Arun kumar kalgadde: ದೌರ್ಜನ್ಯಕ್ಕೆ ಒಳಗಾದ ಉದ್ಯೋಗಿಯನ್ನ ರಕ್ಷಿಸಿದ ಅರುಣ್ ಕುಮಾರ್
ಬೆಂಗಳೂರಿನ ಕತ್ರಗುಪ್ಪೆಯ ನಿವಾಸಿಯೊಬ್ಬರು ಪ್ರತಿಷ್ಟಿತ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ರು. ಬ್ಯಾಂಕ್ ಲೋನ್ ಪಡೆದು ಕಟ್ಟದೇ ಬ್ಯಾಂಕ್ ಗೆ ನಷ್ಟ ಉಂಟುಮಾಡಿದ ಹಿನ್ನಲೆ ಗೂಡ್ಸ್ ಲಾರಿ ಸೀಜ್ ಮಾಡಲು ಈ ವ್ಯಕ್ತಿ ಹೋಗಿದ್ರು. ಹಣ ಕಟ್ಟದೇ ಕಾಲಹರಣ ಮಾಡುತ್ತಿದ್ದ ಮಾಲೀಕನಿಗೆ ಗಾಡಿ ಸೀಜ್ ನೋಟಿಸ್‌ಕೊಟ್ಟು ಸೀಜ್ ಮಾಡಲು ಆ ವ್ಯಕ್ತಿ ಮುಂದಾಗಿದ್ರು. ಆಗ ಗಾಡಿಯ ಮಾಲೀಕ ಪೊಲೀಸರಿಗೆ ಸುಳ್ಳು ಹೇಳಿ ಬ್ಯಾಂಕ್ ಉದ್ಯೋಗಿಯನ್ನ ಅರೆಸ್ಟ್ ಮಾಡಿಸಿದ್ರು. ಅಲ್ಲದೇ ಆತನ ಮೇಲೆ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ನಡೆಸಲಾಗಿತ್ತು.
ಈ ಉದ್ಯೋಗಿಯ ಕುಟುಂಬ ಮಾನವ ಹಕ್ಕುಗಳ ಹೋರಾಟಗಾರ ಅರುಣ್ ಕುಮಾರ್ ಕಲ್ಗದ್ದೆಯವರನ್ನ ಸಂಪರ್ಕಿಸಿತು. ಮಾನವೀಯತೆ ಮೆರೆದ ಅರುಣ್ ಕುಮಾರ್ ಕುಮಾರ್ ತಕ್ಷಣವೇ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಅಮಾಯಕ ಬ್ಯಾಂಕ್ ಉದ್ಯೋಗಿ ರಿಲೀಸ್ ಆಗುವಂತೆ ನೋಡಿಕೊಂಡರು. ಈ ಕುಟುಂಬ ಈಗಲೂ ಅರುಣ್ ಕುಮಾರ್ ಅವರ ಸಹಾಯವನ್ನು ಸ್ಮರಿಸುತ್ತಿದೆ. ಅಲ್ಲದೇ ಮಾನವೀಯ ಕೆಲಸಕ್ಕೆ ಸ್ಥಳೀಯರಿಂದಲೂ ಪ್ರಶಂಸೆ ಬಂದಿದೆ.
Arun kumar kalgadde: Arun kumar saved the employee who was assaulted








