ಅಬುಜಾ: ಸೇನೆಯ ಡ್ರೋನ್ ಗುರಿ ತಪ್ಪಿದ ಪರಿಣಾಮ 85 ಜನ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಾಯುವ್ಯ ನೈಜೀರಿಯಾದ(Nigeria) ಕಡುನಾ ರಾಜ್ಯದ ತುಡುನ್ ಬಿರಿ ಗ್ರಾಮದ ಹತ್ತಿರ ಸೇನೆಯ ಗುರಿ ತಪ್ಪಿ ಡ್ರೋನ್ ನಾಗರಿಕರ ಸಾವಿಗೆ ಕಾರಣವಾಗಿದೆ. ಈ ದಾಳಿಯ ಕುರಿತು ತನಿಖೆ ನಡೆಸಲು ನೈಜೀರಿಯಾ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.
ಈ ದಾಳಿಯಲ್ಲಿ 85 ಜನ ಸಾವನ್ನಪ್ಪಿ, 66 ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ದಾಳಿಯಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ದಾಳಿಯ ಘಟನೆಗಳು ದೇಶದಲ್ಲಿ ಆತಂಕಕಾರಿ ಆಯಾಮ ಪಡೆದುಕೊಳ್ಳುತ್ತಿದೆ ಎಂದು ನೈಜೀರಿಯಾದ ಮಾಜಿ ಉಪಾಧ್ಯಕ್ಷ ಮತ್ತು ಈ ವರ್ಷದ ಚುನಾವಣೆಯಲ್ಲಿ ಪ್ರಮುಖ ವಿಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಅತಿಕು ಅಬುಬಕರ್ ಹೇಳಿದ್ದಾರೆ.