ಮತ್ತೆ ವಿದ್ಯುತ್ ಫ್ರೀ ಎಂದ ದೆಹಲಿ ಸಿಎಂ – “ಅಧಿಕಾರಕ್ಕೆ ಬಂದ್ರೆ ಉತ್ತರಾಖಂಡದಲ್ಲೂ ವಿದ್ಯುತ್ ಉಚಿತ”
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಇತ್ತೀಚೆಗೆ ಯುಪಿಯಲ್ಲಿ ಸರ್ಕಾರ ಬಂದ್ರೆ ವಿದ್ಯುತ್ ಉಚಿತವಾಗಿ ನೀಡೋದಾಗಿ ಭರವಸೆ ನೀಡಿದ್ದರು.. ಇದೀಗ ಉತ್ತರಾಖಂಡದಲ್ಲಿಯೂ ಪಕ್ಷವು ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಮಾಸಿಕ 300 ಯೂನಿಟ್ ವಿದ್ಯುತ್, ಬಾಕಿ ವಿದ್ಯುತ್ ಬಿಲ್ ಮನ್ನಾ ಮತ್ತು ಕೃಷಿಕರಿಗೆ ಉಚಿತ ವಿದ್ಯುತ್ ಪೂರೈಸಲಾಗುವುದು ಎಂದು ಹೇಳಿಕೊಂಡಿದ್ದಾರೆ.
ಉತ್ತರಾಖಂಡ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಉತ್ತರಾಖಂಡ ವಿದ್ಯುತ್ ಉತ್ಪಾದಿಸುವುದಷ್ಟೇ ಅಲ್ಲ, ಅನ್ಯ ರಾಜ್ಯಗಳಿಗೂ ಪೂರೈಸಲಿದೆ. ಈ ಕೊಡುಗೆಗಳನ್ನು ದೆಹಲಿಯಲ್ಲಿ ಜಾರಿಗೆ ತರಲು ನಮಗೆ ಆಗುವುದಾದರೆ, ಉತ್ತರಾಖಂಡದಲ್ಲಿ ಏಕಾಗದು ಎಂದು ಕೇಜ್ರಿವಾಲ್ ಅವರು ಪ್ರಶ್ನಿಸಿದ್ದು, ವಿದ್ಯುತ್ ಕಡಿತ ಇರುವುದಿಲ್ಲ. ದೀರ್ಘಾವಧಿ ವಿದ್ಯುತ್ ವ್ಯತ್ಯಯ ಇರುವುದಿಲ್ಲ. ನಮ್ಮ ಪಕ್ಷ ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಾಗ 7–8 ಗಂಟೆ ವ್ಯತ್ಯಯ ಸಾಮಾನ್ಯವಾಗಿತ್ತು.
ಅದನ್ನು ಸರಿಪಡಿಸಿದ್ದೇವೆ’ ಎಂದು ಹೇಳಿದ್ದಾರೆ. ಅಲ್ಲದೇ ಕಳೆದ ವರ್ಷ ದೆಹಲಿಯಲ್ಲಿ 200 ಯೂನಿಟ್ವರೆಗೂ ವಿದ್ಯುತ್ ಬಳಸುವ ಗೃಹ ಸಂಪರ್ಕಗಳಿಗೆ ಶೇ 100ರಷ್ಟು, 201 ರಿಂದ 400 ಯೂನಿಟ್ ಬಳಸುವ ವಿದ್ಯುತ್ಗೆ ಶೇ 50ರಷ್ಟು ಸಬ್ಸಿಡಿಯನ್ನು ಅವರು ಪ್ರಕಟಿಸಿದ್ದರು. ಇದೀಗ ಉತ್ತರಖಂಡದಲ್ಲಿ ಅಧಿಕಾರಕ್ಕೆ ಬಂದ್ರೆ ವಿದ್ಯುತ್ ಫ್ರೀ ಎಂಬ ಭರವಸೆ ನೀಡಿದ್ದಾರೆ.