ವಾದ-ವಿವಾದ ಮುಗಿದಿದೆ, ಜಡ್ಜ್ ಮೆಂಟ್ ಗೆ ಕಾಯುತ್ತಿದ್ದೇವೆ : ಸಿ.ಪಿ.ಯೋಗೇಶ್ವರ್
ಕಲಬುರಗಿ : ನಾಯಕತ್ವ ವಿಚಾರದಲ್ಲಿ ನಮ್ಮ ಪಕ್ಷದ ವಾದ – ವಿವಾದಗಳೆಲ್ಲ ಮುಗಿದಿದೆ. ಜಡ್ಜ್ಮೆಂಟ್ಗಾಗಿ ಕಾಯುತ್ತಿದ್ದೇವೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಮತ್ತೆ ಸಿಎಂ ಬದಲಾವಣೆ ಕುರಿತಾಗಿ ಹೇಳಿಕೆ ನೀಡಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಈ ವಿಚಾರವಾಗಿ ಮಾತನಾಡಿದ ಸಚಿವ ಸಿ.ಪಿ. ಯೋಗೀಶ್ವರ್, ನಾಯಕತ್ವ ವಿಚಾರದಲ್ಲಿ ನಮ್ಮ ಪಕ್ಷದ ವಾದ – ವಿವಾದಗಳೆಲ್ಲ ಮುಗಿದಿದೆ. ಜಡ್ಜ್ಮೆಂಟ್ಗಾಗಿ ಕಾಯುತ್ತಿದ್ದೇವೆ ಎಂದು ಪುನರುಚ್ಚರಿಸಿದರು.
ಇದೇ ವೇಳೆ ಕಾಂಗ್ರೆಸ್ ವಿಚಾರವಾಗಿ ಮಾತನಾಡಿ, ಈಗ ಕಾಂಗ್ರೆಸ್ನಲ್ಲಿ ನಾಯಕತ್ವದ ಹೋರಾಟ ಶುರುವಾಗಿದೆ.
ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಕೂಗು ಜೋರಾಗಿದೆ. ಸಿದ್ದರಾಮಯ್ಯ ಸಿಎಂ ಆದ ಸಂದರ್ಭದಲ್ಲಿ ದಲಿತ ಸಿಎಂ ಕೂಗು ಇತ್ತು.
ಈಗ ಮತ್ತೆ ಶುರುವಾಗಿದೆ. ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಏನಾಗುತ್ತೆ ನೋಡೋಣ ಎಂದರು.
ಇನ್ನು ಪಾಪ ಶಿವಕುಮಾರ್ ಸಿಎಂ ಆಗುವ ಕನಸು ಕಾಣ್ತಿದ್ದಾರೆ. ಆದರೆ ಸಿದ್ದರಾಮಯ್ಯ ಇರೋವರೆಗೂ ಡಿಕೆಶಿಗೆ ಈ ಅವಕಾಶ ಕೊಡೋದಿಲ್ಲ.
ಡಿ.ಕೆ. ಶಿವಕುಮಾರ್ಗೆ ಶಾಸಕರ ಬೆಂಬಲವೂ ಇದ್ದಂತೆ ಕಾಣ್ತಿಲ್ಲ ಎಂದು ಡಿಕೆಶಿಗೆ ಟಕ್ಕರ್ ಕೊಟ್ಟರು.