ಸರಿಯಾದ ವ್ಯಾಯಾಮದ ಆಯ್ಕೆಯನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ.
ನಿಯಮಿತ ವ್ಯಾಯಾಮವು ಆರೋಗ್ಯವನ್ನು ಉತ್ತಮವಾಗಿ ಸುಧಾರಿಸುತ್ತದೆ, ರೋಗದ ಅಪಾಯಗಳನ್ನು ಕಡಿಮೆ ಮಾಡುತ್ತದೆ ಮತ್ತು ಯೋಗಕ್ಷೇಮದ ವಿವಿಧ ಅಂಶಗಳನ್ನು ಹೆಚ್ಚಿಸುತ್ತದೆ. ನಿಮ್ಮ ಆರೋಗ್ಯಕ್ಕೆ ಸೂಕ್ತವಾದ ವ್ಯಾಯಾಮ ಯಾವುದು ಅಂತ ತಿಳಿಯೋಣ ಬನ್ನಿ
ವಾಕಿಂಗ್
ದೇಹದ ತೂಕ, ಉತ್ತಮ ಚಯಾಪಚಯ, ದೀರ್ಘ ಜೀವಿತಾವಧಿ, ಉತ್ತಮ ನಿದ್ರೆ, ಸೃಜನಶೀಲತೆ ಮತ್ತು ಚಿಂತನೆಯನ್ನು ಸರಿಯಾಗಿ ಕಾಪಾಡಿಕೊಳ್ಳುವುದು ನಿಮ್ಮ ಗುರಿಯಾಗಿದ್ದರೆ, ವಾಕಿಂಗ್ ತುಂಬಾನೇ ಸುಲಭವಾದ ಮತ್ತು ಪರಿಣಾಮಕಾರಿಯಾದ ವ್ಯಾಯಾಮವಾಗಿದೆ.
ನಿಯಮಿತವಾಗಿ ವಾಕಿಂಗ್ ಮಾಡುವ ಜನರು ಹೆಚ್ಚು ಕಾಲ ಬದುಕುತ್ತಾರೆ, ಚೆನ್ನಾಗಿ ನಿದ್ರೆ ಮಾಡುತ್ತಾರೆ ಮತ್ತು ಮಧುಮೇಹ, ಸ್ಥೂಲಕಾಯತೆ, ಹೃದ್ರೋಗ ಸಂಬಂಧಿ ರೋಗಗಳಿಂದ, ಕ್ಯಾನ್ಸರ್ ಮತ್ತು ಇತರ ಹಲವಾರು ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಕಡಿಮೆ ಎಂದು ಅನೇಕ ಅಧ್ಯಯನಗಳು ಹೇಳಿವೆ.
ರನ್ನಿಂಗ್
ನೀವು ಪ್ರತಿದಿನ ಬೆಳಗ್ಗೆ 15 ನಿಮಿಷಗಳ ಕಾಲ ರನ್ನಿಂಗ್ ಮಾಡುವುದರಿಂದ ನಿಮ್ಮ ಹೃದಯದ ಆರೋಗ್ಯ, ಚಯಾಪಚಯ ಕ್ರಿಯೆ, ಮೂಳೆಗಳು ಬಲಗೊಳ್ಳುತ್ತವೆ. ಬೆಳಗ್ಗೆ ಎದ್ದು 15 ನಿಮಿಷಗಳ ಕಾಲ ಓಡುವುದು ಒಂದು ಚುರುಕಿನ ವ್ಯಾಯಾಮವಾಗಿದೆ.
ಅನೇಕ ಅಧ್ಯಯನಗಳು ಸಹ ಪ್ರತಿದಿನ ಐದು ನಿಮಿಷಗಳಷ್ಟು ಓಡುವುದರಿಂದ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇಡೀ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಸೂಚಿಸುತ್ತದೆ. ಪ್ರತಿದಿನ ರನ್ನಿಂಗ್ ಮಾಡುವವರು ಸುಧಾರಿತ ಮೊಣಕಾಲಿನ ಕಾರ್ಟಿಲೆಜ್, ಚುರುಕು ಬುದ್ದಿ ಅನ್ನು ಹೊಂದಿರುತ್ತಾರೆ.
ಸೈಕ್ಲಿಂಗ್
ಸೈಕ್ಲಿಂಗ್ ಮಾಡುವುದರಿಂದ ಮೂಳೆಗಳ ಆರೋಗ್ಯ, ತ್ರಾಣ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಬೆನ್ನು, ಮೊಣಕಾಲು ಅಥವಾ ಸೊಂಟ ಪದೇ ಪದೇ ನೋಯುತ್ತಿದ್ದರೆ, ಸೈಕ್ಲಿಂಗ್ ತುಂಬಾನೇ ಪ್ರಯೋಜನಕಾರಿಯಾಗಿದೆ. ಸೈಕ್ಲಿಂಗ್ ನಿಮ್ಮ ತೊಡೆಯ ಸ್ನಾಯುಗಳು ಮತ್ತು ಕರುಳನ್ನು ಬಲಪಡಿಸಲು ಸಹಾಯ ಮಾಡುತ್ತದೆ
ಸ್ವಿಮ್ಮಿಂಗ್
ಈಜಾಡುವುದು ಮನಸ್ಥಿತಿಯನ್ನು ಸುಧಾರಿಸುತ್ತದೆ, ಅಷ್ಟೇ ಅಲ್ಲದೆ ಗಾಯದಿಂದ ಚೇತರಿಸಿಕೊಳ್ಳುವುದಕ್ಕೆ ಸಹ ಇದು ತುಂಬಾನೇ ಸಹಾಯ ಮಾಡುತ್ತದೆ. ಸ್ವಿಮ್ಮಿಂಗ್ ದೇಹದ ಶಕ್ತಿ ಮತ್ತು ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ. ಇದನ್ನು ಮಾಡುವುದರಿಂದ ದೇಹದಲ್ಲಿನ ನೀರು ಬೆವರಿನ ರೂಪದಲ್ಲಿ ಹೊರ ಹೋಗುವುದರಿಂದ ಇದು ನಿಮ್ಮ ಕೀಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಯೋಗ
ಪ್ರತಿದಿನ ಬೆಳಗ್ಗೆ ಎದ್ದು ಯೋಗ ಮತ್ತು ಧ್ಯಾನ ಮಾಡುವುದು ದೇಹದ ಸಮತೋಲನವನ್ನು ಮತ್ತು ಬೆನ್ನು ನೋವನ್ನು ಕಡಿಮೆ ಮಾಡುತ್ತದೆ. ಯೋಗ ಆಸನಗಳನ್ನು ನಿಧಾನವಾಗಿ ಒಂದೊಂದು ಮಾಡುವುದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯವು ಸುಧಾರಿಸುತ್ತದೆ. ಯೋಗ ಮಾಡುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ