ಬೆಳ್ಳಂ ಬೆಳಿಗ್ಗೆ 3 ಭಯೋತ್ಪಾದಕರನ್ನು ಹತ್ಯೆ ಮಾಡಿದ ಸೇನೆ – Saaksha Tv
ಜಮ್ಮು&ಕಾಶ್ಮೀರ: ಇಂದು ಬೆಳ್ಳಂ ಬೆಳಿಗ್ಗೆ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸ್ ತಿಳಿಸಿದೆ.
ಕಾಶ್ಮೀರದ ನೌಗಾಮ್‌ನ ಶಂಕರಪುರ ಪ್ರದೇಶದಲ್ಲಿ ಅಡಗಿರುವ ಉಗ್ರರ ಬಗ್ಗೆ ವಿಶ್ವಾಸಾರ್ಹ ಮೂಲಗಳ ಮಾಹಿತಿ ಆಧಾರದಲ್ಲಿ ಭದ್ರತಾ ಪಡೆಗಳು ಸುತ್ತುವರೆದಾಗ ಅಡಗಿಕೊಂಡಿದ್ದ ಉಗ್ರರು ಗುಂಡು ಹಾರಿಸಲು ಆರಂಭಿಸಿದರು. ಪ್ರತಿದಾಳಿ ನಡೆಸಿದ ಸೇನೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸ್ ಟ್ವೀಟ್ ಮಾಡಿದ್ದಾರೆ.
#SrinagarEncounterUpdate: 02 more #terrorists killed (Total 03). #Incriminating materials including arms & ammunition recovered. Search going on. Further details shall follow.@JmuKmrPolice https://t.co/N0TrIUOiAN
— Kashmir Zone Police (@KashmirPolice) March 16, 2022
ಉಗ್ರರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ದೋಷಾರೋಪಣೆಯ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಾರ್ಯಾಚರಣೆ ಮುಂದುವೆರೆದಿದೆ ಎಂದು ಹೇಳಿದ್ದಾರೆ.
ನಿನ್ನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದ ಚಾರ್ಸೋ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ಸ್ಥಳೀಯ ಉಗ್ರ ಹತನಾಗಿದ್ದ.