ಕೊರೊನಾ 2ನೇ ಅಲೆಯಲ್ಲಿ ಸ್ವಲ್ಪ ಉದಾಸೀನ ಮಾಡಿದ್ವಿ : ಆರಗ ಜ್ಞಾನೇಂದ್ರ araga gnanendra saaksha tv
ಬೆಂಗಳೂರು : ಎರಡನೇ ಅಲೆಯಲ್ಲಿ ಸ್ವಲ್ಪ ಉದಾಸೀನ ಮಾಡಿದ್ವಿ, ಎರಡನೇ ಅಲೆಯಲ್ಲಿ ಸಾಕಷ್ಟು ಸಾವು ನೋವುಗಳಾಗಿದ್ದವು. ಹಾಗಾಗದಂತೆ ಈ ಬಾರಿ ಹೆಚ್ಚಿನ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷ ಸಂಭ್ರಮದಿಂದ ಆಚರಿಸಬೇಕಿತ್ತು, ಆದರೆ ಬದುಕು ಮುಖ್ಯ.
ಕರ್ನಾಟಕ ಸೇರಿ ಎಂಟು ರಾಜ್ಯಗಳಲ್ಲಿ ಕೊರೋನಾ ಏರುಮುಖವಾಗಿದೆ. ಹಾಗಾಗಿ ಸರ್ಕಾರ ಆಚರಣೆಗೆ ಹಲವು ನಿರ್ಬಂಧ ಹಾಕಿದೆ.
ನಿಯಮ ಉಲ್ಲಂಘನೆ ಆದರೆ ಪೊಲೀಸರು ಕ್ರಮ ತಗೋತಾರೆ. ಬೆಂಗಳೂರಿನಲ್ಲೂ ಇವತ್ತು ಸಂಜೆಯಿಂದಲೇ ನಿರ್ಬಂಧ ಇದೆ ಎಂದು ತಿಳಿಸಿದರು.
ಇನ್ನು ಹೊಸ ವರ್ಷಾಚರಣೆ ಸಂಭ್ರಮ ಇರಬೇಕು. ಆದರೆ ಎಂಟು ರಾಜ್ಯಗಳಲ್ಲಿ ಸೋಂಕು ಹೆಚ್ಚಳವಾಗಿದೆ. ಅದೇ ರೀತಿ ರಾಜ್ಯದಲ್ಲೂ ಪ್ರಕರಣ ಹೆಚ್ಚುತ್ತಿವೆ.
ಸಂಭ್ರಮಕ್ಕೆ ನಾವು ಅವಕಾಶ ಕೊಡಬೇಕಿತ್ತು ಆದರೆ ಕಳೆದ ಬಾರಿ ಮಸಣದ ಬದುಕು ಕಂಡುಹಿಂಡಿದ್ದೇವೆ. ಈ ಭಾರಿ ಅಂತಹ ನೋವಿಗೆ ಅವಕಾಶ ಕೊಡಲ್ಲ.
ಹಾಗಾಗಿ ಹೊಸವರ್ಣಾಚರಣೆಗೆ ಅವಕಾಶವಿಲ್ಲ. ಅವರವರ ಮನೆಗಳಲ್ಲಿ ಮಾಡಿಕೊಳ್ಳಬಹುದು. ಗುಂಪುಗೂಡುವುದಕ್ಕೆ ಯಾವುದೇ ಅವಕಾಶವಿಲ್ಲ.
ನಮ್ಮಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಟ್ಟಿದ್ದೇವೆ. ಎಲ್ಲಾ ಕಡೆಯೂ ಸ್ಟ್ರಿಟ್ ಆಕ್ಷ್ಯನ್ ತೆಗೆದುಕೊಂಡಿದ್ದೇವೆ. ಇದು ಬೆಂಗಳೂರಿಗಷ್ಟೇ ಅಲ್ಲ ಎಲ್ಲಾ ಕಡೆಗೆ ಅನ್ವಯಿಸುತ್ತೆ.
ಪಬ್,ಬಾರ್,ರೆಸ್ಟೋರೆಂಟ್ ಗಳಲ್ಲಿ ಅವಕಾಶವಿಲ್ಲ. ಡಿಜೆ ಹಾಕಿ ಕುಣಿಯೋದಕ್ಕೆಅವಕಾಶವಿಲ್ಲ. ಸರಳ ಆಚರಣೆಗೆ ಯಾವುದೇ ನಿರ್ಭಂಧವಿಲ್ಲ. ಆದರೆ ಜನಸಂದಣಿ ಸೇರೋದಕ್ಕೆ ಕಟ್ಟುನಿಟ್ಟು ನಿರ್ಭಂದವಿದೆ ಎಂದು ತಿಳಿಸಿದ್ದಾರೆ.









