ಗೋವಿಗೆ ಗುಂಡಿಕ್ಕಿ ಸಾಯಿಸಿದ್ದ ದುಷ್ಟರ ಬಂಧನ madikeri
ಮಡಿಕೇರಿ : ಗೋವಿಗೆ ಗುಂಡಿಟ್ಟು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕುಂಜಿಲ ಗ್ರಾಮದ ಮಹಮ್ಮದ್ ಜಾಬೀರ್(27), ಅಬ್ದುಲ್ ಸಲಾಂ(45), ಸಿಯಾಬ್ ಪಿ.ಎ. (29), ಮಹಮ್ಮದ್ ಪಿ.ಎ (26), ಬಂಧಿತ ಆರೋಪಿಗಳಾಗಿದ್ದಾರೆ.
ಇವರು ಗೋವಿಗೆ ಗುಂಡಿಕ್ಕಿ ಸಾಯಿಸಿ, ತಡೆಯಲು ಹೋದವರಿಗೆ ಕೋವಿ ತೋರಿಸಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ವ್ಯಾಪಕ ವಿರೋಧವ್ಯಕ್ತವಾಗಿತ್ತು. ಇದೀಗ ಪೆÇಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾವೃತ್ತ ನಿರೀಕ್ಷಕ ರವಿಕಿರಣ್, ಸಿಬ್ಬಂದಿ ಸದಾಶಿವ, ದಿನೇಶ್, ಶಜನ್, ಕೃಷ್ಣಮೂರ್ತಿ, ಮಂಜು, ಚಾಲಕ ಪ್ರವೀಣ್ ಪಾಲ್ಗೊಂಡಿದ್ದರು.









