ನಿನ್ನೆ ಇಳಿಕೆ ಕಂಡು ಖುಷಿ ನೀಡಿದ್ದ ಚಿನ್ನದ ದರದಲ್ಲಿ ಇಂದು (ಡಿ.3) ಏರಿಕೆ ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರದಲ್ಲಿ ತಲಾ ₹40 ಮತ್ತು ₹43 ಏರಿಕೆ ಆಗಿದೆ. ಆ ಮೂಲಕ 22 ಕ್ಯಾರಟ್ 1 ಗ್ರಾಂ ಚಿನ್ನದ ದರ *7,130, 10 ಗ್ರಾಂಗೆ ₹71,300 ಆಗಿದೆ ಇನ್ನೂ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹7,778, 10 ಗ್ರಾಂಗೆ ₹77,780 ತಲುಪಿದೆ. ಇತ್ತ ಬೆಳ್ಳಿ ಯಾವುದೇ ಏರಿಕೆ ಇಲ್ಲದೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಬೆಳ್ಳಿ 1 ಗ್ರಾಂನ ಬೆಲೆ ₹91 ಮತ್ತು 1 ಕೆಜಿಗೆ ₹91,000 ಇದೆ.
ಜನನಾಯಕನಿಗೆ ಅಬಕಾರಿ ಇಲಾಖೆಯ ಭಾರವೋ ಅಥವಾ ಸಚಿವ ಸ್ಥಾನದ ಗರ್ವವೋ?ಸಚಿವರಾದ ಮೇಲೆ ಕೈಗೆ ಸಿಗದ ಸಾಹುಕಾರ:ಕೈಗೆ ಸಿಗದ ಶಿವಲಿಂಗೇಗೌಡರ ವಿರುದ್ಧ ಕಾರ್ಯಕರ್ತರು ಕೆಂಡಾಮಂಡಲ!
ಅರಸೀಕೆರೆಯ ಜನಮಾನಸದಲ್ಲಿ ಬೆರೆತು, ಜನರ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುತ್ತಿದ್ದ ಕೆ ಎಂ ಶಿವಲಿಂಗೇಗೌಡರು ಇಂದು ಸಚಿವರಾದ ಮೇಲೆ ಬದಲಾದರೇ ಎಂಬ ಪ್ರಶ್ನೆ ಹಾಸನ ಜಿಲ್ಲೆಯ ರಾಜಕೀಯ...








