ನಾವೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ : ಠಾಕ್ರೆಗೆ ಲಿಂಬಾವಳಿ ಎಚ್ಚರಿಕೆ
ರಾಯಚೂರು : ಕರ್ನಾಟಕ ಜನರನ್ನ ಕೆದಕಬೇಡಿ. ನಾವೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಸಚಿವ ಅರವಿಂದ ಲಿಂಬಾವಳಿ ಎಚ್ಚರಿಕೆ ನೀಡಿದ್ದಾರೆ.
ದೇವದುರ್ಗ ತಾಲೂಕಿನ ಗೂಗಲ್ ಅಲ್ಲಮ ಪ್ರಭು ದೇವಾಲಯದ ಬಳಿಯ ಅಭಿವೃದ್ಧಿ ಕಾಮಗಾರಿಗಳ ಪೂಜೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಹ್ಯ ಅಂಗವಾಗಿದೆ. ಉದ್ಧವ್ ಠಾಕ್ರೆ ತಮ್ಮ ಉದ್ಧಟತನದ ಹೇಳಿಕೆಗಳನ್ನ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಉದ್ಧವ್ ಠಾಕ್ರೆ ಪದೇ ಪದೇ ಬೆಳಗಾವಿ ವಿಚಾರ ತೆಗೆದು ತಪ್ಪು ಮಾಡುತ್ತಿದ್ದಾರೆ. ಕರ್ನಾಟಕ ಜನರನ್ನ ಕೆದಕಬೇಡಿ.
ನಾವೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ. ಕನ್ನಡದ ನೆಲ, ಜಲ, ಗಡಿ ವಿಚಾರ ಬಂದಾಗ ನಾವ್ಯಾರೂ ಸುಮ್ಮನೆ ಕುಳಿತುಕೊಂಡ ಜನ ಅಲ್ಲ ಎಂದು ಕಿಡಿಕಾರಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel