ಬೆಳಗಾವಿ : ಬೆಳಗಾವಿ ಸೈಬರ್ ಕ್ರೈಮ್ ಪೊಲೀಸರು ನಕಲಿ ಜ್ಯೋತಿಷಿಯನ್ನ ಅರೇಸ್ಟ್ ಮಾಡಿದ್ದಾರೆ. ಹೋಮ, ಅಭಿಷೇಕ ಮಾಡಿಸಿದ್ರೆ ಸಂಕಷ್ಟ ಪರಿಹಾರ ಆಗುತ್ತೆ, ಸಂತಾನ ಭಾಗ್ಯ, ನೌಕರಿ ಭಾಗ್ಯ ದೊರೆಯುತ್ತದೆ ಎಂದು ಮಹಿಳೆಯರಿಗೆ ನಂಬಿಸಿ ವಂಚನೆ ಮಾಡಿರುವ ಆರೋಪ ಈತನ ಮೇಲಿದೆ..
ದಿನಪತ್ರಿಕೆಯಲ್ಲಿ ರಾಮ ಭಟ್ ಜ್ಯೋತಿಷಿ ಅಂತಾ ಪ್ಯಾಂಪ್ಲೆಟ್ ಹಾಕಿ ವಂಚಿಸುತ್ತಿದ್ದ ಎನ್ನಲಾಗಿದೆ. ಬೆಳಗಾವಿ ಇಬ್ಬರು ಮಹಿಳೆಯಿಂದ 70 ಸಾವಿರಕ್ಕೂ ಅಧಿಕ ಹಣ ಸುಲಿಗೆ ಮಾಡಿ , ಹಣ ಸಿಕ್ಕ ನಂತರ ಆ ಮಹಿಳೆಯರನ್ನ ಬ್ಲಾಕ್ ಮಾಡಿದ್ದ ಎನ್ನಲಾಗಿದೆ..
ರಾಯಚೂರು ಮೂಲದ ನಕಲಿ ಜ್ಯೋತಿಷಿ ಬಸವರಾಜ ಬುಡಬುಡಕೇರ ಅರೇಸ್ಟ್ ಆಗಿದ್ದನೆ.. ಈತನ ಮೊಬೈಲ್, ಅಕೌಂಟ್ ನಲ್ಲಿ ಇದ್ದ 4 ಲಕ್ಷ ರುಪಾಯಿ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ..