ಒಂದು ಬಾರಿ ಚಾರ್ಜ್ 322 ಕಿ.ಮೀ ಮೈಲೇಜ್
ಲಂಡನ್ ಮೂಲದ ಆರ್ಕ್ ವೆಹಿಕಲ್ಸ್ ಕಂಪನಿ ನೂತನ ಆರ್ಕ್ ವೆಕ್ಟರ್ ಎಲೆಕ್ಟ್ರಿಕ್ ಬೈಕ್ ಭಾರಿ ಸಂಚಲನ ಸೃಷ್ಟಿಸಿದೆ.
ಹೈಪರ್ ನೇಕೆಡ್ ಎಲೆಕ್ಟ್ರಿಕ್ ಬೈಕ್, ಹೊಸ ವಿನ್ಯಾಸ, ಹೊಸ ತಂತ್ರಜ್ಞಾನದೊಂದಿಗೆ ಒಂದೇ ನೋಟಕ್ಕೆ ಬೈಕ್ ಪ್ರಿಯರ ಮನಸೂರೆಗೊಳ್ಳಲಿದೆ.
ಈ ಬೈಕ್ ನಲ್ಲಿ 127 hp ಪವರ್ ಎಲೆಕ್ಟ್ರಿಕ್ ಮೋಟಾರ್ ಬಳಸಲಾಗಿದೆ. ಇದು ಗಂಟೆಗೆ ಗರಿಷ್ಠ 200 ಕಿ.ಮೀ ವೇಗದಲ್ಲಿ ಚಲಿಸಬಲ್ಲದು.
ಇನ್ನು ಈ ಎಲೆಕ್ಟ್ರಿಕ್ ಬೈಕ್ 0 ಯಿಂದ 100 ಕಿ.ಮೀ ವೇಗ ತಲುಪಲು 3.2 ಸೆಕೆಂಡ್ ಮಾತ್ರ ತೆಗೆದುಕೊಳ್ಳಲಿದೆ.
ಇದಕ್ಕೆ 16.8-kWh ಬ್ಯಾಟರಿ ಪ್ಯಾಕ್ ಬಳಸಲಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 322 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ವರದಿಯಾಗಿದೆ.
ಈ ಬೈಕ್ ಡಿಸಿ ಫಾಸ್ಟ್ ಚಾರ್ಜಿಂಗ್ ಮೂಲಕ 45 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.
ಸದ್ಯ ಈ ಬೈಕ್ ಲಂಡನ್ನಲ್ಲಿ ಮಾತ್ರ ಲಭ್ಯವಿದೆ. ಇದರ ಬೆಲೆ ಭಾರತೀಯ ರೂಪಾಯಿಗಳಲ್ಲಿ 91 ಲಕ್ಷ ರೂಪಾಯಿ.
ಇದು 2018-19ರಲ್ಲಿ ಬೈಕ್ ಅನಾವರಣದ ವೇಳೆ ಘೋಷಿಸಿದ ಬೆಲೆ.
ಆದರೆ 2022ರಲ್ಲಿ ಈ ಬೆಲೆ ಸರಿಸುಮಾರು 1 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.