ಮೀನುಗಾರರ ಬಲೆಗೆ ಬಿದ್ದ 250 ಕೆ. ಜಿ ಮೀನು – Saaksha Tv
ಉಡುಪಿ: ಸುಮಾರು 250 ಕೆ. ಜಿಯ ಗರಗಸ ಮೀನು ಮಲ್ಪೆ ಬಂದರಿನಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ.
ಬಲೆಗೆ ಬಿದ್ದ ಸುಮಾರು 250 ಕೆ.ಜಿಯ ಈ ಮೀನನ್ನು ಬೋಟಿನಲ್ಲಿ ಬಂದರಿಗೆ ತರಲಾಗಿತ್ತು. ನಂತರ ಅಲ್ಲಿಂದ ಕ್ರೇನ್ ಮೂಲಕ ಎತ್ತಲಾಯಿತು. ಬಳಿಕ ಲಾರಿ ಮೂಲಕ ಮಂಗಳೂರಿಗೆ ಸಾಗಿಸಲಾಯಿತು. ಮೀನಿನ ಮುಖದ ಭಾಗದಲ್ಲಿ ಗರಗಸದಂತೆ ಹೋಲುವ ಉದ್ದದ ಅಲಗು ಇದೆ. ಇದನ್ನು ನೋಡಲು ಜನಸಾಗರವೇ ಸೇರಿತ್ತು.
ಈ ಅಪರೂಪದ ಮೀನುಗಳು ಆಳ ಸಮುದ್ರದಲ್ಲಿ ಮಾತ್ರ ಇರುತ್ತವೆ. ಸದ್ಯ ಈ ಮೀನುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಅಳಿವಿನಂಚಿನಲ್ಲಿರುವ ಸಂತತಿ ಎಂದು ಹೇಳಲಾಗುತ್ತಿದೆ. ಶಾರ್ಕ್ ಜಾತಿಯ ಮೀನುಗಳಲ್ಲಿ ಇದು ಕೂಡ ಒಂದಾಗಿದ್ದು, ನೋಡಲು ತುಂಬಾನೇ ಆಕರ್ಷಕವಾಗಿರುತ್ತವೆ.
ಇದನ್ನು ಇಂಗ್ಲಿಷ್ ನಲ್ಲಿ ಕಾರ್ಪೆಂಟರ್ ಶಾರ್ಕ್ ಎಂದು ಕರೆಯಲಾಗುತ್ತಿದೆ. ಹಲವು ಇದರ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಇದೀಗ ಅವುಗಳು ವೈರಲ್ ಆಗಿವೆ.