RCB | ಏಪ್ರಿಲ್ 23… ಆರ್ ಸಿಬಿಗೆ ಅತ್ಯಂತ ಕೆಟ್ಟ ದಿನ
ಏಪ್ರಿಲ್ 23… ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅತ್ಯಂತ ಕೆಟ್ಟ ದಿನಯಾಗಿ ಉಳಿದು ಬಿಟ್ಟಿದೆ.
ಸರಿಯಾಗಿ ಐದು ವರ್ಷಗಳ ಹಿಂದೆ ಅಂದ್ರೆ 2017 ಏಪ್ರಿಲ್ 23ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ಅಲ್ಪಮೊತ್ತ ಸ್ಕೋರ್ ದಾಖಲು ಮಾಡಿತ್ತು.
ಆಗ ಕೊಲ್ಕತ್ತಾ ನೈಟ್ ರೈಸರ್ಸ್ ಕೊಟ್ಟಿದ್ದ 131 ರನ್ ಗಳ ಗುರಿ ಬೆನ್ನಟ್ಟಿದ ಆರ್ ಸಿಬಿ ಟೂರ್ನಿಯಲ್ಲಿಯೇ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 49 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಇದೀಗ ಸರಿಯಾಗಿ ಐದು ವರ್ಷಗಳ ಬಳಿಕ ಅದೇ ಏಪ್ರಿಲ್ 28 ರಂದು ಸೇಮ್ ಟು ಸೇಮ್ ಅದೇ ರೀತಿಯ ಪ್ರದರ್ಶನ ನೀಡಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಗಳು ಪೈಪೋಟಿಗೆ ಬಿದ್ದಂತೆ ಆರ್ ಸಿಬಿ ತಂಡದ ಬ್ಯಾಟರ್ ಗಳ ವಿಕೆಟ್ ಗಳನ್ನು ಕಬಳಿಸಿದರು.
ಪರಿಣಾಮ ರಾಯಲ್ ಚಾಲೆಂಜರ್ಸ್ ತಂಡ ಕೇವಲ 68 ರನ್ ಗಳಿಗೆ ಆಲೌಟ್ ಆಗಿದೆ.

ಆದ್ರೆ ಇದೇ ಏಪ್ರಿಲ್ 23 ರಂದು ವಿಚಿತ್ರ ಎಂಬಂತೆ ಆರ್ ಸಿಬಿಗೆ ಒಳ್ಳೆ ದಾಖಲೆಯೊಂದಿದೆ. ಅದು 2013 ಪುಣೆ ವಾರಿಯರ್ಸ್ ಮೇಲೆ ಕ್ರಿಸ್ ಗೇಲ್ ಸುನಾಮಿ ಇನ್ನಿಂಗ್ಸ್..!!
ಹೌದು..! ಅಂದಿನ ಪಂದ್ಯದಲ್ಲಿ ಆರ್ ಸಿಬಿಯ ಕ್ರಿಸ್ ಗೇಲ್ ಪುಣೆ ಮೇಲೆ ದಂಡಯಾತ್ರೆ ನಡೆಸಿದ್ದರು.
ಆ ಪಂದ್ಯದಲ್ಲಿ ಯುನಿವರ್ಸಲ್ ಬಾಸ್ 17 ಸಿಕ್ಸರ್ ಮತ್ತು 13 ಬೌಂಡರಿಗಳೊಂದಿಗೆ ವಿಧ್ವಂಸಕ 175 ರನ್ ಗಳಿಸಿದ್ದರು.
ಈ ಪಂದ್ಯದಲ್ಲಿ ಆರ್ ಸಿಬಿ ತಂಡ 263 ರನ್ ಗಳಿಸಿತ್ತು.
ಈ ಗುರಿ ಬೆನ್ನಟಿದ ಪುಣೆ ವಾರಿಯರ್ಸ್ ತಂಡ 131 ರನ್ ಗಳಿಂದ ಸೋಲು ಅನುಭವಿಸಿತ್ತು.
ಹೀಗೆ ಒಂದೇ ದಿನಾಂಕದಂದು ರಾಯಲ್ ಚಾಲೆಂಜರ್ಸ್ ಗೆ ಒಂದು ಒಳ್ಳೆ ದಾಖಲೆ.. ಎರಡು ಕೆಟ್ಟ ದಾಖಲೆಗಳಿವೆ.
ಒಂದೇ ತಾರೀಕಿನಂದು ಆ ಕಡೆ ಅತ್ಯಲ್ಪ ಸ್ಕೋರ್… ಮತ್ತೊಂದೆಡೆ ಅತ್ಯಧಿಕ ಸ್ಕೋರ್ ಮಾಡಿದ ಅಪರೂಪದ ದಾಖಲೆ ರಾಯಲ್ ಚಾಲೆಂಜರ್ಸ್ ತಂಡಕ್ಕಿದೆ.
ಆದ್ರೆ ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ತಂಡದ ಪ್ರದರ್ಶನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಅಲ್ಲದೇ ದಯೆಮಾಡಿ ಏಪ್ರಿಲ್ 23 ರಂದು ಆರ್ ಸಿಬಿಗೆ ಯಾವುದೇ ಪಂದ್ಯವನ್ನ ನಿಗದಿಪಡಿಸಬೇಡಿ ಎಂದು ವ್ಯಂಗ್ಯವಾಡುತ್ತಿದ್ದಾರೆ. april-23-brings-bad-luck-rcb