Araga Jnanendra : ಟೀಕಿಸುವ ಭರದಲ್ಲಿ ಗುಳಿಗ ದೇವರನ್ನ ನಿಂದಿಸಿದ್ರಾ ಗೃಹ ಸಚಿವರು….
ಗೃಹ ಸಚಿವ ಅರಗ ಜ್ಞಾನೇಂದ್ರ ರಾಜಕೀಯ ಎದುರಾಳಿಗಳನ್ನ ಟೀಕಿಸುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಕರಾವಳಿ ಭಾಗದ ಆರಾಧ್ಯ ದೇವರನ್ನ ನಿಂದಿಸಿ ಟೀಕೆಗೆ ಗುರಿಯಾಗಿದ್ದಾರೆ. ಶಿವಧೂತ ಗುಳಿಗೆ ನಾಟಕ ಪೋಸ್ಟರ್ ವಿಚಾರವಾಗಿ ಈ ಯಡವಟ್ಟು ಮಾಡಿಕೊಂಡಿದ್ದಾರೆ.
ಗೃಹ ಸಚಿವರು ಹಾಗೂ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರರಿಂದ ಗುಳಿಗ ದೈವದ ನಿಂದನೆ. ತೀರ್ಥಹಳ್ಳಿಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದ ಮಾತನಾಡಿದ ಅರಗ ಜ್ಞಾನೇಂದ್ರ “ಇಲ್ಲಿನಾನು ನೋಡಿದೆ. ನಿನ್ನೆಯಿಂದ ಎಂಥದೋ ಗುಳಿಗೆ, ಗುಳಿಗೆ ಅಂತಾ ಹಾಕಿದ್ದಾರೆ. ಬಹಳ ಅಪಾಯ. ಯಾವ ಗುಳಿಗೆ ಕೊಡ್ತಾರೆ ಅಂತಾ ಗೊತ್ತಿಲ್ಲ. ಜಾಪಾಳ್ ಮಾತ್ರೆ ಗುಳಿಗೆ ಕೊಟ್ರು ಕೊಡಬಹುದು. ಏಕೆಂದರೆ, ಇವರು ಹೊಸ ಹೊಸ ನಾಟಕಗಳನ್ನು ಶುರು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಆರಗ ಜ್ಞಾನೇಂದ್ರ.ತೀರ್ಥಹಳ್ಳಿಯಲ್ಲಿ ಹಾಕಿದ್ದ ನಾಟಕದ ಪೋಸ್ಟರ್ ವಿಚಾರವಾಗಿ ಮಾತನಾಡುತ್ತ ಗೃಹಸಚಿವ ಈ ವ್ಯಂಗ್ಯಮಾಡಿದ್ದಾರೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ‘ಶಿವದೂತ ಗುಳಿಗ’ ಎಂಬ ತುಳು ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ತೀರ್ಥಹಳ್ಳಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ನಾಟಕ ನೋಡಲು 10 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ರು. ಈ ನಾಟಕ ಸಂಬಂಧಿತ ಪೋಸ್ಟರ್ ಗಳನ್ನೇ ತೀರ್ಥಹಳ್ಳಿ ಪಟ್ಟಣದಾದ್ಯಂತ ಹಾಕಲಾಗಿತ್ತು. ಈ ಕುರಿತು ಮಾತನಾಡುವಾಗ ಗೃಹಸಚಿವರು ಎಡವಿದಿದ್ದಾರೆ.
Araga Jnanendra: The Home Minister insulted Guliga Deva in his criticism.