೀಕ್ಷಿತ ಐಫೋನ್ 14 ಸರಣಿ ಬಿಡುಗಡೆ.. ಬೆಲೆ ಎಷ್ಟು? ಓದಿ…
ಸ್ಮಾರ್ಟ್ ಫೋನ್ ದಿಗ್ಗಜ ಸಂಸ್ಥೆಆಪಲ್ ತನ್ನ ಬಹು ನಿರೀಕ್ಷಿತ ಐಫೋನ್ 14 ಸರಣಿಯನ್ನ ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿ ಬುಧವಾರ ಬಿಡುಗಡೆ ಮಾಡಲಾಗಿದೆ. ‘ಫಾರ್ ಔಟ್’ ಹೆಸರಿನ ಕಾರ್ಯಕ್ರದಲ್ಲಿ ಐಫೋನ್ 14 ಸರಣಿ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಲಾಗಿದೆ. ನಿರೀಕ್ಷೆಯಂತೆಯೇ ‘ಐಫೋನ್ 14’ ಸರಣಿಯಲ್ಲಿ iPhone 14, iPhone 14 Plus, iPhone 14 Pro ಮತ್ತು iPhone 14 Pro Max ಎಂಬ ನಾಲ್ಕು ಮಾದರಿ ಫೋನ್ಗಳನ್ನು ಬಿಡುಗಡೆ ಮಾಡಲಾಗಿದೆ.
ಭಾರತದಲ್ಲಿ ಐಫೋನ್ 14 ಸರಣಿಯ ಮುಂಚಿತ ಬಕ್ಕಿಂಗ್ ಸೆಪ್ಟೆಂಬರ್ 9 ರಂದು ಸಂಜೆ 5:30 ರಿಂದ ಪ್ರಾರಂಭವಾಗಲಿದೆ.
ಆರಂಭಿಕ ಬೆಲೆ 79,900 ರೂ
ಐಫೋನ್ 14 ನ್ನ 128GB, 256GB ಮತ್ತು 512GB ಮೆಮೋರಿಯಲ್ಲಿ ಪರಿಚಯಿಸಲಾಗಿದೆ. ಅವುಗಳ ಬೆಲೆ 79,900, 89,900 ಮತ್ತು 1,09,900 ರೂ. ಇರಲಿದೆ. ಅದೇ ಮೆಮೋರಿಯೊಂದಿಗೆ ಐಫೋನ್ 14 ಪ್ಲಸ್ ನ್ನ ಸಹ ಪರಿಚಯಿಸಲಾಗಿದೆ. ಅವುಗಳ ಬೆಲೆ 89,900, 99,900 ಮತ್ತು 1,19,900 ರೂ. ನಿಗದಿಪಡಿಸಲಾಸಗಿದೆ.
ಇದಲ್ಲದೆ, iPhone 14 Pro ಅನ್ನು 128GB, 256GB, 512GB ಮತ್ತು 1TB ಮೆಮೋರಿಯೊಂದಿಗೆ ಪರಿಚಯಿಸಲಾಗಿದೆ. ಅವುಗಳ ಬೆಲೆ 1,29,900, 1,39,900, 1,59,900 ಮತ್ತು 1,79,900 ರೂ. ಇರಲಿದೆ. iPhone 14 Pro Max ಬೆಲೆ 1,39,900, 1,49,900, 1,69,900 ಮತ್ತು 1,89,900 ರೂ.
ಸೀರೀಸ್ 8, SE ಮತ್ತು ಅಲ್ಟ್ರಾ ವಾಚ್
ಕಂಪನಿಯು ವಾಚ್ ಸೀರಿಸ್ 8 ಅನ್ನು ಬಿಗ್ ಡಿಸ್ಪ್ಲೇ ಮತ್ತು ದೇಹ-ತಾಪಮಾನ ಸೇನ್ಸಾರ್ ಸೇರಿದಂತೆ ಹೆಚ್ಚಿನ ಹೆಲ್ತ್ ಫೀಚರ್ಸ್ ನೊಂದಿಗೆ ಬಿಡುಗಡೆ ಮಾಡಲಾಗಿದೆ.
SE, ಅಲ್ಟ್ರಾ ವಾಚ್ ಮತ್ತು AirPods Pro 2 ಅನ್ನು ಸಹ ಪರಿಚಯಿಸಲಾಗಿದೆ. ವಾಚ್ ಸೀರೀಸ್ 8 ಬೆಲೆ ರೂ.45,900, ಎಸ್ಇ ಬೆಲೆ ರೂ.29,900. ಮತ್ತು ಅಲ್ಟ್ರಾ ಬೆಲೆ ರೂ.89,900. ಇದೆ. ಸರಣಿ 8 ಮತ್ತು SE ಸೆಪ್ಟೆಂಬರ್ 16 ರಿಂದ ಲಭ್ಯವಿದ್ದರೆ ಅಲ್ಟ್ರಾ ಸೆಪ್ಟೆಂಬರ್ 23 ರಿಂದ ಲಭ್ಯವಿರುತ್ತದೆ.