#METOO : ಜೆಂಟಲ್ ಮೆನ್ ಅರ್ಜುನ್ ಸರ್ಜಾಗೆ ರಿಲೀಫ್..!

1 min read

#METOO : ಜೆಂಟಲ್ ಮೆನ್ ಅರ್ಜುನ್ ಸರ್ಜಾಗೆ ರಿಲೀಫ್..!

2018 ರಲ್ಲಿ  ಇಡೀ ಭಾರತ ಅದ್ರಲ್ಲೂ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿತ್ತು  #METOO ಪ್ರಕರಣ.. ನಟಿ ಶ್ರುತಿ ಹರಿಹರನ್ ಜೆಂಟಲ್ ಮೆನ್ ಅರ್ಜುನ್ ಸರ್ಜಾ ವಿರುದ್ಧ #METOO ಆರೋಪ ಮಾಡಿ ಚಂದನವನದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ರು..

ಇದೇ ಮೀಟೂ ಪ್ರಕರಣದಲ್ಲಿ ಈಗ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್ ಸಿಕ್ಕಿದೆ.

ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟನ್ನು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಅಂಗೀಕರಿಸಿದೆ. ಅರ್ಜುನ್ ಸರ್ಜಾ ವಿರುದ್ಧ ಅಷ್ಟೆಲ್ಲಾ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಕೂಡ ಪೊಲೀಸರ ಬಿ ರಿಪೋರ್ಟ್‍ಗೆ ಆಕ್ಷೇಪಣೆ ಸಲ್ಲಿಸಿಲ್ಲ. ಹೀಗಾಗಿ ಕೋರ್ಟ್ ಬಿ-ರಿಪೋರ್ಟ್ ಅಂಗೀಕರಿಸಿದೆ.

2018ರಲ್ಲಿ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮೀಟೂ ಕೇಸ್ ದಾಖಲಿಸಿದ್ದರು. ಆದ್ರೆ, ನಟಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ಸೂಕ್ತ ಸಾಕ್ಷಾಧಾರಗಳು ಸಿಗದ ಹಿನ್ನೆಲೆ, ಪೊಲೀಸ್ರು ಕೋರ್ಟ್‍ಗೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಈ , ಮೂಲಕ ಅರ್ಜುನ್ ಸರ್ಜಾ ಅವರಿಗೆ ಜಯ ಸಿಕ್ಕಿದೆ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd